
ಗರಿಷ್ಠ ರನ್ ದಾಖಲೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವನ್ನು ಪ್ರತಿನಿಧಿಸಿದ್ದ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಯ್ಲ್ 2013, ಏಪ್ರಿಲ್ 23 ರಂದು ಪುಣೆ ವಾರಿಯರ್ಸ್ ವಿರುದ್ಧ ಅಜೇಯ 175 ರನ್ ಗಳಿಸುವ ಮೂಲಕ 2008 ರ ಬ್ರೆಂಡನ್ ಮೆಕಲಂ (158* ರನ್) ದಾಖಲೆಯನ್ನು ಮುರಿದಿದ್ದರು. ಇದು ಆಟಗಾರನೊಬ್ಬನ ಇದುವರೆಗಿನ ವೈಯಕ್ತಿಕ ಗರಿಷ್ಠ ಮೊತ್ತವಾಗಿದ್ದು, ಈ ಬಾರಿಯ ಐಪಿಎಲ್ ನಲ್ಲಿ ಗೇಯ್ಲ್ ದಾಖಲೆಯನ್ನು ಯಾರಾದರೂ ಮುರಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಹದಿನೇಳು ಸಿಕ್ಸ್ ಗಳ ಒಡೆಯ ಗೇಯ್ಲ್
ಇನ್ನಿಂಗ್ಸ್ ಒಂದರಲ್ಲಿ 17 ಸಿಕ್ಸ್ ಗಳಿಸಿದ ದಾಖಲೆಯೂ ಕ್ರಿಸ್ ಗೇಯ್ಲ್ ಹೆಸರಿನಲ್ಲಿದೆ. ಅಜೇಯ 175 ರನ್ ಗಳಿಸಿದ ಪಂದ್ಯ(2013)ದಲ್ಲೇ ಗೇಯ್ಲ್ ಗರಿಷ್ಠ ಸಿಕ್ಸ್ ದಾಖಲೆ ಬರೆದಿದ್ದರು.[ಏಪ್ರಿಲ್ 05ರಿಂದ ಚಾಂಪಿಯನ್ಸ್ ಟ್ರೋಫಿ ಟಿಕೆಟ್ ಸೇಲ್ ಶುರು!]

ತಂಡವೊಂದರ ಗರಿಷ್ಠ ಮೊತ್ತ
2013ರಲ್ಲಿ ಇದೇ ಪಂದ್ಯದಲ್ಲೇ ಗೇಯ್ಲ್ ಅವರ ಅಜೇಯ ಶತಕದ ನೆರವಿನಿಂದಲೇ ಆರ್ ಸಿಬಿ 5 ವಿಕೆಟ್ ಗೆ 263 ರನ್ ಗಳಿಸಿ, ಇನ್ನಿಂಗ್ಸ್ ವೊಂದರಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಮೊತ್ತದ ದಾಖಲೆ ಬರೆಯಿತು. ಇಂದಿಗೂ ಈ ದಾಖಲೆಯನ್ನು ಮುರಿಯಲು ಯಾವ ತಂಡಕ್ಕೂ ಸಾಧ್ಯವಾಗಿಲ್ಲ.[10 ನೇ ಐಪಿಎಲ್ ಗೆ 8 ಕಡೆಗಳಲ್ಲಿ ಆರಂಭೋತ್ಸವ]

ಕೋಹ್ಲಿ ಹೆಸರಲ್ಲೂ ದಾಖಲೆ
ಕಳೆದ ಆವೃತ್ತಿ (2016)ಯಲ್ಲಿ ವಿರಾಟ್ ಕೋಹ್ಲಿ ಗಳಿಸಿದ ಒಟ್ಟು ಮೊತ್ತ 973 ರನ್. ಇದು ಐಪಿಎಲ್ ಆವೃತ್ತಿಯೊಂದರಲ್ಲಿ ಆಟಗಾರನೊಬ್ಬ ಗಳಿಸಿದ ವೈಯಯಕ್ತಿಕ ಗರಿಷ್ಠ ಮೊತ್ತ. ಒಟ್ಟು 16 ಇನ್ನಿಂಗ್ಸ್ ಗಳಲ್ಲಿ 4 ಶತಕ ಮತ್ತು 7 ಅರ್ಧಶತಕಗಳನ್ನು ಭಾರಿಸಿರುವ ಕೋಹ್ಲಿ ಈ ಸಾಧನೆ ಮಾಡಿದ್ದಾರೆ.[ಈ ಬಾರಿ ತುಮಕೂರಲ್ಲಿ ಐಪಿಎಲ್ ನೋಡುವ ಮಜಾನೇ ಬೇರೆ!]

ಶತಕಗಳ ಸರದಾರ ಕೋಹ್ಲಿ
ಆವೃತ್ತಿಯೊಂದರಲ್ಲಿ 4 ಶತಕಗಳನ್ನು ಬಾರಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೂ ಕೋಹ್ಲಿ ಪಾತ್ರರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ(2016) ಆರ್ ಸಿಬಿ ಪರ ಕೋಹ್ಲಿ ಈ ಸಾಧನೆ ಮಾಡಿದ್ದರು.

ಸೊಹಾಲಿ ದಾಖಲೆ ಮುರಿದವರಿಲ್ಲ
ಐಪಿಎಲ್ ನ ಮೊದಲ ಆವೃತ್ತಿ (2008) ಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ ಪಾಕಿಸ್ಥಾನಿ ಬೌಲರ್ ಸೊಹಾಲಿ ತನ್ವಿರ್ 14 ರನ್ ನೀಡಿ 6 ವಿಕೆಟ್ ಪಡೆದಿದ್ದು, ಬೌಲರ್ ಒಬ್ಬರ ವೈಯಕ್ತಿಕ ಗರಿಷ್ಠ ಸಾಧನೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅವರು ಈ ಸಾಧನೆ ಮಾಡಿದ್ದರು.[ಐಪಿಎಲ್ 10 : ಎಲ್ಲೆಲ್ಲಿ ನೋಡಬಹುದು? ಯಾವ ವೆಬ್ ಸೈಟಿನಲ್ಲಿ ಬರುತ್ತೆ?]

ಜೊತೆಯಾಟದ ಸಾಧನೆ
2016ರ ಆವೃತ್ತಿಯಲ್ಲಿ ಆರ್ ಸಿಬಿ ಪರ ವಿರಾಟ್ ಕೋಹ್ಲಿ ಮತ್ತು ಎ ಬಿ ಡಿವಿಲಿಯರ್ಸ್ ಗುಜರಾತ್ ಲೈಯನ್ಸ್ ವಿರುದ್ಧ ಎರಡನೇ ವಿಕೆಟ್ ಗೆ 229 ರನ್ ಜೊತೆಯಾಟದ ಸಾಧನೆ ಮಾಡಿದ್ದು ಇದುವರೆಗಿನ ದಾಖಲೆಯಾಗಿದೆ. ಈ ಪಂದ್ಯದಲ್ಲಿ ಕೋಹ್ಲಿ(109) ಮತ್ತು ಡಿವಿಲಿಯರ್ಸ್(129*) ಇಬ್ಬರೂ ಶತಕದ ಸಾಧನೆ ಮಾಡಿದ್ದರು.

ಗರಿಷ್ಠ ವಿಕೆಟ್ ಸಾಧನೆ
2013 ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಡ್ವಾಯ್ನ್ ಬ್ರಾವೋ ಆವೃತ್ತಿಯೊಂದರಲ್ಲಿ ಗಳಿಸಿದ 32 ವಿಕೆಟ್, ಬೌಲರ್ ವೊಬ್ಬ ಗಳಿಸಿದ ಗರಿಷ್ಠ ವಿಕೆಟ್ ಸಾಧನೆಯಾಗಿದೆ.[ಸರ್ಫರಾಜ್ ಖಾನ್ ಕೂಡಾ ಔಟ್, ಆರ್ ಸಿಬಿಗೆ ಆಘಾತವೋ ಆಘಾತ!]

ಬೌಂಡರಿಗಳ ಒಡೆಯರು ಇಬ್ಬರು
ಆರ್ ಸಿಬಿ ಆಟಗಾರ ಡಿವಿಲಿಯರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 2015 ರಲ್ಲಿ ಪಂದ್ಯವೊಂದರಲ್ಲಿ ಗಳಿಸಿದ 19 ಬೌಂಡರಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಪೌಲ್ ವಾಲ್ತಟಿ 2011 ರಲ್ಲಿ ಸಿ ಎಸ್ ಕೆ ತಂಡದ ವಿರುದ್ಧ ಗಳಿಸಿದ 19 ಬೌಂಡರಿ ಇದುವರೆಗೆ ಪಂದ್ಯವೊಂದರಲ್ಲಿ ಆಟಗಾರರು ಗಳಿಸಿದ ಗರಿಷ್ಠ ಬೌಂಡರಿಯ ಸಾಧನೆಯಾಗಿದೆ.

ವೇಗದ ಶತಕದ ಸರದಾರ
2013 ರ ಆವೃತ್ತಿಯಲ್ಲಿ ಕ್ರಿಸ್ ಗೇಯ್ಲ್ 30 ಎಸೆತ ಎದುರಿಸಿ ಶತಕ ಪೂರೈಸಿದ್ದು, ಇದುವರೆಗಿನ ವೇಗದ ಶತಕ ಗಳಿಕೆಯ ದಾಖಲೆಯಾಗಿದೆ. ಈ ಪಂದ್ಯದಲ್ಲಿ 66 ಎಸೆತಗಳನ್ನು ಎದುರಿಸಿದ ಗೇಯ್ಲ್ ಅಜೇಯ 175 ರನ್ ಗಳಿಸಿದ್ದರು.


Click it and Unblock the Notifications











