For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಟಾಪ್ 10 ವೈಯಕ್ತಿಕ ಸ್ಕೋರರ್, ಗೇಲ್ ನಿಂದ ಸೈಮಂಡ್ ತನಕ

ಐಪಿಎಲ್ ಚುಟುಕು ಕ್ರಿಕೆಟ್ ನಲ್ಲಿ ಬೌಲರ್ ಗಳಿಗಿಂತ ಬ್ಯಾಟ್ಸ್ ಮನ್ ಗಳೇ ಹೆಚ್ಚು ಮಿಂಚಿದ್ದಾರೆ. 10ನೇ ಐಪಿಎಲ್ ಜಾರಿಯಲ್ಲಿರುವ ಸಂದರ್ಭದಲ್ಲಿ ಟಾಪ್ 10 ವೈಯಕ್ತಿಕ ರನ್ ಗಳಿಕೆ ವೀರರ ವಿವರ ಮುಂದಿದೆ.

By Mahesh

ಬೆಂಗಳೂರು, ಏಪ್ರಿಲ್ 18: ಹಣದ ಹೊಳೆ ಜತೆಗೆ ರನ್ ಮಳೆ ಸುರಿಸುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ 20 ಕದನಕ್ಕೆ ಈಗ 10ರ ಹರೆಯ. ಈ ಚುಟುಕು ಕ್ರಿಕೆಟ್ ನಲ್ಲಿ ಬೌಲರ್ ಗಳಿಗಿಂತ ಬ್ಯಾಟ್ಸ್ ಮನ್ ಗಳೇ ಹೆಚ್ಚು ಮಿಂಚಿದ್ದಾರೆ. 10ನೇ ಐಪಿಎಲ್ ಜಾರಿಯಲ್ಲಿರುವ ಸಂದರ್ಭದಲ್ಲಿ ಟಾಪ್ 10 ವೈಯಕ್ತಿಕ ರನ್ ಗಳಿಕೆ ವೀರರ ವಿವರ ಮುಂದಿದೆ.

ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್, ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಅಲ್ಲದೆ ಭಾರತ ದೆಹಲಿ ಸರದಾರ ವೀರೇಂದರ್ ಸೆಹ್ವಾಗ್ ಅವರು ವೈಯಕ್ತಿಕ ಸಾಧನೆ ಪಟ್ಟಿಯಲ್ಲಿ ಎದ್ದು ಕಾಣುತ್ತಾರೆ.

20 ಓವರ್ ಗಳ ಪಂದ್ಯದಲ್ಲಿ ಅರ್ಧಶತಕ ಬಾರಿಸುವುದೇ ದೊಡ್ಡ ವಿಷಯ ಎನ್ನುವ ಕಾಲ ಈಗ ಹೋಗಿದೆ. ತ್ವರಿತ ಗತಿ ಶತಕ ಸಿಡಿಸುವುದು ಮಾಮೂಲಾಗಿದೆ. ಆದರೆ, 2008ರಲ್ಲಿ ಐಪಿಎಲ್ ಗೆ ಕಿಚ್ಚು ಹಚ್ಚಿದ್ದು ಬ್ರೆಂಡನ್ ಮೆಕಲಮ್.

ಆಗ ಕೆಕೆಆರ್ ಪರ ಆಡುತ್ತಿದ್ದ ಮೆಕಲಮ್ ಅವರು ಆರ್ ಸಿಬಿ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 158ರನ್ ಹೊಡೆದು ಅಜೇಯರಾಗಿ ಉಳಿದಿದ್ದರು. ನಂತರ ಈ ದಾಖಲೆಯನ್ನು ವೆಸ್ಟ್ ಇಂಡೀಸ್ ನ ದೈತ್ಯ ಕ್ರಿಸ್ ಗೇಲ್ ಅವರು 2013ರಲ್ಲಿ ಮುರಿದು ಅಜೇಯ 175ರನ್ ಗಳಿಸಿದರು. ಈ ದಾಖಲೆ ಇನ್ನೂ ಯಾರೂ ಮುರಿದಿಲ್ಲ.

IPL 10: Chris Gayle to Andrew Symonds - Here are top 10 scores

10ನೇ ಐಪಿಎಲ್ ಜಾರಿಯಲ್ಲಿರುವ ಸಂದರ್ಭದಲ್ಲಿ (ಏಪ್ರಿಲ್ 17, 2017 ಅನ್ವಯ) ಟಾಪ್ 10 ವೈಯಕ್ತಿಕ ರನ್ ಗಳಿಕೆ ವೀರರ ವಿವರ ಮುಂದಿದೆ.

1. ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 175 ಅಜೇಯ (66 ಎಸೆತ, 13x4, 17x6) vs ಪುಣೆ ವಾರಿಯರ್ಸ್, ಬೆಂಗಳೂರು, 2013, 265.15 ಸ್ಟ್ರೈಕ್ ರೇಟ್.

2. ಬ್ರೆಂಡನ್ ಮೆಕಲಮ್ (ಕೆಕೆಆರ್)-ಅಜೇಯ 158(73ಎಸೆತ, 10x4s, 13x6s) vs ಆರ್ ಸಿಬಿ, ಬೆಂಗಳೂರು, 2008,SR 216.43.

3. ಎಬಿ ಡಿವಿಲಿಯರ್ಸ್ (ಆರ್ ಸಿಬಿ) : 133 ಅಜೇಯ (59 ಎಸೆತಗಳು, 19x4, 4x6)vs ಮುಂಬೈ ಇಂಡಿಯನ್ಸ್, ಮುಂಬೈ, ಮೇ 10, 2015
4. ಎಬಿ ಡಿ ವಿಲಿಯರ್ಸ್ (ಆರ್ ಸಿಬಿ) : 129 ಅಜೇಯ (52 ಎಸೆತಗಳು, 10x4, 12x6) Vs ಗುಜರಾತ್ ಲಯನ್ಸ್(GL), ಬೆಂಗಳೂರು,ಮೇ 14, 2016

5. ಕ್ರಿಸ್ ಗೇಲ್- ಅಜೇಯ 128 (62 ಎ, 7x4s, 13x6s), SR 206.45, vs ಡೆಲ್ಲಿ ಡೇರ್ ಡೆವಿಲ್ಸ್, ದೆಹಲಿ, 2012

6. ಮುರಳಿ ವಿಜಯ್ -127(56ಎ, (8x4s, 11x6s) SR 226.78 vs ಆರ್ ಸಿಬಿ, ಚೆನ್ನೈ, 2010.

7. ವಿರೇಂದರ್ ಸೆಹ್ವಾಗ್- 122ರನ್ (58 ಎ, 12x4s, 8x6s)SR 210.34 vs ಸಿಎಸ್ ಕೆ, ಮುಂಬೈ, 2014.
8. ಪಾಲ್ ವಲ್ತಾಟಿ -ಅಜೇಯ 120 (63ಎ, 19x4s, 2x6s) SR 190.47 vs ಸಿಎಸ್ ಕೆ, ಮೊಹಾಲಿ, 2011

9. ವಿರೇಂದರ್ ಸೆಹ್ವಾಗ್-119 (56ಎ,13x4s, 6x6s) SR 212.50 vs ಡೆಕ್ಕನ್ ಚಾರ್ಜರ್ಸ್, ಹೈದರಾಬಾದ್, 2011.
10. ಆಂಡ್ರ್ಯೂ ಸೈಮಂಡ್ಸ್- ಅಜೇಯ 117(53ಎ,11x4s, 7x6s) SR 220.75 vs ಆರ್ ಸಿಬಿ, ಹೈದರಾಬಾದ್, 2008. (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+