ಮುಂಬೈ, ಅ.18: ಭ್ರಷ್ಟಾಚಾರ, ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಹಗರಣಕ್ಕೆ ತುತ್ತಾಗಿ ಕಪ್ಪುಮಸಿ ಹಚ್ಚಿಕೊಂಡಿರುವ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಮುಂದಿನ ಅವೃತ್ತಿಯಲ್ಲಿ ಶುಭ್ರವಾಗಿ ಕಣಕ್ಕಿಳಿಯಲಿದೆ.
2016ರ ಐಪಿಎಲ್ 9ರಲ್ಲಿ ಚೆನ್ನೈ, ರಾಜಸ್ಥಾನ ತಂಡಗಳ ಬದಲಿಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಗೊಳ್ಳಲಿವೆ. ಹೀಗಾಗಿ ಐಪಿಎಲ್ ನಲ್ಲಿ ಎಂದಿನಂತೆ 8 ತಂಡಗಳು ಸ್ಪರ್ಧಿಸಲಿವೆ ಎಂದು ಬಿಸಿಸಿಐ ಭಾನುವಾರ ಪ್ರಕಟಿಸಿದೆ. [ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]
6 ತಂಡಗಳೊಂದಿಗೆ ಟೂರ್ನಿ ಎಂದಿಗೂ ನಡೆಸುವುದಿಲ್ಲ, 8 ತಂಡಗಳು ಆಡಲಿವೆ ಎಂದು ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಅವರು ಜುಲೈ ತಿಂಗಳಿನಲ್ಲಿ ಹೇಳಿದ್ದರು. ಭಾನುವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯಕಾರಿ ಸಭೆಯಲ್ಲಿ ಐಪಿಎಲ್ 9 ಟ್ವೆಂಟಿ 20 ಟೂರ್ನಿ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.[ಪೆಪ್ಸಿ ಬದಲಿಗೆ ವಿವೋ ಐಪಿಎಲ್: ಬಿಸಿಸಿಐ ನಿರ್ಣಯಗಳು]

ಚೆನ್ನೈ ಹಾಗೂ ರಾಜಸ್ಥಾನ ತಂಡಗಳ ಮೇಲಿನ ನಿಷೇಧ ಮುಂದುವರೆಯಲಿದೆ. ಅದರೆ, ಅಮಾನತು ಆದೇಶ ಹಿಂಪಡೆಯಲಾಗಿದೆ. ಹೀಗಾಗಿ ಮುಂದಿನ ಎರಡು ವರ್ಷಗಳ ಐಪಿಎಲ್ ನಲ್ಲಿ ಭಾಗವಹಿಸುವಂತಿಲ್ಲ. 2018ರಲ್ಲಿ ಅದೇ ಹೆಸರಿನಲ್ಲಿ ಸ್ಪರ್ಧೆಗಿಳಿಯ ಬಹುದಾಗಿದೆ. ಆಗ ಐಪಿಎಲ್ ನಲ್ಲಿ 10 ತಂಡಗಳಿರುತ್ತದೆ ಎಂದು ಬಿಸಿಸಿಐ ಪ್ರಕಟಿಸಿದೆ. [ಅಮಾನತುಗೊಂಡರೂ ಚೆನ್ನೈ, ರಾಜಸ್ಥಾನ ಐಪಿಎಲ್ ನಲ್ಲಿ ಆಡ್ಬಹುದು!]
ಜುಲೈ 14 ರ ಮಧ್ಯಾಹ್ನ ಆರ್ ಎಂ ಲೋಧಾ ನಿವೃತ್ತ ನ್ಯಾ. ಲೋಧಾ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿದ ವರದಿಯಂತೆ ಚೆನ್ನೈ ಹಾಗೂ ರಾಜಸ್ಥಾನ ತಂಡಗಳು 2016 ಹಾಗೂ 2017 ರ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ, ಕ್ರಿಕೆಟ್ ಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಯಲ್ಲೂ ಪಾಲ್ಗೊಳ್ಳುವಂತಿಲ್ಲ.
ನಿಷೇಧಿತ ಎರಡು ತಂಡದ ಆಟಗಾರರು ಆಡಲು ಅವಕಾಶವಿದ್ದು, ಹೊಸ ಹೆಸರು, ಹೊಸ ಮಾಲೀಕರೊಡನೆ ತಂಡ ಕಣಕ್ಕಿಳಿಯುವ ಅವಕಾಶವಿದೆ. (ಒನ್ ಇಂಡಿಯಾ ಸುದ್ದಿ)