
ಪುಣೆ ವಾರಿಯರ್ಸ್ ವಿರುದ್ಧ
ಚುಟುಕು ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಿರುವ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಅವರು, 2013ರ ಐಪಿಎಲ್ ಆವೃತ್ತಿಯಲ್ಲಿ ಏಪ್ರಿಲ್ 23ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ್ದು ಈ ಲೀಗ್ ನಲ್ಲಿ ಈವರೆಗಿನ ಅತಿ ವೇಗದ ಶತಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಪಂದ್ಯದಲ್ಲಿ ಗೇಲ್ ಅವರು, ರಾಯಲ್ ಚಾಲೆಂಜರ್ಸ್ ಪರವಾಗಿ 66 ಎಸೆತಗಳಲ್ಲಿ ಅಜೇಯ 175 ರನ್ ಗಳಿಸಿದ್ದರು.(ಸ್ಕೋರ್ ವಿವರ)

ಮುಂಬೈ ಇಂಡಿಯನ್ಸ್ ವಿರುದ್ಧ
2010ರ ಮಾರ್ಚ್ 13ರಂದು ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಬರೋಡಾದ ಈ ಆಲ್ರೌಂಡರ್, ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ, ಮುಂಬೈ ಇಂಡಿಯನ್ಸ್ ವಿರುದ್ಧ 37 ಎಸೆತಗಳಲ್ಲಿ ಶತಕ ಸಿಡಿಸಿ ಔಟಾಗಿದ್ದರು.(ಸ್ಕೋರ್ ವಿವರ)

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ
ಮೊಹಾಲಿಯಲ್ಲಿ 2013ರ ಮೇ6 ರಂದು ಈ ಪಂದ್ಯ ನಡೆದಿತ್ತು. ದಕ್ಷಿಣ ಆಫ್ರಿಕಾದ ಮಿಲ್ಲರ್ ಈ ಸಾಧನೆ ಮಾಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ. ಚೇಸಿಂಗ್ ವೇಳೆ ತಂಡವು ಸಂಕಷ್ಟದಲ್ಲಿದ್ದಾಗ ಕ್ರೀಸ್ ಗೆ ಇಳಿದ್ದ ಅವರು, 38 ಎಸೆತಗಳಲ್ಲಿ 101 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.(ಸ್ಕೋರ್ ವಿವರ)

ಡೆಕ್ಕನ್ ಚಾರ್ಜರ್ಸ್ ಪರವಾಗಿ
ಮುಂಬೈನಲ್ಲಿ 2008ರ ಏಪ್ರಿಲ್ 28ರಂದು ಈ ಪಂದ್ಯ ನಡೆದಿತ್ತು. ಆಸ್ಟ್ರೇಲಿಯಾದ ಈ ಹಿರಿಯ ಕ್ರಿಕೆಟಿಗ 42 ಎಸೆತಗಳಲ್ಲಿ 100 ರನ್ ಸಿಡಿಸುವ ಮೂಲಕ ತಮ್ಮ ತಂಡವು, ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವಲ್ಲಿ ಸಹಕಾರ ನೀಡಿದ್ದರು. ವಿವಿಎಸ್ ಲಕ್ಷ್ಮಣ್ ಜತೆಗೆ 155 ರನ್ ಜತೆಯಾಟ ನೀಡಿದ್ದೂ ಆ ಪಂದ್ಯದ ಹೈಲೈಟ್ಸ್ ಗಳಲ್ಲಿ ಒಂದು.(ಸ್ಕೋರ್ ಕಾರ್ಡ್)

ಗುಜರಾತ್ ಲಯನ್ಸ್ ವಿರುದ್ಧ
ಬೆಂಗಳೂರಿನಲ್ಲಿ 2016ರ ಮೇ 14ರಂದು ಈ ಪಂದ್ಯ ನಡೆದಿತ್ತು. ಇದರಲ್ಲಿ ಆರ್ ಸಿಬಿ ತಂಡದ ಹುಲಿಗಳಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಇಬ್ಬರೂ ಶತಕ ಸಿಡಿಸಿದ್ದರು. ಇದರಿಂದಾಗಿ, ತವರಿನ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಪಡೆ ಗುಜರಾತ್ ಲಯನ್ಸ್ ವಿರುದ್ಧ 2 ವಿಕೆಟ್ ನಷ್ಟಕ್ಕೆ 248 ರನ್ ಗಳ ಭರ್ಜರಿ ಸ್ಕೋರ್ ಮಾಡಿತ್ತು. ಈ ಪಂದ್ಯದಲ್ಲಿ 52 ಎಸೆತಗಳನ್ನು ಎದುರಿಸಿದ್ದ ಎಬಿಡಿ, 129 ರನ್ ಗಳಿಸಿದ್ದರು. 42 ಎಸೆತಗಳಲ್ಲಿ ಶತಕ ಪೂರೈಸಿದ್ದರು.(ಸ್ಕೋರ್ ಕಾರ್ಡ್)

ಕೋಲ್ಕತಾ ವಿರುದ್ಧ
ಇದೇ ವರ್ಷ ಏಪ್ರಿಲ್ 30ರಂದು ಈ ಪಂದ್ಯ ನಡೆದಿತ್ತು. ತವರಿನ ಅಂಗಳದಲ್ಲಿ ನಡೆದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಂದ್ಯವೊಂದರಲ್ಲಿ ನಾಯಕ ಡೇವಿಡ್ ವಾರ್ನರ್ ಅವರು, ಈ ಸಾಧನೆ ಮಾಡಿದ್ದರು. 43 ಎಸೆತಗಳಲ್ಲಿ ಶತಕ ಬಾರಿಸಿದ್ದ ಅವರು, 50 ಎಸೆತಗಳಲ್ಲಿ 126 ರನ್ ಗಳಿಸಿದ್ದರು.(ಸ್ಕೋರ್ ಬೋರ್ಡ್)

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ
2008ರ ಮೇ 14ರಂದು ಈ ಪಂದ್ಯ ನಡೆದಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ಚೇಸಿಂಗ್ ಗೆ ಇಳಿದಿದ್ದ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ 48 ಎಸೆತಗಳಲ್ಲಿ 114 ರನ್ ಸಿಡಿಸಿದ್ದ ಅವರು, 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು.(ಸ್ಕೋರ್ ಬೋರ್ಡ್) (ಚಿತ್ರ ಕೃಪೆ: ಐಸಿಸಿ)

ರಾಜಸ್ಥಾನ ರಾಯಲ್ಸ್ ವಿರುದ್ಧ
ಟಿ20 ಮಾದರಿಯಲ್ಲಿ ಇವರು ದಾಖಲಿಸಿದ ಮೊದಲ ಶತಕವೂ ಹೌದು. 46 ಎಸೆತಗಳಲ್ಲಿ ಅವರು, ಶತಕ ಗಳಿಸಿದ್ದು ವಿಶೇಷ. ಈ ಪಂದ್ಯದಲ್ಲಿ ಅವರು ಒಟ್ಟಾರೆ ಗಳಿಸಿದ್ದು 127 ರನ್. ಇನಿಂಗ್ಸ್ ನ ಕೊನೆಯ 10 ಓವರ್ ಗಳಲ್ಲಿ ಅಕ್ಷರಶಃ ಅಬ್ಬರಿಸಿದ್ದ ಅವರು, ತಮ್ಮ ತಂಡ 20 ಓವರ್ ಗಳಲ್ಲಿ 246 ರನ್ (5 ವಿಕೆಟ್ ನಷ್ಟಕ್ಕೆ) ಪೇರಿಸುವಲ್ಲಿ ಗಣನೀಯ ಪಾತ್ರ ವಹಿಸಿದ್ದರು. 2010ರ ಏಪ್ರಿಲ್ 3ರಂದು ಚೆನ್ನೈನಲ್ಲಿ ಈ ಪಂದ್ಯ ನಡೆದಿತ್ತು.(ಸ್ಕೋರ್ ಬೋರ್ಡ್)

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ
ಕಿಂಗ್ಸ್ ಇಲೆವೆನ್ ತಂಡದ ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಮೂರನೇ ಶತಕ ಸಿಡಿಸಿದ್ದರು. ಆ ಪಂದ್ಯದಲ್ಲಿ ಗೇಲ್ ಗಳಿಸಿದ್ದು 57 ಎಸೆತಗಳಲ್ಲಿ 117 ರನ್. 46 ಎಸೆತಗಳಲ್ಲಿ ಅವರಿಂದ ಶತಕ ಹೊರಹೊಮ್ಮಿತ್ತು. ಆ ಪಂದ್ಯದಲ್ಲಿ 226 ರನ್ ಪೇರಿಸಿ, 138 ರನ್ ಅಂತರದಲ್ಲಿ ಪಂದ್ಯವನ್ನು ಗೆದ್ದುಕೊಂಡಿತ್ತು. 2015ರ ಮೇ 6ರಂದು ಬೆಂಗಳೂರಿನಲ್ಲಿ ಈ ಪಂದ್ಯ ನಡೆದಿತ್ತು. 2011ರ ಮೇ 6ರಂದು ಬೆಂಗಳೂರಿನಲ್ಲಿ ಈ ಪಂದ್ಯ ನಡೆದಿತ್ತು.(ಸ್ಕೋರ್ ಬೋರ್ಡ್)

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ
2011ರ ವರ್ಷ ಕ್ರಿಸ್ ಗೇಲ್ ವರ್ಷವಾಗಿತ್ತು. ಆ ಆವೃತ್ತಿಯಲ್ಲಿ ಗೇಲ್ ಅವರು, 2 ಶತಕಗಳೊಂದಿಗೆ ಒಟ್ಟಾರೆಯಾಗಿ 608 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಹೊರಹೊಮ್ಮಿದ್ದು ಅವರ ಆ ಆವೃತ್ತಿಯ 2ನೇ ಶತಕ. 49 ಎಸೆತಗಳಲ್ಲಿ 107 ರನ್ ಗಳಿಸಿದ್ದ ಅವರಿಂದ 46 ಎಸೆತಗಳಲ್ಲಿ ಶತಕ ಹೊರಹೊಮ್ಮಿತ್ತು.(ಸ್ಕೋರ್ ವಿವರ)


Click it and Unblock the Notifications