ಕೋಲ್ಕತಾ ನೈಟ್ ರೈಡರ್ಸ್ ಗೆಲುವಿಗೆ 5 ಕಾರಣಗಳು
ರಾಜ್ ಕೋಟ್ ನಲ್ಲಿ ಶುಕ್ರವಾರ ರಾತ್ರಿ ನಡೆದ ಈ ಬಾರಿಯ ಐಪಿಎಲ್ ನ ಮೂರನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು, ಗುಜರಾತ್ ಲಯನ್ಸ್ ತಂಡದ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಲಯನ್ಸ್ ತಂಡವು, ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದರೆ, ಆನಂತರ ಬ್ಯಾಟ್ ಮಾಡಿದ ಗುಜರಾತ್ ಲಯನ್ಸ್, 14.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ, 184 ರನ್ ಗಳಿಸಿ ಜಯ ಸಾಧಿಸಿತು.
ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ
ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಇನಿಂಗ್ಸ್ ಪೂರ್ತಿ ಕ್ರೀಸ್ ನಲ್ಲಿದ್ದು, 184 ರನ್ ಗಳ ಜತೆಯಾಟ ನೀಡಿದ ಕೋಲ್ಕತಾ ತಂಡದ ನಾಯಕ ಗೌತಮ್ ಗಂಭೀರ್ ಹಾಗೂ ಆಸ್ಟ್ರೇಲಿಯಾದ ಕ್ರಿಸ್ ಲಿನ್ ಅವರ ಅಮೋಘ ಆಟವು ಈವರೆಗಿನ ಐಪಿಎಲ್ ಆವೃತ್ತಿಗಳಲ್ಲಿ ಮೊದಲ ವಿಕೆಟ್ ಗೆ ಮೂಡಿ ಬಂದ ದಾಖಲೆಯ ಜತೆಯಾಟ ಎಂದೆನಿಸಿತು. ಅಲ್ಲದೆ, ರಾಯಲ್ ಚಾಲೆಂಜರ್ಸ ಪರವಾಗಿ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ ಅವರ ಜೋಡಿಯು ಮೊದಲ ವಿಕೆಟ್ ಗೆ ಪೇರಿಸಿದ್ದ 163 ರನ್ ಜತೆಯಾಟದ ದಾಖಲೆಯನ್ನು ಈ ಜೋಡಿ ಮುರಿಯಿತು.
ಕೋಲ್ಕತಾ ಗೆಲವಿಗೆ ಇದಿಷ್ಟೇ ಕಾರಣವಲ್ಲ, ಇನ್ನೂ ಐದು ಕಾರಣಗಳಿದ್ದು, ಅವೆಲ್ಲವನ್ನೂ ಇಲ್ಲಿ ಪಟ್ಟಿ ಮಾಡಲಾಗಿದೆ.

ಗಂಭೀರ್ ಉತ್ತಮ ನಿರ್ಧಾರ
ಟಾಸ್ ಗೆದ್ದಿದ್ದ ಕೋಲ್ಕತಾ ತಂಡವು ಮೊದಲು ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದ್ದು ಉತ್ತಮ ವಿಚಾರ. ಏಕೆಂದರೆ, ಈ ಹಿಂದಿನ ಐಪಿಎಲ್ ಗಳ ಪ್ರಕಾರ, ರಾಜ್ ಕೋಟ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡುವ ತಂಡ ದಾಖಲಿಸಿರುವ ಸರಾಸರಿ ರನ್ ಗಳಿಕೆ 157. ಟಿ20 ಪಂದ್ಯಗಳಲ್ಲಿ ಈ ಮೊತ್ತ ಅಂಥಾ ದೊಡ್ಡ ಸವಾಲೇನೂ ಅಲ್ಲ. ಹಾಗಾಗಿಯೇ, ಕೋಲ್ಕತಾ ತಂಡದ ನಾಯಕ ಗೌತಮ್ ಗಂಭೀರ್ ಅವರು ಟಾಸ್ ಗೆದ್ದ ಕೂಡಲೇ ಎದುರಾಳಿ ತಂಡವನ್ನು ಮೊದಲು ಕಣಕ್ಕಿಳಿಸಿದರು.[ಗಂಭೀರ್-ಲಿನ್ ಜೊತೆಯಾಟ ಐಪಿಎಲ್ ಹೊಸ ದಾಖಲೆ]

ವೇಗಿ, ಸ್ಪಿನ್ನರ್ ಮೂಲಕ ದಾಳಿ
ಇನ್ನು ಎರಡನೇಯ ತಂತ್ರಗಾರಿಕೆಯೆಂದರೆ, ಎದುರಾಳಿ ತಂಡದ ಪ್ರಮುಖ ಆರಂಭಿಕರಾದ ಜೇಸನ್ ರಾಯ್ ಹಾಗೂ ಬ್ರೆಂಡಾನ್ ಮೆಕಲಂ ಅವರು ಕ್ರೀಸ್ ನಲ್ಲಿದ್ದಾಗ ಒಬ್ಬ ವೇಗಿ (ಟ್ರೆಂಟ್ ಬೌಲ್ಟ್) ಹಾಗೂ ಸ್ಪಿನ್ನರ್ (ಪಿಯೂಶ್ ಚಾವ್ಲಾ) ಅವರನ್ನು ಆರಂಭದಲ್ಲೇ ದಾಳಿಗಿಳಿಸಿದ್ದು ಒಂದು ಒಳ್ಳೆಯ ತರ್ಕ.

ರನ್ ಗತಿಗೆ ಕಡಿವಾಣ
ಎದುರಾಳಿ ತಂಡದ ಆರಂಭಿಕರಾದ ಜೇಸನ್ ರಾಯ್ ಹಾಗೂ ಬ್ರೆಂಡಾನ್ ಮೆಕಲಂ ಅವರನ್ನು ಕ್ರೀಸ್ ಗೆ ಕಚ್ಚಿಕೊಳ್ಳಲು ಬಿಡದೇ ಇದ್ದಿದ್ದು ತಂಡದ ಪಾಲಿಗೆ ನೆರವಾಯಿತು. ಇದಲ್ಲದೆ, ರನ್ ಗತಿಗೆ ಕಡಿವಾಣ ಹಾಕಿದ್ದು ಮತ್ತೊಂದು ಉತ್ತಮ ವಿಚಾರ.

ಮಿಕ್ಕವರಾರೂ ಮಿಂಚಲಿಲ್ಲ
ಸುರೇಶ್ ರೈನಾ ಅವರು ಕೊಂಚ ಆರ್ಭಟಿಸಿ ಅರ್ಧಶತಕ (68ರನ್, 51 ಎಸೆತ, 7 ಬೌಂಡರಿ) ದಾಖಲಿಸಿದರಾದರೂ ಅವರ ರನ್ ಗಳಿಕೆ ಹಾಗೂ ಎದುರಿಸಿದ ಚೆಂಡುಗಳ ಸಂಖ್ಯೆಯಲ್ಲಿ ಭಾರೀ ಅಂತರವೇನೂ ಇಲ್ಲ. ಇದರಿಂದಾಗಿ, ಕೋಲ್ಕತಾ ತಂಡದ ಬೌಲಿಂಗ್ ಅನ್ನು ರೈನಾ ಒಬ್ಬರೇ ಕರಾರುವಾಕ್ ಆಗಿ ಎದುರಿಸಿದರು ಎಂದಾಗುತ್ತದೆ. ಅದು ಕೋಲ್ಕತಾದ ಬೌಲಿಂಗ್ ವೈಫಲ್ಯವಲ್ಲ. ರೈನಾ ಬಿಟ್ಟರೆ ಆ ತಂಡದಲ್ಲಿ ಮಿಕ್ಕವರಾರೂ ಕೋಲ್ಕತಾ ಬೌಲಿಂಗ್ ನಲ್ಲಿ ಮಿಂಚದೇ ಇದ್ದಿದ್ದು ಈ ಮಾತನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ.

ಗಂಭೀರ್, ಲಿನ್ ಭರ್ಜರಿ ಬ್ಯಾಟಿಂಗ್
ಇನ್ನು, ನಾಯಕ ಗೌತಮ್ ಗಂಭೀರ್, ಲಿನ್ ಅವರ ನಡುವಿನ ಜತೆಯಾಟ ಅತ್ಯುತ್ತಮವಾದದ್ದು. ಎದುರಾಳಿ ತಂಡದಲ್ಲಿದ್ದ ಬೌಲಿಂಗ್ ದೌರ್ಬಲ್ಯವನ್ನು ಉತ್ತಮವಾಗಿ ಉಪಯೋಗಿಸಿಕೊಂಡ ಇವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications