For Quick Alerts
ALLOW NOTIFICATIONS  
For Daily Alerts
 

ಲಕ್ಷಾಂತರ ಮಂದಿ ಸೆಳೆದ ಎಬಿಡಿ ಪುತ್ರನ ಈ ವಿಡಿಯೋದಲ್ಲೇನಿದೆ?

ಎಬಿಡಿ ನೆಟ್ ಪ್ರಾಕ್ಟೀಸ್ ಮಾಡುವಾಗ ತಗೆಯಲಾದ ವಿಡಿಯೋದಲ್ಲಿ ಎಬಿಡಿ ಅವರು ನೆಟ್ ಪ್ರಾಕ್ಟೀಸ್ ನಿರತರಾಗಿದ್ದಾಗ ಈ ಪೋರನೂ ಬ್ಯಾಟು ಹಿಡಿದು ಪ್ರಾಕ್ಟೀಸ್ ನಡೆಸುತ್ತಾನೆ.

ಬೆಂಗಳೂರು, ಏಪ್ರಿಲ್ 22: ಐಪಿಎಲ್ ಗಾಗಿ ಭಾರತಕ್ಕೆ ಆಗಮಿಸಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (ಎಬಿಡಿ) ತಮ್ಮ ಫ್ಯಾಮಿಲಿಯನ್ನೂ ಜತೆಯಲ್ಲಿ ಕರೆತಂದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡುತ್ತಿರುವ ಎಬಿಡಿ ಹೋಟೆಲ್ ನಲ್ಲಿರಲಿ, ಕ್ರೀಡಾಂಗಣದಲ್ಲಿರಲಿ ಈ ಪುಟ್ಟ ಪೋರ ಅವರನ್ನು ಬಿಟ್ಟಿರಲಾರ.[ಐಪಿಎಲ್ ದಶಮಾನೋತ್ಸವ: ಈವರೆಗಿನ ಟಾಪ್ 10 ದುಬಾರಿ ಆಟಗಾರರಿವರು!]

ಹಾಗಾಗಿ, ಎಬಿಡಿ ನೆಟ್ ಪ್ರಾಕ್ಟೀಸ್ ಮಾಡುವಾಗ ಆತನನ್ನು ಜತೆಗೆ ಕೊಂಡೊಯ್ಯುತ್ತಾರೆ. ಇಂಥದ್ದೇ ಒಂದು ಸಂದರ್ಭದಲ್ಲಿ ತಗೆಯಲಾದ ವಿಡಿಯೋದಲ್ಲಿ ಎಬಿಡಿ ಅವರು ನೆಟ್ ಪ್ರಾಕ್ಟೀಸ್ ನಿರತರಾಗಿದ್ದಾಗ ಈ ಪೋರನೂ ಬ್ಯಾಟು ಹಿಡಿದು ಪ್ರಾಕ್ಟೀಸ್ ನಡೆಸುತ್ತಾನೆ.

ಇವನ ಆಸಕ್ತಿ ಗಮನಿಸಿ ಎಬಿಡಿ ಇವನಿಗೊಂದು ಪುಟ್ಟ ಪ್ಲಾಸ್ಟಿಕ್ ಬ್ಯಾಟ್ ಕೊಡಿಸಿದ್ದಾರೆ. ಅದನ್ನು ಅವನ ತಂದೆಯ ಸ್ಟೈಲಲ್ಲೇ ಉಳಿದ ಕ್ರಿಕೆಟಿಗರು ಸುಮ್ಮನೇ ಉರುಳಿಬಿಡುವ ಚೆಂಡನ್ನು ತನ್ನ ಶಕ್ತಿ ಮೀರಿ ಬೌಂಡರಿಗೆ ಅಟ್ಟುವ ಲೆಕ್ಕಾಚಾರದಲ್ಲಿ ಹೊಡೆಯುತ್ತಾನೆ.[ಐಪಿಎಲ್ 1ರಿಂದ 10ರಲ್ಲಿ ಆರೇಂಜ್ ಕ್ಯಾಪ್ ಪಡೆದ ಆಟಗಾರರಿವರು]

ಅಪ್ಪನ ಜತೆ, ಬಸ್ ನಲ್ಲಿ, ಹೋಟೆಲ್ ನಲ್ಲಿ ಸಂಚರಿಸುವಾಗ ಅಪ್ಪ ಹೇಳಿಕೊಟ್ಟಂತೆ ಆರ್... ಸಿ... ಬಿ ಎಂದು ಬೆಂಬಲ ವ್ಯಕ್ತಪಡಿಸುತ್ತಾನೆ.

ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದಿದ್ದ ಅಭ್ಯಾಸದ ವೇಳೆ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಈ ಅಪ್ಪ-ಮಗನ ವಿಡಿಯೋ ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಏಪ್ರಿಲ್ 14ರಂದು ಅಪ್ಲೋಡ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.

ಅಂದಹಾಗೆ, ಲಕ್ಷಾಂತರ ಹೃದಯಗಳನ್ನು ದೋಚಿದ ಈ ಪೋರನ ಹೆಸರು ಎಬಿ ಅಬ್ರಹಾಂ.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+