Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2017 ಹರಾಜು : ಮಾರಾಟವಾದ ಆಟಗಾರರ ಪೂರ್ಣ ಪಟ್ಟಿ

ಬೆಂಗಳೂರು, ಫೆಬ್ರವರಿ 20 : ಇಂಡಿಯನ್ ಪ್ರೀಮಿಯರ್ ಲೀಗ್‌ನ ಮತ್ತೊಂದು ಆವೃತ್ತಿಗೆ ಹರಾಜು ಬೆಂಗಳೂರಿನ ರಿಟ್ಜ್ ಕಾರ್ಲ್‌ಟನ್ ಹೋಟೆಲಿನಲ್ಲಿ ಸಾಗಿದ್ದು, ಇಂಗ್ಲೆಂಡ್‌ನ ಆಲ್ ರೌಂಡರ್ ಬೆನ್ ಸ್ಟ್ರೋಕ್ಸ್, ಎರಡನೇ ಅತೀಹೆಚ್ಚು ಬೆಲೆಗೆ ಬಿಕರಿಯಾಗಿದ್ದಾರೆ.

ಒಟ್ಟು ಎಂಟು ತಂಡಗಳು, ವಿದೇಶಿ ಆಟಗಾರರು ಸೇರಿದಂತೆ ಭಾರತದ ಆಟಗಾರರ ಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಯಾವ ಆಟಗಾರ ಯಾವ ಪ್ರಾಂಚೈಸಿಯ ಪಾಲಾಗಲಿದ್ದಾನೆ ಎಂಬ ಸಂಪೂರ್ಣ ವಿವರಗಳು ಇಲ್ಲಿ ಲಭ್ಯವಾಗಲಿವೆ.

ಮೊದಲ ಹರಾಜಿನಲ್ಲಿ ಬೆನ್ ಸ್ಟ್ರೋಕ್ಸ್ ಅವರು ರೈಸಿಂಗ್ ಪುಣೆ ಸುಪರ್‌ಜೈಂಟ್ಸ್ ತಂಡದ ಪಾಲಾಗಿದ್ದು, 14.5 ಕೋಟಿ ರುಪಾಯಿಗೆ ಮಾರಾಟವಾಗಿದ್ದಾರೆ. 25 ವರ್ಷದ ಆಲ್ ರೌಂಡರ್ ಎಡಗೈ ಬ್ಯಾಟ್ಸ್ ಮನ್ ಆಗಿದ್ದು, ಬಲಗೈಯಿಂದ ಬೌಲಿಂಗ್ ಮಾಡುತ್ತಾರೆ.

ಕರ್ನಾಟಕದ ಪ್ರತಿಭಾನ್ವಿತ ಬೌಲರ್ ಕೆ ಗೌತಮ್ ಅವರು 2 ಕೋಟಿ ರು.ಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. ಆದರೆ, 12 ಕೋಟಿ ರು.ನಷ್ಟು ಭರ್ಜರಿ ಬೆಲೆಗೆ ಮಾರಾಟವಾಗಿರುವ ದಕ್ಷಿಣ ಆಫ್ರಿಕಾದ ತೈಮಲ್ ಮಿಲ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿಕೊಂಡಿದ್ದಾರೆ.

IPL 2017 Auction: Full list of players sold

ಮಾರಾಟವಾದ ಆಟಗಾರರ ಪಟ್ಟಿ

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ (RPS)

ಬೆನ್ ಸ್ಟ್ರೋಕ್ಸ್ (ಇಂಗ್ಲೆಂಡ್) - ರು 14.5 ಕೋಟಿ
ಡ್ಯಾನಿಯೆಲ್ ಕ್ರಿಸ್ಟಿಯನ್ (ಆಸ್ಟ್ರೇಲಿಯಾ) - ರು. 1 ಕೋಟಿ
ಜಯದೇವ್ ಉನದ್ಕತ್ (ಭಾರತ) - ರು. 30 ಲಕ್ಷ
ರಾಹುಲ್ ಚಹಾರ್ (ಭಾರತ) - ರು. 10 ಲಕ್ಷ
ಸೌರಭ್ ಕುಮಾರ್ (ಭಾರತ) - ರು. 10 ಲಕ್ಷ
ಮಿಲಿಂದ್ ಟಂಡನ್ (ಭಾರತ) - ರು. 10 ಲಕ್ಷ
ರಾಹುಲ್ ತ್ರಿಪಾಠಿ (ಭಾರತ) - ರು. 10 ಲಕ್ಷ

ಕೊಲ್ಕತಾ ನೈಟ್ ರೈಡರ್ಸ್ (KKR)

ಟ್ರೆಂಟ್ ಬೋಲ್ಟ್ (ನ್ಯೂಜಿಲೆಂಡ್) - ರು. 5 ಕೋಟಿ
ಕ್ರಿಸ್ ವೋಕರ್ಸ್ (ಇಂಗ್ಲೆಂಡ್) - ರು. 4.2 ಕೋಟಿ
ನೇಥನ್ ಕೌಲ್ಟರ್ ನೈಲ್ (ಆಸ್ಟ್ರೇಲಿಯಾ) - ರು. 3.5 ಕೋಟಿ
ರಿಶಿ ಧವನ್ (ಭಾರತ) - ರು. 55 ಲಕ್ಷ
ರೌಮನ್ ಪಾವೆಲ್ (ವೆಸ್ಟ್ ಇಂಡೀಸ್) - ರು. 30 ಲಕ್ಷ
ಆರ್ ಸಂಜಯ್ ಯಾದವ್ (ಭಾರತ) - ರು. 10 ಲಕ್ಷ
ಇಶಾಂಕ್ ಜಗ್ಗಿ (ಭಾರತ) - ರು. 10 ಲಕ್ಷ

ಕಿಂಗ್ಸ್ XI ಪಂಜಾಬ್ (KXIP)

ತಂಗರಸು ನಟರಾಜನ್ (ಭಾರತ) - ರು. 3 ಕೋಟಿ
ವರುಣ್ ಆರೋನ್ (ಭಾರತ) - ರು. 2.8 ಕೋಟಿ
ಇಯಾನ್ ಮಾರ್ಗನ್ (ಇಂಗ್ಲೆಂಡ್) - ರು. 2 ಕೋಟಿ
ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್) - ರು. 50 ಲಕ್ಷ
ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) - ರು. 50 ಲಕ್ಷ
ಡರೆನ್ ಸಾಮಿ (ವೆಸ್ಟ್ ಇಂಡೀಸ್) - ರು. 30 ಲಕ್ಷ
ರಾಹುಲ್ ತೆವಾತಿಯಾ (ಭಾರತ) - ರು. 25 ಲಕ್ಷ
ರಿಂಕು ಸಿಂಗ್ (ಭಾರತ) - ರು. 10 ಲಕ್ಷ

ಡೆಲ್ಲಿ ಡೇರ್ ಡೆವಿಲ್ಸ್ (DD)

ಕಾಗಿಸೋ ರಬಡ (ದಕ್ಷಿಣ ಆಫ್ರಿಕಾ) - ರು. 5 ಕೋಟಿ
ಪ್ಯಾಟ್ರಿಕ್ ಜೇಮ್ಸ್ ಕುಮಿನ್ಸ್ (ಆಸ್ಟ್ರೇಲಿಯಾ) - ರು. 4.5 ಕೋಟಿ
ಆಂಗ್ಲಿಯೋ ಮ್ಯಾಥ್ಯೂಸ್ (ಶ್ರೀಲಂಕಾ) - ರು 2 ಕೋಟಿ
ಕೋರೆ ಆಂಡರ್ಸನ್ (ನ್ಯೂಜಿಲೆಂಡ್) - ರು 1 ಕೋಟಿ
ಮುರುಗನ್ ಅಶ್ವಿನ್ (ಭಾರತ) - ರು. 1 ಕೋಟಿ
ಆದಿತ್ಯ ತಾರೆ (ಭಾರತ) - ರು. 25 ಲಕ್ಷ
ಅಂಕೀತ್ ಬಾವನೆ (ಭಾರತ) - ರು. 10 ಲಕ್ಷ
ನವದೀಪ್ ಸೈನಿ (ಭಾರತ) - ರು. 10 ಲಕ್ಷ
ಶಶಾಂಕ್ ಸಿಂಗ್ (ಭಾರತ) - ರು. 10 ಲಕ್ಷ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

ತೈಮಲ್ ಮಿಲ್ಸ್ (ಇಂಗ್ಲೆಂಡ್) - ರು. 12 ಕೋಟಿ
ಅನಿಕೇತ್ ಚೌಧರಿ (ಭಾರತ) - ರು. 2 ಕೋಟಿ.
ಪವನ್ ನೇಗಿ (ಭಾರತ) - ರು. 1 ಕೋಟಿ
ಬಿಲ್ಲಿ ಸ್ಟಾನ್ಲೇಕ್ (ಆಸ್ಟ್ರೇಲಿಯಾ) - ರು. 30 ಲಕ್ಷ
ಪ್ರವೀಣ್ ದುಬೆ (ಭಾರತ) - ರು. 10 ಲಕ್ಷ

ಮುಂಬೈ ಇಂಡಿಯನ್ಸ್ (MI)

ಕರಣ್ ಶರ್ಮಾ (ಭಾರತ) - ರು. 3.2 ಕೋಟಿ
ಮಿಷೆಲ್ ಜಾನ್ಸನ್ (ಆಸ್ಟ್ರೇಲಿಯಾ) - ರು. 2 ಕೋಟಿ
ಕೆ ಗೌತಮ್ (ಭಾರತ - ಕರ್ನಾಟಕ) - ರು. 2 ಕೋಟಿ
ನಿಕೊಲಾಸ್ ಪೂರಣ್ (ವೆಸ್ಟ್ ಇಂಡೀಸ್) - ರು. 30 ಲಕ್ಷ
ಅಸೇಲ ಗುಣರತ್ನೆ (ಶ್ರೀಲಂಕಾ) - ರು. 30 ಲಕ್ಷ
ಸೌರಭ್ ತಿವಾರಿ (ಭಾರತ) - ರು. 30 ಲಕ್ಷ
ಕುಲ್ವಂತ್ ಖೆಜ್ರೋಲಿಯಾ (ಭಾರತ) - ರು. 10 ಲಕ್ಷ

ಸನ್ ರೈಸರ್ಸ್ ಹೈದರಾಬಾದ್ (SRH)

ರಶೀದ್ ಖಾನ್ ಅರ್ಮಾನ್ (ಅಫಘಾನಿಸ್ತಾನ) - ರು. 4 ಕೋಟಿ
ಏಕಲವ್ಯ ದ್ವಿವೇದಿ (ಭಾರತ) - ರು. 75 ಲಕ್ಷ
ಕ್ರಿಸ್ ಜೋರ್ಡಾನ್ (ಇಂಗ್ಲೆಂಡ್) - ರು. 50 ಲಕ್ಷ
ಮೊಹಮ್ಮದ್ ನಬಿ (ಅಫಘಾನಿಸ್ತಾನ) - ರು. 30 ಲಕ್ಷ
ಬೆನ್ ಲಾಫ್ಲಿನ್ (ಆಸ್ಟ್ರೇಲಿಯಾ) - ರು. 30 ಲಕ್ಷ
ತನ್ಮಯ್ ಅಗರವಾಲ್ (ಭಾರತ) - ರು. 10 ಲಕ್ಷ
ಪ್ರವೀಣ್ ತಂಬೆ (ಭಾರತ) - ರು. 10 ಲಕ್ಷ

ಗುಜರಾತ್ ಲಯನ್ಸ್ (GL)

ಜೇಸನ್ ರಾಯ್ (ಇಂಡ್ಲೆಂಡ್) - ರು. 1 ಕೋಟಿ
ಬಸಿಲ್ ಥಂಪಿ (ಭಾರತ) - ರು. 85 ಲಕ್ಷ
ಮನಪ್ರೀತ್ ಗೋನಿ (ಭಾರತ) - ರು. 60 ಲಕ್ಷ
ನಾಥು ಸಿಂಗ್ (ಭಾರತ) - ರು. 50 ಲಕ್ಷ
ಮುನಾಫ್ ಪಟೇಲ್ (ಭಾರತ) - ರು. 30 ಲಕ್ಷ
ತೇಜಸ್ ಬರೋಕಾ (ಭಾರತ) - ರು. 10 ಲಕ್ಷ
ಚಿರಾಗ್ ಸೂರಿ (ಭಾರತ) - ರು. 10 ಲಕ್ಷ
ಶೆಲ್ಲಿ ಶೌರ್ಯ (ಭಾರತ) - ರು. 10 ಲಕ್ಷ
ಶುಭಮ್ ಅಗರವಾಲ್ (ಭಾರತ) - ರು. 10 ಲಕ್ಷ
ಪ್ರಥಮ್ ಸಿಂಗ್ (ಭಾರತ) - ರು. 10 ಲಕ್ಷ

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+