ಕೂಲಿಯಾಳಿನ ಪುತ್ರ ನಟರಾಜನ್ ಗೆ ಮಿಚೆಲ್ ಜಾನ್ಸನ್ ಆದರ್ಶ!
ಚೆನ್ನೈ, ಫೆಬ್ರವರಿ 22: ಎಡಗೈ ವೇಗಿ ಟಿ. ನಟರಾಜನ್ ಈಗ ಬಾರಿ ಐಪಿಎಲ್ ಹರಾಜಿನಲ್ಲಿ ಭರ್ಜರಿ ಬೆಲೆ ಪಡೆದುಕೊಂಡು ಸುದ್ದಿ ಮಾಡಿದ್ದು ಗೊತ್ತಿರಬಹುದು. ನನಗೆ ಇನ್ನೂ ನಂಬಲು ಆಗುತ್ತಿಲ್ಲ, ಕೋಟಿಗೆ ಎಷ್ಟು ಸೊನ್ನೆ ಎಂದು ತಿಳಿದಿಲ್ಲ ಎಂದು ತಮಿಳುನಾಡಿನ ಆಟಗಾರ ತ್ಯಾಗರಾಜನ್ ನಟರಾಜನ್ ಅವರು ಪ್ರತಿಕ್ರಿಯಿಸಿದ್ದಾರೆ.
ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?|ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!
25 ವರ್ಷದ ನಟರಾಜನ್ ಅವರಿಗೆ 10 ಲಕ್ಷ ರೂ. ಮೂಲಬೆಲೆ ನಿಗದಿಯಾಗಿತ್ತು. ಆದರೆ, ಬಿಡ್ಡಿಂಗ್ ವೇಳೆ ಭಾರಿ ಪೈಪೋಟಿ ನಡೆದು 30 ಪಟ್ಟು ಅಧಿಕ ಮೊತ್ತಕೆ 3 ಕೋಟಿ ರೂ.ಗೆ ಕಿಂಗ್ಸ್ ಇಲೆವೆನ್ ಪಾಲಾದರು.[ಹರಾಜು ಅಚ್ಚರಿ: ರಿಕ್ಷಾ ಚಾಲನ ಮಗ ಸಿರಾಜ್ ಗೆ ಭರ್ಜರಿ ಬೆಲೆ]
ರೈಲ್ವೆ ಫ್ಲಾಟ್ ಫಾರ್ಮ್, ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ದಿನಗೂಲಿಯಾಗಿರುವ ತಂದೆ ಮತ್ತು ಬೀದಿಬದಿ ವ್ಯಾಪಾರಿಯಾಗಿರುವ ತಾಯಿಯ ಪರಿಶ್ರಮ ಹಾಗೂ ತ್ಯಾಗವೇ ನಾನು ಈ ಮಟ್ಟಕ್ಕೇರಲು ಸಾಧ್ಯವಾಯಿತು ಎಂದು ನಟರಾಜನ್ ಹೇಳಿದ್ದಾರೆ. ಈ ದಂಪತಿಯ ಐವರು ಮಕ್ಕಳ ಪೈಕಿ ನಟರಾಜನ್ ಹಿರಿಯವರು.[ಐಪಿಎಲ್ 2017 ಸಂಪೂರ್ಣ ವೇಳಾಪಟ್ಟಿ]

ಕಳೆದ ವರ್ಷ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ (ಟಿಎನ್ಪಿಎಲ್) ಆಡಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳು, ಟಿಎನ್ಪಿಎಲ್ನಲ್ಲಿ ಕಂಡ ಯಶಸ್ಸಿನಿಂದ ಐಪಿಎಲ್ ಅವಕಾಶ ಒಲಿಸಿಕೊಂಡಿರುವ ಅವರಿಗೆ ಆಸೀಸ್ ವೇಗಿ ಮಿಚೆಲ್ ಜಾನ್ಸನ್ ಆದರ್ಶ.[ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]
ಟೆನ್ನಿಸ್ ಬಾಲ್ ಟೂರ್ನಿ ನಂತರ ಜಾಲಿ ರೋವರ್ಸ್ ಕ್ಲಬ್ ಪರ ಆಡಿದ್ದ ನಟರಾಜನ್, ಅವರು ಟಿಎನ್ ಪಿಎಲ್ ನಲ್ಲಿದಿಂಡಿಗಲ್ ಡ್ರಾಗನ್ಸ್ ಪರ ಆಡಿದ್ದರು. ಅಶ್ವಿನ್, ಮುರಳಿ ವಿಜಯ್ ಹಾಗೂ ಎಲ್ ಬಾಲಾಜಿ ಅವರ ನೆರವನ್ನು ಸ್ಮರಿಸುತ್ತಾರೆ. 2015-16ರಲ್ಲಿ ರಣಜಿ ತಂಡದಲ್ಲೂ ನಟರಾಜನ್ ಸ್ಥಾನ ಪಡೆದರು.[ಐಪಿಎಲ್ 2017: ಆರ್ ಸಿಬಿ ಪಂದ್ಯಗಳ ಪೂರ್ಣ ವೇಳಾಪಟ್ಟಿ]
ತಮಿಳುನಾಡಿನ 'ಮುಸ್ತಫಿಝುರ್ ರೆಹ್ಮಾನ್ ' ಎಂದು ಸಹ ಆಟಗಾರರು ಪ್ರೀತಿಯಿಂದ ನಟರಾಜನ್ ರನ್ನು ಕರೆಯುತ್ತಾರೆ. ಬಾಂಗ್ಲಾದ ರೆಹ್ಮಾನ್ ರಂತೆ ನಟರಾಜನ್ ಕೂಡಾ ಯಾರ್ಕರ್ ಸ್ಪೆಷಲಿಸ್ಟ್ .[4 ಕೋಟಿಗೆ ಬಿಕರಿಯಾದ ಅಫ್ಘಾನಿಸ್ತಾನದ 18ರ ಪೋರ!]
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ನನಗೆ ಆದರ್ಶ. ಐಪಿಎಲ್ ವೇಳೆ ಆತನನ್ನು ಭೇಟಿ ಮಾಡಿ, ಸಾಕಷ್ಟು ಕಲಿಯಬೇಕಿದೆ ಎಂದು ನಟರಾಜನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications