ಕೊಹ್ಲಿಯನ್ನು ಕೋತಿ ಎಂದು ನಿಂದಿಸಿದ ಬಾಲಿವುಡ್ ನಟ
ಬೆಂಗಳೂರು, ಮೇ 09 : ಬಾಲಿವುಡ್ ನಟ, ನಿರ್ಮಾಪಕ, ವಿಮರ್ಶಕ ಕಮಲ್ ಆರ್ ಖಾನ್ ಗೊತ್ತಿರಬೇಕಲ್ಲ. ಟ್ವೀಟ್ಸ್ ಗಳ ಮೂಲಕ ವಿವಾದ ಸೃಷ್ಟಿಸುವ ಕಮಲ್ ಕಣ್ಣು ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೇಲೆ ಬಿದ್ದಿದೆ.
ಕೊಹ್ಲಿ ಅವರ ಬ್ಯಾಟಿಂಗ್, ನಾಯಕತ್ವ ವೈಫಲ್ಯ, ಐಪಿಎಲ್ ನಲ್ಲಿ ಕಳಪೆ ಪ್ರದರ್ಶನವನ್ನು ಕಮಲ್ ಅವರು ಕೆಟ್ಟದಾಗಿ ಟೀಕಿಸಿದ್ದಾರೆ.
ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡುವ ಕಮಲ್ ಆರ್ ಖಾನ್ ಅವರು ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ವೈಫಲ್ಯವನ್ನು ಎತ್ತಿ ಆಡಿದ್ದಾರೆ. ಇತ್ತೀಚೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿತ್ತು.

ಪಂದ್ಯದ ನಡುವೆ ಟ್ವೀಟ್ ಮಾಡಿದ್ದ ಕಮಲ್ ಖಾನ್ ಅವರು, ಟ್ವೀಟ್ ಮಾಡಿ, ಕೊಹ್ಲಿ ಅವರು ಹೇಳಿದ ಮೇಲೆ ಮುಗಿಯಿತು ಪಠಾಣ್ ಅವರು ಔಟ್, ಅಂಪೈರ್ ಔಟ್ ಕೊಡದಿದ್ದರೆ ಕೊಹ್ಲಿ ಕೋತಿಯಂತೆ ನೆಗೆದಾಡುತ್ತಾನೆ ಎಂದಿದ್ದರು.
ಹಂಗಿಸುವ ವಿಷಯದಲ್ಲಿ ಯಾರನ್ನು ಬಿಡದ ಕಮಲ್ ಅವರು ಈ ಹಿಂದೆ ಎಂಎಸ್ ಧೋನಿ ಅವರ ಹಿಂದೆ ಬಿದ್ದಿದ್ದರು.
ಟೀಂ ಇಂಡಿಯಾ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ಮಾಜಿ ನಾಯಕ ಧೋನಿ ಅವರು ಪ್ರತಿ ಫ್ಲಾಪ್ ಶಾಟ್ ನಂತರ ತಮ್ಮ ಬ್ಯಾಟ್ ನೋಡಿಕೊಂಡು ಬ್ಯಾಟ್ ನದ್ದೇ ಏನೋ ಮಿಸ್ಟೇಕ್ ಎನ್ನುವಂತೆ ನಟಿಸುತ್ತಾರೆ ಎಂದು ಟ್ವೀಟ್ ಮಾಡಿದ್ದರು.
ವಿರಾಟ್ ಕೊಹ್ಲಿ ಅವರ ಐಪಿಎಲ್ ನಲ್ಲ ರನ್ ಗಳಿಸಲ್ಲ. ಆರ್ ಸಿಬಿ ಕುಡಾ ಪಂದ್ಯಗಳ ನಂತರ ಅಂಕಗಳನ್ನ ಮಾತ್ರ ಗಳಿಸಿದೆ. ಆದರೆ, ಕಮಲ್ ಅವರ ಟ್ವೀಟ್ಶ್ ಎಲ್ಲೆ ಮೀರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications