ಗೇಲ್ ಹೂಡಿಕೆದಾರನಾಗಲು ಯುವರಾಜ್ ಸ್ಫೂರ್ತಿಯಂತೆ!
ಬೆಂಗಳೂರು, ಮೇ 11: ವಿವಿಧ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಲು ಯುವರಾಜ್ ಸಿಂಗ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರೇ ನನಗೆ ಮಾದರಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಅವರು ರಿಯಲ್ ಎಸ್ಟೇಟ್ ಸೇರಿದಂತೆ ಹಲವೆಡೆ ಹಣ ತೊಡಗಿಸುತ್ತಿದ್ದಾರೆ. ವೆಸ್ಟ್ ಇಂಡೀಸ್‌ನ ಜಮೈಕಾದಲ್ಲಿ ಈಗಾಗಲೇ 'ಟ್ರಿಪಲ್ ಸೆಂಚುರಿ 333' ಎಂಬ ಹೆಸರಿನ ಬಾರ್ ಮತ್ತು ರೆಸ್ಟೋರಂಟ್ ಆರಂಭಿಸಿದ್ದಾರೆ.

'ಅಟಿಟ್ಯೂಡ್ ಡಾಟ್ ಕಾಮ್' ಎಂಬ ಫ್ಯಾಷನ್ ಸಂಸ್ಥೆಯ ರಾಯಭಾರಿಯಾಗಿ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ ಗೇಲ್ ಅವರು ಉದ್ಯಮದಲ್ಲಿ ಹಣ ತೊಡಗಿಸುವುದು ತಮಾಷೆ ವಿಷಯವಲ್ಲ. ಅದಕ್ಕೆ ಸಿದ್ಧ ಮಾದರಿ ಅಥವಾ ಯಶಸ್ವಿ ಸಾಧಕರ ಬಗ್ಗೆ ತಿಳಿದುಕೊಂಡಿರಬೇಕು ಎಂದರು.
ಉದ್ಯಮವಲ್ಲದೆ ಇಂಗ್ಲೆಂಡ್ ಮತ್ತು ಜಮೈಕಾದಲ್ಲಿರುವ 'ದಿ ಕ್ರಿಸ್ ಗೇಲ್ ಅಕಾಡೆಮಿ' ಹೃದ್ರೋಗ ಚಿಕಿತ್ಸೆಗೆ ನೆರವು ನೀಡುವ 'ದಿ ಕ್ರಿಸ್ ಗೇಲ್ ಡಿನ್ನರ್' ಎಂಬ ಪ್ರತಿಷ್ಠಾನವನ್ನು ಗೇಲ್ ನಡೆಸುತ್ತಿದ್ದಾರೆ.
ಯುವರಾಜ್ ಸಿಂಗ್ ಈಗಾಗಲೇ 'ಯು ವೆಬ್ ಕ್ಯಾಬ್ ವೆಂಚರ್ಸ್' ಎಂಬ ಹೆಸರಿನ ಹೂಡಿಕೆ ಸಂಸ್ಥೆ ಆರಂಭಿಸಿದ್ದಾರೆ. ನೋಯ್ಡಾದ 'ಸೂತ್ ಹೆಲ್ತ್ ಕೇರ್ಸ್ ಪರ್ಸನಲ್ ಕೇರ್' ಸಂಸ್ಥೆಯಲ್ಲಿ ಸೈನಾ ನೆಹ್ವಾಲ್ ಹಣ ಹೂಡಿರುವುದನ್ನು ಇಲ್ಲಿ ಸ್ಮರಿಸಬಹುದು (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications