Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಂಡ್ಯ ಬ್ರದರ್ಸ್ ಟ್ವೀಟ್ ವಾರ್ ಗೆ ಸಕತ್ ಉತ್ತರ ನೀಡಿದ ಸೆಹ್ವಾಗ್

ಬೆಂಗಳೂರು, ಮೇ 15: ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಲ್ ರೌಂಡರ್ಸ್ ಗಳಾದ ಪಾಂಡ್ಯ ಬ್ರದರ್ಸ್ ಹಾರ್ದಿಕ್ ಹಾಗೂ ಕೃನಾಲ್ ಅವರಿಬ್ಬರ ನಡುವೆ ಟ್ವಿಟ್ಟರ್ ನಲ್ಲಿ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವಿನ ಜಗಳಕ್ಕೆ ವೀರೇಂದ್ರ ಸೆಹ್ವಾಗ್ ಅವರು ಸಕತ್ ಆಗಿ ಟ್ವೀಟ್ ಮಾಡಿ, ಬುದ್ಧಿವಾದ ಹೇಳಿದ್ದಾರೆ.

ಜೀವನದಲ್ಲಿ ಒಮ್ಮೊಮ್ಮೆ ತೀರಾ ಹತ್ತಿರವಾದವರೇ ತುಂಬಾ ನೋವು ನೀಡುತ್ತಾರೆ ಎಂದು ಸೋದರದ ಪೈಕಿ ಕಿರಿಯರಾದ ಹಾರ್ದಿಕ್ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರವಾಗಿ ಹಿರಿಯಣ್ಣ ಕೃನಾಲ್, ಈ ರೀತಿ ಘಟನೆ ನಡೆಯಬಾರದಿತ್ತು. ಇದಕ್ಕಾಗಿ ವಿಷಾದಿಸುತ್ತೇನೆ ಎಂದಿದ್ದಾರೆ.

ಮೇ 13ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿದ ಬಳಿಕ ಪಾಂಡ್ಯ ಬ್ರದರ್ಸ್ ನಡುವೆ ಡ್ರೆಸಿಂಗ್ ರೂಮಿನಲ್ಲಿ ಮಾತಿನ ಚಕಮಕಿ ನಡೆದಿದೆ ಎಂಬ ಅನುಮಾನ ಮೂಡತೊಡಗಿದೆ. ನಿಜಕ್ಕೂ ಇಬ್ಬರ ನಡುವೆ ಏನು ನಡೆಯಿತು ಎಂಬುದು ಬಹಿರಂಗವಾಗಿಲ್ಲ. ಆದರೆ, ಇಬ್ಬರು ಟ್ವಿಟ್ಟರ್ ಮೂಲಕ ತಮ್ಮ ನೋವು, ಹತಾಶೆಯನ್ನು ತೋಡಿಕೊಂಡಿದ್ದಾರೆ.

ಪಾಂಡ್ಯ ಬ್ರದರ್ಶ್ ಜಟಾಪಟಿ

ಪಾಂಡ್ಯ ಬ್ರದರ್ಶ್ ಜಟಾಪಟಿ

ಮುಂಬೈ ಇಂಡಿಯನ್ಸ್ ತಂಡದ ಪರ ಪ್ರಮುಖ ಆಲ್ ರೌಂಡರ್ಸ್ ಗಳಾಗಿ ಆಡುತ್ತಿರುವ ಇಬ್ಬರು ಆಟಗಾರರ ನಡುವೆ ವೃತ್ತಿ ವೈಷಮ್ಯ, ತಂಡಕ್ಕಾಗಿ ನೀಡುವ ಪ್ರದರ್ಶನ ಕುರಿತಂತೆ ಮಾತಿನ ಚಕಮಕಿ ನಡೆದಿರುವ ಸಂಶಯ ವ್ಯಕ್ತವಾಗಿದೆ.

ಹಾರ್ದಿಕ್ ಪಾಂಡ್ಯ ಟ್ವೀಟ್

ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ತೀರಾ ಹತ್ತಿರ ಜನರೇ ನಮಗೆ ನೋವು ನೀಡುತ್ತಾರೆ ಎಂದಿದ್ದಾರೆ. ಐಪಿಎಲ್ 10ರಲ್ಲಿ ಕೆಕೆಆರ್ ವಿರುದ್ಧ 4 ಓವರ್ ಗಳಲ್ಲಿ 22 ರನ್ನಿತ್ತು ಮನೀಶ್ ಪಾಂಡೆ ಹಾಗೂ ಕಾಲಿನ್ ವಿಕೆಟ್ ಕಿತ್ತರು. ಕೃನಾಲ್ ಅವರು 2 ಓವರ್ ಗಳಲ್ಲಿ ಕೇವಲ 14ರನ್ ನೀಡಿದ್ದರು.

ಕೃನಾಲ್

ಹಿರಿಯನಾಗಿ ನಾನು ಹೇಳಿದ್ದನ್ನು ಕೇಳಿಸಿಕೊಳ್ಳಬೇಕಿತ್ತು. ಈ ರೀತಿ ಆಗಿದ್ದು ನನಗೆ ಬೇಸರ ಉಂಟು ಮಾಡಿದೆ ಎಂದು ಕೃನಾಲ್ ಟ್ವೀಟ್

ಸೆಹ್ವಾಗ್ ಪ್ರತಿಕ್ರಿಯೆ

ಎಲ್ಲಕ್ಕಿಂತ ದುಡ್ಡು ಮುಖ್ಯ. ಆದರೆ, ಅದಕ್ಕಾಗಿ ಕಿತ್ತಾಡಬೇಡಿ ಎಂದು ಬಾಲಿವುಡ್ ಹಾಡಿನ ಸಾಲೊಂದನ್ನು ಟ್ವೀಟ್ ಮಾಡಿ ತಿಳಿ ಹೇಳಿದ ಸೆಹ್ವಾಗ್

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+