ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿ ತುಮಕೂರಲ್ಲಿ ಐಪಿಎಲ್ ನೋಡುವ ಮಜಾನೇ ಬೇರೆ!

2015ರಿಂದ ಜಾರಿಗೆ ಬಂದ ಐಪಿಎಲ್ ಫ್ಯಾನ್ ಪಾರ್ಕ್ ಗಳು ವರ್ಷದಿಂದ ವರ್ಷಕ್ಕೆ ಕ್ರೇಜ್ ಹುಟ್ಟಿಸುತ್ತಿವೆ. ಈ ಬಾರಿ ಕರ್ನಾಟಕದ ತುಮಕೂರಿನಲ್ಲೂ ಇಂಥ ಪಾರ್ಕ್ ಕಾಣಬಹುದು. ದೊಡ್ಡ ಸ್ಕ್ರೀನ್ ನಲ್ಲಿ ಪಂದ್ಯ ನೋಡಿ ಆನಂದಿಸಬಹುದು.

By Mahesh

ತುಮಕೂರು, ಏಪ್ರಿಲ್ 04: 2015ರಿಂದ ಜಾರಿಗೆ ಬಂದ ಐಪಿಎಲ್ ಫ್ಯಾನ್ ಪಾರ್ಕ್ ಗಳು ವರ್ಷದಿಂದ ವರ್ಷಕ್ಕೆ ಕ್ರೇಜ್ ಹುಟ್ಟಿಸುತ್ತಿವೆ. ಈ ಬಾರಿ ಕರ್ನಾಟಕದ ತುಮಕೂರಿನಲ್ಲೂ ಇಂಥ ಪಾರ್ಕ್ ಕಾಣಬಹುದು. ದೊಡ್ಡ ಸ್ಕ್ರೀನ್ ನಲ್ಲಿ ಪಂದ್ಯ ನೋಡಿ ಆನಂದಿಸಬಹುದು.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು ?

10 ಮೈದಾನಗಳು 47 ದಿನಗಳು, 60 ಪಂದ್ಯಗಳ ಪ್ರಸಾರವನ್ನು ಸೋನಿ ಮ್ಯಾಕ್ಸ್ ನೆಟ್ವರ್ಕ್ ನಲ್ಲಿ ನೋಡಬಹುದು. ಜತೆಗೆ ಹಾಟ್ ಸ್ಟಾರ್ (ಮೊಬೈಲ್ ಹಾಗೂ ಇಂಟರ್ನೆಟ್ ನಲ್ಲಿ 5 ನಿಮಿಷ ತಡವಾಗಿ ನೇರ ಪ್ರಸಾರ) ಅಪ್ಲಿಕೇಷನ್ ಮೂಲಕ ನೋಡಬಹುದು. ಇದೆಲ್ಲದರ ಜತೆಗೆ ವೆಬ್ ಸೈಟ್ ನಲ್ಲೂ ಪಂದ್ಯ ವೀಕ್ಷಿಸಬಹುದು.[ಐಪಿಎಲ್ 10 : ಎಲ್ಲೆಲ್ಲಿ ನೋಡಬಹುದು?]

IPL 2017: Fan Parks get bigger and better, to spread across 36 cities

ಆದರೆ, ಅಸಲಿ ಮಜಾ ನೀಡುವ ಫ್ಯಾನ್ ಪಾರ್ಕ್ ಗಳ ಸಂಖ್ಯೆ ಈ ವರ್ಷ 36ಕ್ಕೇರಿದೆ. ಕರ್ನಾಟಕದಿಂದ ತುಮಕೂರು ಹೊಸದಾಗಿ ಫ್ಯಾನ್ ಪಾರ್ಕ್ ಪಟ್ಟಿಗೆ ಸೇರಿದೆ. ಏಪ್ರಿಲ್ 05ರ ಮೊದಲ ಪಂದ್ಯವನ್ನು ಮೈಸೂರಿನಲ್ಲಿ ಕಾಣಬಹುದಾಗಿದೆ. ಇದಲ್ಲದೆ ಹುಬ್ಬಳ್ಳಿಯಲ್ಲೂ ಫ್ಯಾನ್ ಪಾರ್ಕ್ ಸೌಲಭ್ಯ ಸಿಗಲಿದೆ.

IPL fan park


2017ರ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಫ್ಯಾನ್ ಪಾರ್ಕ್ ಗಳನ್ನು ಏಪ್ರಿಲ್ 05ರಂದು ಮೈಸೂರು, ಗುವಾಹಟಿ, ಮಥುರಾ, ಔರಂಗಾಬಾದ್ ನಲ್ಲಿ ಕಾಣಬಹುದು.
IPL fan park

ದೊಡ್ಡ ಸ್ಕ್ರೀನ್ ನಲ್ಲಿ ಐಪಿಎಲ್ ನ ಸ್ಟಾರ್ ಆಟಗಾರರನ್ನು ನೋಡಿ ಅನಂದಿಸುವುದರ ಜತೆಗೆ ಮಳಿಗೆಗಳಲ್ಲಿ ಶಾಪಿಂಗ್, ಈಟಿಂಗ್ ಮಾಡಬಹುದು.2015ರಲ್ಲಿ 16 ನಗರಗಳಲ್ಲಿ ಆರಂಭವಾದ ಫ್ಯಾನ್ ಪಾರ್ಕ್ ಗಳು ಈಗ 21 ರಾಜ್ಯಗಳ 36 ನಗರಗಳಿಗೆ ವಿಸ್ತರಣೆಗೊಂಡಿದೆ.

IPL fan park

ಭುವನೇಶ್ವರ, ಬರೇಲಿ, ಕೊಚ್ಚಿ, ಲೂಧಿಯಾನಾ, ತುಮಕೂರು ಹಾಗೂ ನಾಗರಕೋಯಿಲ್ ಅಲ್ಲದೆ ಶಿಮ್ಲಾ, ಶಿಲ್ಲಾಂಗ್ ನಲ್ಲೂ ಫ್ಯಾನ್ ಪಾರ್ಕ್ ಗಳು ಆರಂಭವಾಗಲಿವೆ.(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X