ಹರಾಜು ನಂತರ ವಿರಾಟ್ ಕೊಹ್ಲಿ ಆರ್ ಸಿಬಿ ಪಡೆ ಹೀಗಿದೆ
ಬೆಂಗಳೂರು, ಫೆಬ್ರವರಿ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ರ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಭರ್ಜರಿ ಬೆಳೆ ಪಡೆದುಕೊಂಡಿದೆ. ಪ್ರತಿಭಾವಂತ ವೇಗಿ ಇಂಗ್ಲೆಂಡಿನ ತೈಮಲ್ ಮಿಲ್ಸ್ ರನ್ನು 12 ಕೋಟಿ ರು ನೀಡಿ ಪಡೆಯುವ ಮೂಲಕ ಸ್ಟಾರ್ಕ್ ಜಾಗವನ್ನು ತುಂಬವ ಪ್ರಯತ್ನ ಮಾಡಿದೆ. ಹರಾಜಿನ ನಂತರ ಆರ್ ಸಿಬಿ ತಂಡದ ಸಮತೋಲನ ಹೇಗಿದೆ ಮುಂದೆ ಓದಿ
ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತಿ ಹೆಚ್ಚು(8) ವಿದೇಶಿ ಆಟಗಾರರನ್ನು ಹೊಂದಿರುವ ತಂಡವಾಗಿತ್ತು. ತಂಡವೊಂದು ಹೊಂದಬಹುದಾದ ವಿದೇಶಿ ಆಟಗಾರರ ಸಂಖ್ಯೆ 9 ಮೀರಬಾರದು ಎಂಬ ನಿಯಮವಿದೆ. [ವಿಡಿಯೋ : ಆರ್ ಸಿಬಿ ತಂಡದ ನಿಜವಾದ ಶಕ್ತಿ ಯಾರು?]
ಈಗ ಮಿಲ್ಸ್ ಖರೀದಿಸುವ ಮೂಲಕ ಈ ಕೋಟಾ ಪೂರ್ಣಗೊಳಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡ ಕಳೆದ ಬಾರಿ ಆಡಿದ 20 ಆಟಗಾರರನ್ನು ಉಳಿಸಿಕೊಂಡಿತ್ತು. [ಐಪಿಎಲ್ 2017 : ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]
ಕಳೆದ ಬಾರಿ ಕೊಹ್ಲಿ 15 ಕೋಟಿ ರು ನೀಡಿ ಆರ್ ಸಿಬಿಯಲ್ಲೇ ಉಳಿಸಿಕೊಳ್ಳಲಾಗಿದೆ. ಹಾಗಾದರೆ ಅರ್ ಸಿಬಿ ಮನಿ ಬ್ಯಾಲೆನ್ಸ್ ಹಾಗೂ ತಂಡದ ಬ್ಯಾಲೆನ್ಸ್, ಆಟಗಾರರ ಮುಂದೆ ಓದಿ...

ಹರಾಜಿನ ನಂತರ
ಇಲ್ಲಿ ತನಕ ಆಟಗಾರರ ಹರಾಜಿಗಾಗಿ 53.175 ಕೋಟಿ ರು ಖರ್ಚು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ 10 ಹರಾಜಿಗೆ 12.85 ಕೋಟಿ ರು ನೊಂದಿಗೆ ಬಿಡ್ಡಿಂಗಿಗೆ ಇಳಿದು ಪರ್ಸ್ ಬಹುತೇಕ ಖಾಲಿ ಮಾಡಿಕೊಂಡಿದೆ. 2.42 ಕೋಟಿ ರು ಮಾತ್ರ ಆರ್ ಸಿಬಿ ಬಳಿ ಇದೆ.

ಬ್ಯಾಟ್ಸ್ ಮನ್ ಗಳು
* ಸಚಿನ್ ಬೇಬಿ (ಉಳಿಸಿಕೊಂಡ ಆಟಗಾರ)
* ಎ ಬಿ ಡಿವಿಲಿಯರ್ಸ್ (ಉಳಿಸಿಕೊಂಡ ಆಟಗಾರ + ವಿದೇಶಿ ಆಟಗಾರ)
* ಟ್ರಾವಿಸ್ ಹೆಡ್ (ಉಳಿಸಿಕೊಂಡ ಆಟಗಾರ + ವಿದೇಶಿ ಆಟಗಾರ)
* ಕೇಧಾರ್ ಜಾಧವ್ (ಉಳಿಸಿಕೊಂಡ ಆಟಗಾರ)
* ಸರ್ಫರಾಜ್ ಖಾನ್ (ಉಳಿಸಿಕೊಂಡ ಆಟಗಾರ)
* ವಿರಾಟ್ ಕೊಹ್ಲಿ (ನಾಯಕ) (ಉಳಿಸಿಕೊಂಡ ಆಟಗಾರ)
* ಕೆಎಲ್ ರಾಹುಲ್ (ವಿಕೆಟ್ ಕೀಪರ್) (ಉಳಿಸಿಕೊಂಡ ಆಟಗಾರ)

ಗೇಲ್ ಸೇರಿ 5 ಆಲ್ ರೌಂಡರ್ಸ್
* ಕ್ರಿಸ್ ಗೇಲ್ (ಉಳಿಸಿಕೊಂಡ ಆಟಗಾರ + ವಿದೇಶಿ ಆಟಗಾರ)
* ಮನ್ದೀಪ್ ಸಿಂಗ್ (ಉಳಿಸಿಕೊಂಡ ಆಟಗಾರ)
* ಸ್ಟುವರ್ಟ್ ಬಿನ್ನಿ (ಉಳಿಸಿಕೊಂಡ ಆಟಗಾರ)
* ಪ್ರವೀಣ್ ದುಬೇ (ಐಪಿಎಲ್ 2017 ಹರಾಜಿನಲ್ಲಿ ಖರೀದಿ)
* ಶೇನ್ ವಾಟ್ಸನ್ (ಉಳಿಸಿಕೊಂಡ ಆಟಗಾರ + ವಿದೇಶಿ ಆಟಗಾರ)

ತೈಮರ್ ಮಿಲ್ಸ್ ಸೇರಿ 7
ಎಸ್ ಅರವಿಂದ್ (ಉಳಿಸಿಕೊಂಡ ಆಟಗಾರ)
ಎ ಚೌಧರಿ (ಖರೀದಿ)
ಅರ್ಷದ್ ಖಾನ್ (ಉಳಿಸಿಕೊಂಡ ಆಟಗಾರ)
ತೈಮರ್ ಮಿಲ್ಸ್ (ಖರೀದಿ)
ಆಡಂ ಮಿಲ್ನೆ (ಉಳಿಸಿಕೊಂಡ ಆಟಗಾರ + ವಿದೇಶಿ ಆಟಗಾರ)
ಹರ್ಷಲ್ ಪಟೇಲ್ (ಉಳಿಸಿಕೊಂಡ ಆಟಗಾರ)
ಎ ಸ್ಟಾನ್ಲೇಕ್ (ಖರೀದಿ)

ಚಾಹಲ್ ಜತೆಗೆ ನಾಲ್ವರು
ಇಕ್ಬಾಲ್ ಅಬ್ದುಲ್ಲಾ (ಉಳಿಸಿಕೊಂಡ ಆಟಗಾರ)
ಸ್ಯಾಮುಯಲ್ ಬದ್ರಿ (ಉಳಿಸಿಕೊಂಡ ಆಟಗಾರ + ವಿದೇಶಿ)
ಯಜುವೇಂದ್ರ ಚಾಹಲ್ (ಉಳಿಸಿಕೊಂಡ ಆಟಗಾರ)
ಪವನ್ ನೇಗಿ (ಖರೀದಿ)
ಶಮ್ಶಿ(ಉಳಿಸಿಕೊಂಡ ಆಟಗಾರ + ವಿದೇಶಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications