ಗುಜರಾತ್ ಗೆ ಆಘಾತ, ಆಂಡ್ರೊ ಟೈ ಐಪಿಎಲ್ ನಿಂದ ಔಟ್!
ರಾಜ್‌ಕೋಟ್, ಮೇ 01 : 10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ ಪ್ಲೇ ಆಫ್ ಹಂತದ ಪಂದ್ಯಗಳು ಇನ್ನೇನು ಆರಂಭವಾಗುತ್ತಿರುವ ನಡುವೆಯೇ ಗುಜರಾತ್ ಲಯನ್ಸ್ ಗೆ ಆಘಾತವಾಗಿದೆ.
ಗಾಯದ ಸಮಸ್ಯೆಯಿಂದಾಗಿ ಗುಜರಾತ್ ಲಯನ್ಸ್ ತಂಡದ ಪ್ರಮುಖ ಬೌಲರ್ ಆಂಡ್ರೊ ಟೈ ಅವರು, ಸಧ್ಯ ನಡೆಯುತ್ತಿರುವ 10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಹೊರಬಿದ್ದಿದ್ದಾರೆ.
ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೌಂಡರಿ ತಡೆಯುವ ರಭಸದಲ್ಲಿ ಟೈ, ತಮ್ಮ ಭುಜಕ್ಕೆ ಪೆಟ್ಟು ಮಾಡಿಕೊಂಡರು.

ಈ ವೇಳೆ ಅವರ ಭುಜದ ಮೂಳೆಯ ಕೀಲು ತಪ್ಪಿದ್ದು, ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದ ತಂಡ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲ ಬಾರಿ ಐಪಿಎಲ್ ನಲ್ಲಿ ಆಡುತ್ತಿರುವ ಆಂಡ್ರೊ ಟೈ, ಪಾದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಆಡಿದ 6 ಪಂದ್ಯಗಳಲ್ಲಿ 12 ವಿಕೆಟ್'ಗಳನ್ನು ಕಬಳಿಸಿದ್ದ ಟೈ, ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಟೈ ಅನುಪಸ್ಥಿತಿ ಗುಜರಾತ್ ಲಯನ್ಸ್ ತಂಡಕ್ಕೆ ಕಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications