ತವರಿನ ಅಂಗಳದಲ್ಲಿ ಕೋಲ್ಕತಾ ವಿರುದ್ಧ ಪಂಜಾಬ್ ಜಯದ ಕೇಕೆ
ಮೊಹಾಲಿ, ಮೇ 9: ವೇಗಿ ಮೋಹಿತ್ ಶರ್ಮಾ ಹಾಗೂ ಸ್ಪಿನ್ನರ್ ತೆವಾಟಿಯಾ ಅವರ ಬೌಲಿಂಗ್ ನ ಪ್ರಭಾವದಿಂದಾಗಿ ಆತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಮಂಗಳವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 14 ರನ್ ಗಳ ಜಯ ಸಾಧಿಸಿತು.
ಇಲ್ಲಿನ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿದರೆ, ಆನಂತರ ಬ್ಯಾಟಿಂಗ್ ಗೆ ಇಳಿದ ಕೋಲ್ಕತಾ ನೈಟ್ ರೈಡರ್ಸ್ ಪಡೆ, 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಮಾತ್ರ ಗಳಿಸಿತು.[ಸ್ಕೋರ್ ವಿವರ]

ಟಾಸ್ ಗೆದ್ದ ಕೋಲ್ಕತಾ ತಂಡದ ನಾಯಕ ಗೌತಮ್ ಗಂಭೀರ್, ಪಂಜಾಬ್ ತಂಡಕ್ಕೆ ಮೊದಲು ಬ್ಯಾಟ್ ಮಾಡುವ ಅವಕಾಶ ಮಾಡಿಕೊಟ್ಟರು.
ಅದರಂತೆ, ಬ್ಯಾಟಿಂಗ್ ಗೆ ಇಳಿದ ಪಂಜಾಬ್ ತಂಡವು ಆರಂಭಿಕರಾದ ಮಾರ್ಟಿನ್ ಗುಪ್ಟಿಲ್ ಹಾಗೂ ಮನನ್ ವೊಹ್ರಾ ಅವರನ್ನು ಬೇಗನೇ ಕಳೆದುಕೊಂಡಿತಾದರೂ, ಮಧ್ಯಮ ಕ್ರಮಾಂಕದ ವೃದ್ಧಿಮಾನ್ ಸಾಹಾ (38) ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ (44) ಅವರ ಚೇತೋಹಾರಿ ಆಟದಿಂದ 167 ರನ್ ಗಳ ಉತ್ತಮ ಮೊತ್ತ ದಾಖಲಿಸಿತು.
ಈ ಸವಾಲನ್ನು ಬೆನ್ನಟ್ಟಿದ ಕೋಲ್ಕತಾ ಸಹ ಆರಂಭಿಕ ಸುನಿಲ್ ನಾರಾಯಣ್ ಅವರನ್ನು ಬೇಗನೇ ಕಳೆದುಕೊಂಡರೂ, ಮತ್ತೊಬ್ಬ ಬಲಿಷ್ಠ ಆರಂಭಿಕ ಕ್ರಿಸ್ ಲಿನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಗೆಲುವಿನ ಭರವಸೆ ಮೂಡಿಸಿತ್ತು.
ಆದರೆ, ಅವರಿಗೆ ತಂಡದ ಯಾರೊಬ್ಬರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಪ್ರಮುಖ ಬ್ಯಾಟ್ಸ್ ಮನ್ ಗಳಾದ ಗೌತಮ್ ಗಂಭೀರ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಗ್ರಾಂಡ್ ಹೋಮ್, ಯೂಸುಫ್ ಪಠಾಣ್ ಬೇಗನೇ ಪೆವಿಲಿಯನ್ ಗೆ ಮರಳಿದ್ದು ತಂಡಕ್ಕೆ ಮುಳುವಾಯಿತು.
ಇನ್ನು, 84 ರನ್ ಗಳಿಸಿದ್ದ ಲಿನ್ ಕೂಡಾ 18ನೇ ಓವರ್ ನಲ್ಲಿ ವಿಕೆಟ್ ಚೆಲ್ಲಿದ್ದು ಕೋಲ್ಕತಾದ ಸೋಲಿನ ಹಾದಿಯನ್ನು ಸ್ಪಷ್ಟವಾಗಿಸಿತು. ಅಂತೆಯೇ, 20 ಓವರ್ ಗಳಲ್ಲಿ ಕೋಲ್ಕತಾ, 153 ರನ್ ಮಾತ್ರ ಗಳಿಸಲು ಶಕ್ತವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications