Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 10 : ಎಲ್ಲೆಲ್ಲಿ ನೋಡಬಹುದು? ಯಾವ ವೆಬ್ ಸೈಟಿನಲ್ಲಿ ಬರುತ್ತೆ?

ಬೆಂಗಳೂರು, ಏಪ್ರಿಲ್ 04: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 10ನೇ ಆವೃತ್ತಿಯ ಆರಂಭಕ್ಕೆ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಯುವ ಪ್ರತಿಭೆಗಳು, ಟೀಂ ಇಂಡಿಯಾವನ್ನು ಮತ್ತೆ ಸೇರಲು ಬಯಸುತ್ತಿರುವ ಆಟಗಾರರು, ಹೊಸ ಅನುಭವ ಪಡೆಯಲು ಬಂದಿರುವ ವಿದೇಶಿ ಆಟಗಾರರಿಗೆ ಈ ಮನರಂಜನೆಯುಕ್ತ ಕ್ರಿಕೆಟ್ ಲೀಗ್ ವೇದಿಕೆ ಒದಗಿಸುತ್ತಿದೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು ?

ಹೈದರಾಬಾದಿನಲ್ಲಿ ಏಪ್ರಿಲ್ 05 ರಿಂದ ಆರಂಭವಾಗುತ್ತಿರುವ ಐಪಿಎಲ್ ಎಲ್ಲೆಲ್ಲಿ ಪ್ರಸಾರವಾಗಲಿದೆ? ಯಾವ ವೆಬ್ ಸೈಟ್ ಗಳಲ್ಲಿ ನೋಡಬಹುದು? ಪ್ರಸಾರಕರು ಯಾರು ಎಂಬುದರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.

IPL 2017 Live on TV, streaming: Full list of broadcasters across the world


ಐಪಿಎಲ್ ನ ಎಲ್ಲಾ ಪಂದ್ಯಗಳ ಪ್ರಸಾರ ಮಾಡುವ ಹಕ್ಕನ್ನು ಸೋನಿ ಪಿಕ್ಚರ್ಸ್ ನೆಟ್ವರ್ಕ್ (ಎಸ್ ಪಿಎನ್) ಪಡುಕೊಂಡಿದೆ ಏಪ್ರಿಲ್ 05ರ ಉದ್ಘಾಟನಾ ಸಮಾರಂಭ, ಸೈನ್ ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೊದಲ ಪಂದ್ಯದಿಂದ ಆರಂಭಗೊಂಡು ಮೇ 21ರ ತನಕ ಪಂದ್ಯಗಳ ನೇರ ಪ್ರಸಾರ ನೋಡಿ ಆನಂದಿಸಬಹುದು.

10 ಮೈದಾನಗಳು 47 ದಿನಗಳು, 60 ಪಂದ್ಯಗಳ ಪ್ರಸಾರವನ್ನು ಸೋನಿ ಮ್ಯಾಕ್ಸ್ ನೆಟ್ವರ್ಕ್ ನಲ್ಲಿ ನೋಡಬಹುದು. ಜತೆಗೆ ಹಾಟ್ ಸ್ಟಾರ್ (ಮೊಬೈಲ್ ಹಾಗೂ ಇಂಟರ್ನೆಟ್ ನಲ್ಲಿ 5 ನಿಮಿಷ ತಡವಾಗಿ ನೇರ ಪ್ರಸಾರ) ಅಪ್ಲಿಕೇಷನ್ ಮೂಲಕ ನೋಡಬಹುದು.

ಈ ಬಾರಿ ಐಪಿಎಲ್ ಪಂದ್ಯಗಳ ವೀಕ್ಷಕ ವಿವರಣೆಯನ್ನು ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಹಾಗೂ ಬೆಂಗಾಲಿ ಭಾಷೆಯಲ್ಲೂ ಕೇಳಬಹುದು.

ಐಪಿಎಲ್ ಟಿವಿ ಹಾಗೂ ಡಿಜಿಟಲ್ ಪ್ರಸಾರವಾಗುವ ಚಾನೆಲ್ ಗಳ ವಿವರ:

* ಸೋನಿ ಪಿಕ್ಚರ್ಸ್ ನೆಟ್ವರ್ಕ್ (ಎಸ್ ಪಿಎನ್), ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ ಡಿ, ಸೋನಿ ಮ್ಯಾಕ್ಸ್, ಸೋನಿ ಮ್ಯಾಕ್ಸ್ ಎಚ್ ಡಿ : ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಭೂತಾನ್, ಮಾಲ್ಡೀವ್ ಹಾಗೂ ಇನ್ನಿತರ ಕಾಮನ್ ವೆಲ್ತ್ ರಾಷ್ಟ್ರಗಳು

* ಹಾಟ್ ಸ್ಟಾರ್ : ಇಂಡಿಯಾ

* ಇಎಸ್ ಪಿಎನ್ ಹಾಗೂ ವಿಲ್ಲೋ ಟಿವಿ : ಯುಎಸ್ಎ ಹಾಗೂ ಇನ್ನಿತರ ರಾಷ್ಟ್ರಗಳು

* ಸೂಪರ್ ಸ್ಫೋರ್ಟ್ : ದಕ್ಷಿಣ ಅಫ್ರಿಕಾ ಹಾಗು ಸಬ್ ಸಹಾರನ್ ಅಫ್ರಿಕಾ

* ಸ್ಕೈ ಸ್ಫೋರ್ಟ್ಸ್ : ಯುಕೆ, ರಿಪಬ್ಲಿಕ್ ಆಫ್ ಐರ್ಲೆಂಡ್, ಯುರೋಪಿಯನ್ ದೇಶಗಳು

* ಕ್ರಿಕೆಟ್ ಗೇಟ್ ವೇ. ಕಾಮ್- ಭಾರತೀಯ ಉಪಖಂಡ, ಆಸ್ಟ್ರೇಲಿಯಾ, ಎಸ್ಇಎ, ಕೆನಡಾ, ದಕ್ಷಿಣ ಆಮೆರಿಕಾ, ಹಾಂಕಾಂಗ್ (ನೌಟಿವಿ)
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+