ಐಪಿಎಲ್ 10 : ಬೆಂಗಳೂರು ವಿರುದ್ಧ ಹೈದರಾಬಾದಿಗೆ 35ರನ್ ಗಳ ಜಯ
ಹೈದರಾಬಾದ್, ಏಪ್ರಿಲ್ 05: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ 10ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 35ರನ್ ಗಳಿಂದ ಸೋಲು ಕಂಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿಗೆ ಹೈದರಾಬಾದ್ ತಂಡ 208ರನ್ ಟಾರ್ಗೆಟ್ ನೀಡಿತ್ತು. ಆರ್ ಸಿಬಿ 172 ರನ್ ಗಳಿಸಿ ಆಲೌಟಾಗಿ ಸೊಲೊಪ್ಪಿಕೊಂಡಿತು.
ಆರ್ ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಶೇನ್ ವಾಟ್ಸನ್ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೈದರಾಬಾದಿಗೆ ಡೇವಿಡ್ ವಾರ್ನರ್ ನಾಯಕರಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೇಸ್ :
* 19.4 ಓವರ್ ಗಳಲ್ಲಿ 172 ಸ್ಕೋರಿಗೆ ಆಲೌಟ್ ಆಗಿ ಸೊಲೊಪ್ಪಿಕೊಂಡಿತು.
* ಹೈದ್ರಾಬಾದ್ ಪರ ಆಶೀಶ್ ನೆಹ್ರಾ, ಭುವನೇಶ್ವರ್ ಕುಮಾರ್, ರಶೀದ್ ಖಾನ್ ತಲಾ 2 ವಿಕೆಟ್ ಪಡೆದರು.
* ಶೇನ್ ವಾಟ್ಸನ್ 22, ಕೇದಾರ್ ಜಾಧವ್ 31, ಟ್ರಾವಿಸ್ ಹೆಡ್ 30 ಸ್ಕೋರ್ ಗಳಿಸಿದರೂ ಪ್ರಯೋಜನವಾಗಲಿಲ್ಲ.
* ಕ್ರಿಸ್ ಗೇಲ್ 32, ಮನ್ದೀಪ್ ಸಿಂಗ್ 24ರನ್ ಗಳಿಸಿ ಔಟಾದರು.
* ಆಶೀಶ್ ನೆಹ್ರಾ ಅವರು ಮೊದಲ ಓವರ್ ಎಸೆದಿದ್ದು, ಆರ್ ಸಿಬಿ 11/0 ಸ್ಕೋರ್ ಮಾಡಿ, ಉತ್ತಮ ಆರಂಭ ಪಡೆದಿದೆ.
* ಕ್ರಿಸ್ ಗೇಲ್ ಹಾಗೂ ಮನ್ದೀಪ್ ಸಿಂಗ್ ಅವರು ಆರಂಭಿಕ ಅಟಗಾರರಾಗಿ ಕಣಕ್ಕಿಳಿದಿದ್ದಾರೆ. 207ರನ್ ಗಡಿ ದಾಟಿದರೆ ಹೊಸ ದಾಖಲೆ ನಿರ್ಮಾಣವಾಗಲಿದೆ.
* 203ರನ್ ಚೇಸ್ ಮಾಡಿರುವುದು ಆರ್ ಸಿಬಿಯ ಇಲ್ಲಿ ತನಕದ ದಾಖಲೆಯಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್ :
* 18 ಓವರ್ ಗಳ ಅಂತ್ಯಕ್ಕೆ 179/3 ಸ್ಖೋರ್ ಮಾಡಿದ್ದ ಹೈದರಾಬಾದ್, 19.4 ಓವರ್ ಗಳಲ್ಲಿ 201/4 ಗಳಿಸಿತು. ಅಂತಿಮವಾಗಿ 20 ಓವರ್ ಗಳಲ್ಲಿ 207/4 ಸ್ಕೋರ್ ಮಾಡಿದೆ.
* ಅಂತಿಮವಾಗಿ ಯುವರಾಜ್ 27 ಎಸೆತಗಳಲ್ಲಿ 62 ರನ್(7x4, 3x6) ಚೆಚ್ಚಿ ಭಾರಿ ಹೊಡೆತಕ್ಕೆ ಯತ್ನಿಸಿ, ಮಿಲ್ಸ್ ಎಸೆತಕ್ಕೆ ಬೋಲ್ಡ್ ಆದರು.
* ಯುವರಾಜ್ ಸಿಂಗ್ ಭರ್ಜರಿ ಆಟವಾಡಿ 23 ಎಸೆತಗಳಲ್ಲಿ 51ರನ್ ಚೆಚ್ಚಿ, ವೈಯಕ್ತಿಕವಾಗಿ ಐಪಿಎಲ್ ನ ತ್ವರಿತ ಅರ್ಧಶತಕ ಬಾರಿಸಿದರು.
* ಮೋಯಿಸ್ ಹೆನ್ರಿಕ್ಯೂಸ್ 37 ಎಸೆತಗಳಲ್ಲಿ 52 ರನ್ (3x4, 2x6) ಚೆಚ್ಚಿ ಯಜುವೇಂದ್ರ ಚಾಹಲ್ ವಿಕೆಟ್ ನೀಡಿದರು.
* 15 ಓವರ್ ಗಳಲ್ಲಿ 151/2 ಸ್ಕೋರ್ ಮಾಡಿರುವ ಹೈದರಾಬಾದ್ ಭರ್ಜರಿ ಮೊತ್ತದತ್ತ ದಾಪುಗಾಲು ಇಟ್ಟಿದೆ.
* 11 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 98ರನ್ ಸ್ಕೋರ್ ಮಾಡಿದೆ.
* ಶಿಖರ್ ಧವನ್ ಉತ್ತಮ ಆಟ ಪ್ರದರ್ಶಿಸಿ 31 ಎಸೆತಗಳಲ್ಲಿ 40ರನ್ (5x4) ಗಳಿಸಿ ಸ್ಟುವರ್ಟ್ ಬಿನ್ನಿಗೆ ಬಲಿಯಾದರು.
* ನಾಯಕ ಡೇವಿಡ್ ವಾರ್ನರ್ 8 ಎಸೆತಗಳಲ್ಲಿ 14 ರನ್ ಗಳಿಸಿ ಅನಿಕೇತ್ ಚೌಧರಿಗೆ ವಿಕೆಟ್ ಒಪ್ಪಿಸಿದರು.

ಮೊದಲ ಪಂದ್ಯ:
ಸನ್ ರೈಸರ್ಸ್ ಹೈದರಾಬಾದ್ ಪರ 18 ವರ್ಷ ವಯಸ್ಸಿನ ಲೆಗ್ ಸ್ಪಿನ್ನರ್ ರಷಿದ್ ಖಾನ್ ಮೊದಲ ಪಂದ್ಯವಾಡುತ್ತಿದ್ದಾರೆ. ಐಪಿಎಲ್ ನಲ್ಲಿ ಚೊಚ್ಚಲ ಪಂದ್ಯವಾಡುತ್ತಿರುವ ಮೊದಲ ಅಫ್ಘಾನಿಸ್ತಾನಿ ಆಟಗಾರ ಎನಿಸಿಕೊಂಡಿದ್ದಾರೆ. ಹರಾಜಿನಲ್ಲಿ 4 ಕೋಟಿ ರುಗೆ ಖರೀದಿಸಲಾಗಿದೆ.
ಆರ್ ಸಿಬಿ ಪರ ಇಂಗ್ಲೆಂಡಿನ ಎಡಗೈ ವೇಗಿ ತೈಮುಲ್ ಮಿಲ್ಸ್ ಮೊದಲ ಪಂದ್ಯವಾಡುತ್ತಿದ್ದು, ಈ ಬಾರಿಯ ಐಪಿಎಲ್ ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

ತಂಡಗಳು:
ಏಪ್ರಿಲ್ 5 ರಿಂದ ಮೇ 14 ರ ತನಕ ಐಪಿಎಲ್ ಟಿ20 ಹಬ್ಬ ನಡೆಯಲಿದೆ. ಈ ಬಾರಿಯ ಉದ್ಘಾಟನಾ ಪಂದ್ಯವು ಕಳೆದ ವರ್ಷದ ಫೈನಲ್ ಪಂದ್ಯದ ಪುನಾರಾವರ್ತನೆ ಪಂದ್ಯವಾಗಲಿದೆ.
ಯಾವಾಗ?: ಎಲ್ಲಾ ಪಂದ್ಯಗಳ ಸಮಯ ಭಾರತೀಯ ಕಾಲಮಾನದ ಪ್ರಕಾರ All times in IST (GMT +5.30) ಮೂರು ಪಂದ್ಯಗಳು 4 ಗಂಟೆಗೆ ಆರಂಭ, ಮಿಕ್ಕ ಪಂದ್ಯಗಳು 8 ಗಂಟೆಗೆ ಶುರು.
ಎಲ್ಲಿ ನೋಡುವುದು?: ಐಪಿಎಲ್ ಪಂದ್ಯಗಳು ಸೋನಿ ಚಾನೆಲ್, ಸೋನಿ ಇಎಸ್ ಪಿಎನ್, ಸೋನಿ ಮ್ಯಾಕ್ಸ್ ನಲ್ಲಿ ನೇರ ಪ್ರಸಾರವಾಗಲಿದೆ. ಹಾಟ್ ಸ್ಟಾರ್ (5 ನಿಮಿಷ ವಿಳಂಬ), ಕ್ರಿಕೆಟ್ ಗೇಟ್ ವೇ.ಕಾಂ ವೆಬ್ ಸೈಟ್ ನಲ್ಲೂ ಲಭ್ಯವಿದೆ.
10 ಮೈದಾನಗಳು 47 ದಿನಗಳು, 60 ಪಂದ್ಯಗಳನ್ನು ದೇಶದ 36 ತಾಣಗಳಲ್ಲಿ (ಕರ್ನಾಟಕದಿಂದ ಮೈಸೂರು, ಹುಬ್ಬಳ್ಳಿ, ತುಮಕೂರು) ಫ್ಯಾನ್ ಪಾರ್ಕ್ ಗಳಲ್ಲಿ ಕೂತು ವೀಕ್ಷಿಸಬಹುದು.
(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications