Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ : ಪಂಜಾಬ್ ವಿರುದ್ಧ ಕೆಕೆಆರ್ ಗೆ ಸುಲಭ ಜಯ

ಕೋಲ್ಕತ್ತಾ, ಏಪ್ರಿಲ್ 13: ಐಪಿಎಲ್ 10ರ 11ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕಿಂಗ್ಸ್ ‍ಎಲೆವನ್ ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಿ 170ರನ್ ಗಳಿಸಿತ್ತು. ಕೇವಲ 2 ವಿಕೆಟ್ ಕಳೆದುಕೊಂಡು ಗಂಭೀರ್ ಪಡೆ ಈ ಗುರಿ ತಲುಪಿತು.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಕೆಕೆಆರ್ ರನ್ ಚೇಸ್ : ಗೌತಮ್ ಗಂಭೀರ್ ಜತೆ ಸುನಿಲ್ ನಾರಾಯಣ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದು ಭರ್ಜರಿ ಪ್ರದರ್ಶನ ನೀಡಿದರು.[ಐಪಿಎಲ್ 2017: ಅಂಕಪಟ್ಟಿ]

18ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸ್ ಸಿಡಿಸಿ 37ರನ್ ಗಳಿಸಿ ಔಟಾದರು. ರಾಬಿನ್ ಉತ್ತಪ್ಪ 16 ಎಸೆತಗಳಲ್ಲಿ 26ರನ್ ಚೆಚ್ಚಿದರೆ, ಮನೀಶ್ ಪಾಂಡೆ 16 ಎಸೆತಗಳಲ್ಲಿ 25ರನ್ ಗಳಿಸಿ ಔಟಾಗದೆ ಉಳಿದರು.[ತುಮಕೂರಲ್ಲಿ ಐಪಿಎಲ್ ನೋಡುವ ಮಜಾನೇ ಬೇರೆ!]

ನಾಯಕ ಗಂಭೀರ್ ಅದ್ಭುತ ಆಟ ಪ್ರದರ್ಶಿಸಿ, 49 ಎಸೆತಗಳಲ್ಲಿ 72ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

IPL 2017: Match 11: Kolkata win toss, elect to bowl against Punjab

ಪಂಜಾಬ್ ಇನ್ನಿಂಗ್ಸ್ : ಹಶೀಂ ಆಮ್ಲಾ 25 ಹಾಗೂ ಮನನ್ ವೋಹ್ರಾ 28ರನ್ ಗಳಿಸಿ ಉತ್ತಮ ಆರಂಭ ನೀಡಿದರು. ನಂತರ ಮ್ಯಾಕ್ಸ್ ವೆಲ್ 14 ಎಸೆತಗಳಲ್ಲಿ 25ರನ್ ಚೆಚ್ಚಿದರು.

ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ 28ರನ್ ಗಳಿಸಿ ಔಟಾದರು. ವೃದ್ಧಿಮಾನ್ ಸಹಾ ತ್ವರಿತಗತಿಯಲ್ಲಿ ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.ಸಹಾ 25ರನ್ ಗಳಿಸಿ ಔಟಾದರು. ನಿಯಮಿತವಾಗಿ ವಿಕೆಟ್ ಕಳೆದುಕೊಂದು 170 ರನ್ ಗಳಿಸಿತು. ಉಮೇಶ್ ಯಾದವ್ 33ರನ್ನಿತ್ತು 4 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು.

ಟಾಸ್ ಗೆದ್ದ ಕೆಕೆಆರ್ ನಾಯಕ ಗೌತಮ್ ಗಂಭೀರ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಕೆಕೆಆರ್ ತಂಡದಲ್ಲಿ ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.

ವೇಗಿ ಉಮೇಶ್ ಯಾದವ್ ಮೊದಲ ಪಂದ್ಯವಾಡುತ್ತಿದ್ದರೆ, ಸ್ಪಿನ್ನರ್ ಪಿಯೂಷ್ ಚಾವ್ಲಾ ತಂಡ ಸೇರಿದ್ದಾರೆ. ಅಂಕಿತ್ ರಜಪೂತ್, ಕುಲದೀಪ್ ಯಾದವ್ ಇಂದಿನ ಪಂದ್ಯವಾಡುತ್ತಿಲ್ಲ. ಪಂಜಾಬ್ ತಂಡದಲ್ಲಿ ಟಿ ನಟರಾಜನ್ ಬದಲಿಗೆ ಇಶಾಂತ್ ಶರ್ಮ ಕಣಕ್ಕಿಳಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+