ಕೆಕೆಆರ್ ಗೆ 169 ರನ್ ಗಳ ಸವಾಲಿನ ಗುರಿ ನೀಡಿದ ಡೆಲ್ಲಿ
ನವದೆಹಲಿ, ಏಪ್ರಿಲ್ 17 : ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುರುವ ಐಪಿಎಲ್ ಹತ್ತನೇ ಆವೃತ್ತಿಯ 17ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ ವಿರುದ್ಧ ಡೆಲ್ಲಿ 168 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್ ಗಳ ಸವಾಲಿನ ಗುರಿ ನೀಡಿದೆ.

ಡೆಲ್ಲಿ ಪರ ಸಂಜು ಸ್ಯಾಮ್ಸನ್ 39, ಸ್ಯಾಮ್ ಬಿಲ್ಲಿಂಗ್ಸ್ 21, ಕರುಣ್ ನಾಯರ್ 21, ಶ್ರೇಯಸ್ ಐಯರ್ 26, ರಿಷಭ್ ಪಂತ್ 38, ಏಂಜೆಲೊ ಮ್ಯಾಥ್ಯೂಸ್ 01, ಕ್ರಿಸ್ ಮೋರಿಸ್ 16 , ಕಮ್ಮಿನ್ಸ್ ಬ್ಯಾಟಿಂಗ್ 03 ರನ್ ಗಳಿಸಿದ್ದಾರೆ.
ಕೆಕೆಆರ್ ಪರ ನಾಥನ್ ಕೌಲ್ಟರ್ ನೈಲ್ 3, ಕ್ರಿಸ್ ವೋಕ್ಸ್ 1, ಉಮೇಶ್ ಯಾದವ್ 1, ಸುನೀಲ್ ನರೇನ್ 1 ವಿಕೆಟ್ ಪಡೆದಿದ್ದಾರೆ.
ತವರಿನಾಂಗಳದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿರುವ ಗೌತಮ್ ಗಂಭೀರ್ ಸಾರಥ್ಯದ ಕೋಲ್ಕತ್ತ ನೈಟ್‌ರೈಡರ್ಸ್ ತಂಡ ಡೆಲ್ಲಿ ತಂಡವನ್ನು ಮಣಿಸಿ ಹ್ಯಾಟ್ರಿಕ್' ಜಯ ಸಾಧಿಸುವ ತವಕದಲ್ಲಿದೆ.
ಡೆಲ್ಲಿ ಡೇರ್ ಡೆವಿಲ್ಸ್ ಕೂಡ ಗೆಲುವಿನ 'ಹ್ಯಾಟ್ರಿಕ್' ಮೇಲೆ ಕಣ್ಣು ನೆಟ್ಟಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋತಿದ್ದ ಜಹೀರ್ ಪಡೆ ನಂತರದ ಪಂದ್ಯಗಳಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ವಿರುದ್ಧ ಗೆಲುವು ದಾಖಲಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications