ಹೈದರಾಬಾದ್, ಏಪ್ರಿಲ್ 17 : ಐಪಿಎಲ್ 10ನೇ ಆವೃತ್ತಿಯ 19ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ 160 ರನ್ ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 159 ರನ್ ಪೇರಿಸಿತು. ಡೇವಿಡ್ ವಾರ್ನರ್ 54 ಎಸೆತಗಳಲ್ಲಿ ಅಜೇಯ 74 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.

ಹೈದರಾಬಾದ್ ತಂಡದಲ್ಲಿ ಪ್ರಮುಖ ಮೂವರು ಆಟಗಾರರನ್ನು ಬದಲಾವಣೆ ಮಾಡಲಾಗಿದೆ. ಇನ್ನು ಪಂಜಾಬ್ ನಲ್ಲಿ ಒಬ್ಬ ಆಟಗಾರನನ್ನು ಬದಲಿಸಲಾಗಿದೆ.
ಹೈದರಾಬಾದ್ ತಂಡದ ನಾಯಕ ವಾರ್ನರ್ ಅಪಘಾನಿಸ್ತಾನದ ಮೊಹಮ್ಮದ್ ನಭಿಗೆ, ಸ್ರಾನ್, ಸಿದ್ಧಾರ್ಥ್ ಕೌಲ್ ಗೆ ಪಂಜಾಬ್ ವಿರುದ್ಧ ಪಂದ್ಯಕ್ಕೆ ಅವಕಾಶ ನೀಡಿದ್ದಾರೆ. ಇನ್ನು ಪಂಜಾಬ್ ನಲ್ಲಿ ವರುಣ್ ಅರನ್ ಬದಲಿಗೆ ಇಶಾಂತ್ ಶರ್ಮರನ್ನು ಸೇರಿಸಿಕೊಳ್ಳಲಾಗಿದೆ.
Playing XIs Sunrisers Hyderabad: David Warner (captain), Shikhar Dhawan, Moises Henriques, Deepak Hooda, Bhuvneshwar Kumar, Mohammad Nabi, Naman Ojha (wicketkeeper), Rashid Khan, Barinder Sran, Yuvraj Singh, Siddharth Kaul.
Kings XI Punjab: Glenn Maxwell (captain), David Miller, Manan Vohra, Hashim Amla, Eoin Morgan, Sandeep Sharma, Mohit Sharma, KC Cariappa, Axar Patel, Wriddhiman Saha (wicketkeeper), Ishant Sharma.