Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂಜಾಬ್ ಗೆಲುವಿಗೆ ಆಮ್ಲಾ, ಮಾರ್ಷ್ ಆಟವೇ ಕಾರಣ

ರಾಜ್ ಕೋಟ್, ಏಪ್ರಿಲ್ 23 : ಹಶೀಂ ಆಮ್ಲಾ, ಶಾನ್ ಮಾರ್ಷ್ ಹಾಗೂ ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ನೆರವಿನಿಂದ ಉತ್ತಮ ಮೊತ್ತ ಕಲೆ ಹಾಕಿದ್ದು ಪಂಜಾಬಿಗಳ ಗೆಲುವಿಗೆ ಕಾರಣವಾಯಿತು. ಪಂಜಾಬ್ 188/7 ಸ್ಕೋರ್ ಮಾಡಿದರೆ, ಇದಕ್ಕೆ ಉತ್ತರವಾಗಿ ಗುಜರಾತ್ ತಂಡ 20 ಓವರ್ ಗಳಲ್ಲಿ 162/7 ಸ್ಕೋರ್ ಮಾಡಿ, ಸೋಲೊಪ್ಪಿಕೊಂಡಿತು.

ಕಳೆದ ಪಂದ್ಯದ ಶತಕ ವೀರ ಹಶೀಂ ಆಮ್ಲಾ ಭರ್ಜರಿಯಾಗಿ ಇನ್ನಿಂಗ್ಸ್ ಕಟ್ಟಿ ಬೆಳೆಸಿದರು. ಆಮ್ಲಾ 40 ಎಸೆತಗಳಲ್ಲಿ 65 ರನ್(9 ಬೌಂಡರಿ, 2 ಸಿಕ್ಸರ್)ಗಳಿಸಿದರೆ, ತಂಡಕ್ಕೆ ಮರಳಿರುವ ಶಾನ್ ಮಾರ್ಷ್ 30 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.[ಗ್ಯಾಲರಿ: ಐಪಿಎಲ್ 10]

IPL 2017: Match 26 Highlights: Gujarat (GL) Vs Punjab (KXIP)

ಪಂಜಾಬ್ ಹಾಗೂ ಗುಜರಾತ್ ಪಂದ್ಯದ ಮುಖ್ಯಾಂಶಗಳು : [ಐಪಿಎಲ್ : ಟಾಪ್ 10 ವೈಯಕ್ತಿಕ ಸ್ಕೋರರ್, ಗೇಲ್ ನಿಂದ ಸೈಮಂಡ್ ತನಕ]
* ದಿನೇಶ್ ಕಾರ್ತಿಕ್ ಅವರು ಐಪಿಎಲ್ ನಲ್ಲಿ 100 ವಿಕೆಟ್ ಗಳಿಸಿದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು.
* ಪಂಜಾಬಿನ ಮನನ್ ವೊಹ್ರಾ ನೀಡಿದ ಕ್ಯಾಚ್ ಅದ್ಭುತವಾಗಿ ಕಾರ್ತಿಕ್ ಹಿಡಿದರು.
* ವೇಗಿ ನಾಥು ಸಿಂಗ್ ಅವರು ವೊಹ್ರಾ ವಿಕೆಟ್ ಮೂಲಕ ಮೊದಲ ವಿಕೆಟ್ ಗಳಿಸಿದರು.
* ಹಶೀಂ ಆಮ್ಲಾ ಅವರು 30 ಎಸೆತಗಳಲ್ಲಿ 50 ರನ್ ಗಳಿಸಿದರು.[ ಐಪಿಎಲ್ 2017 ಸಂಪೂರ್ಣ ವೇಳಾಪಟ್ಟಿ]

* ಹಶೀಂ ಆಮ್ಲಾ (147) ಸ್ಟ್ರೈಕ್ ರೇಟ್ ಹೊಂದಿದ್ದು , ಐಪಿಎಲ್ ನ ಬಿಗ್ ಹಿಟ್ಟರ್ ಗಳಾದ ವಾರ್ನರ್, ಪೊಲ್ಲಾರ್ಡ್, ಎಬಿ ಡಿ ವಿಲಿಯರ್ಸ್ ಗಿಂತ ಉತ್ತಮ ಸ್ಟ್ರೈಕ್ ರೇಟ್ ಗಳಿಸಿದ್ದಾರೆ. [ಗುಜರಾತಿನ ಲಯನ್ಸ್ ಕಟ್ಟಿ ಹಾಕಿ ಜಯಭೇರಿ ಬಾರಿಸಿದ ಪಂಜಾಬ್]
* ಸ್ಪಿನ್ನರ್ ಶುಭಂ ಅಗರವಾಲ್ ತಮ್ಮ ಮೊದಲ ವಿಕೆಟ್ ರೂಪದಲ್ಲಿ ಹಶೀಂ ಆಮ್ಲಾ ಅವರನ್ನು ಪೆವಿಲಿಯನ್ ಗೆ ಕಳಿಸಿದರು.
* ಮ್ಯಾಕ್ಸ್ ವೆಲ್ ಹಾಗೂ ಆಮ್ಲಾ ವಿಕೆಟ್ 3 ಎಸೆತಗಳ ಅಂತರದಲ್ಲಿ ಉದುರಿತು.
* ಅಕ್ಷರ್ ಪಟೇಲ್ 17 ಎಸೆತಗಳಲ್ಲಿ 34 ರನ್ ಗಳಿಸಿ, ಪಂದ್ಯದ 19ನೇ ಓವರ್ ನಲ್ಲಿ ಡ್ವಾಯ್ನೆ ಸ್ಮಿತ್ ಗೆ ವಿಕೆಟ್ ಒಪ್ಪಿಸಿದರು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+