ಹೀನಾಯ ಸೋಲಿನಲ್ಲೂ ದಾಖಲೆ ಬರೆದ ಆರ್ ಸಿಬಿ
ಕೋಲ್ಕತ್ತಾ, ಏಪ್ರಿಲ್ 24: ಆರ್ ಸಿಬಿ ತಂಡದಲ್ಲಿ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕೇದಾರ್ ಜಾಧವ್ ರಂಥ ಆಟಗಾರರಿದ್ದು 132ರನ್ ಚೇಸ್ ಮಾಡಲಾಗಲಿಲ್ಲ ಏಕೆ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭಾನುವಾರ (ಏಪ್ರಿಲ್ 24) ರಾತ್ರಿ ನಡೆದ ಐಪಿಎಲ್ 10ರ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಸೋಲು ಕಂಡಿದೆ.
ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ
132ರನ್ ಚೇಸ್ ಮಾಡಿದ ಆರ್ ಸಿಬಿ ಪರ ಗೇಲ್ 17 ಎಸೆತಗಳನ್ನು ಎದುರಿಸಿದ್ದು ಬಿಟ್ಟರೆ ಬೇರೆ ಯಾವ ಆಟಗಾರ ಕೂಡಾ ಎರಡಂಕಿ ಎಸೆತಗಳನ್ನು ಎದುರಿಸಲಿಲ್ಲ. ಯಾವೊಬ್ಬ ಆಟಗಾರನು ಎರಡಂಕಿ ಸ್ಕೋರ್ ಮಾಡಲಿಲ್ಲ. 9.4 ಓವರ್ ಗಳಲ್ಲಿ 49 ಸ್ಕೋರಿಗೆ ಇಡೀ ತಂಡವೇ ಶರಣಾಗಿ ಪೆವಿಲಿಯನ್ ಸೇರಿ, ಐಪಿಎಲ್ ನ ಅತ್ಯಂತ ಕಳಪೆ ಮೊತ್ತಕ್ಕ ಆಲೌಟ್ ಆದ ತಂಡ ಎನಿಸಕೊಂಡಿತು.

ಕೆಕೆಆರ್ ಹಾಗೂ ಆರ್ ಸಿಬಿ ನಡುವಿನ ಅಲ್ಪ ಮೊತ್ತದ ಐಪಿಎಲ್ ಪಂದ್ಯದಲ್ಲಿ ಹಲವು ದಾಖಲೆಗಳು ಚೂರಾಯಿತು. ಆರ್ ಸಿಬಿ ಸೋಲು ಅಭಿಮಾನಿಗಳಿಗೆ ಆಘಾತವಾಯಿತು. ಪಂದ್ಯದ ಮುಖ್ಯಾಂಶಗಳು ಇಲ್ಲಿವೆ
* ಇದೇ ಮೊದಲ ಬಾರಿಗೆ ಐಪಿಎಲ್ 10ರಲ್ಲಿ ತಂಡವೊಂದರ ಎಲ್ಲಾ 10 ವಿಕೆಟ್ ಗಳು ವೇಗಿಗಳ ಪಾಲಾಗಿದೆ. ಈ ರೀತಿ ಈ ಮುಂಎ 5 ಬಾರಿ ಆಗಿದೆ.
* ಐಪಿಎಲ್ ಇತಿಹಾಸದಲ್ಲೇ ಎರಡನೇ ಬಾರಿಗೆ ಎರಡು ತಂಡಗಳು ಅಲೌಟ್ ಆಗಿವೆ.
* ಆರ್ ಸಿಬಿ ಗಳಿಸಿದ 49ರನ್ ಐಪಿಎಲ್ ನ ಅತ್ಯಂತ ಕಡಿಮೆ ಮೊತ್ತದ ಸ್ಕೋರ್ ಆಗಿದೆ.
* ರಾಜಸ್ಥಾನ್ ರಾಯಲ್ಸ್ ತಂಡ 58ರನ್ನಿಗೆ ಆಲೌಟ್ ಆಗಿದ್ದು, ಇಲ್ಲಿ ತನಕದ ಕಳಪೆ ಸ್ಕೋರ್ ಆಗಿತ್ತು.
* ಯಾವೊಬ್ಬ ಅರ್ ಸಿಬಿ ಆಟಗಾರನು ಎರಡಂಕಿ ಸ್ಕೋರ್ ಮಾಡಲಿಲ್ಲ. ಇದು ಐಪಿಎಲ್ ನ ಅತ್ಯಂತ ಕಳಪೆ ಪ್ರದರ್ಶನ.
* ಕೆಕೆಆರ್ ವಿರುದ್ಧ ಮತ್ತೊಮ್ಮೆ ಶೂನ್ಯಕ್ಕೆ ಔಟಾಗುವ ಮೂಲಕ ಈಡನ್ ಗಾರ್ಡನ್ ನಲ್ಲಿ ಕೊಹ್ಲಿ ಗೋಲ್ಡನ್ ಡಕ್ ಸಂಪಾದಿಸಿದ್ದಾರೆ.
* ವಿರಾಟ್ ಕೊಹ್ಲಿ ಮೂರು ಬಾರಿ ಡಕ್ ಔಟ್ ಆಗಿದ್ದು, ಮೂರು ಪಂದ್ಯವನ್ನು ಆರ್ ಸಿಬಿ ಸೋತಿದೆ.
* ಸುನಿಲ್ ನಾರಾಯಣ್ 17 ಎಸೆತಗಳಲ್ಲಿ 34ರನ್ ಗಳಿಸಿದ್ದಾಗ ಸ್ಟುವರ್ಟ್ ಬಿನ್ನಿಗೆ ವಿಕೆಟ್ ಒಪ್ಪಿಸಿದರು.
* ಸುನಿಲ್ ವಿಕೆಟ್ ಪಡೆದು ಟಿ20ಯಲ್ಲಿ 50ನೇ ವಿಕೆಟ್ ಗಳಿಸಿದ ಸ್ಟುವರ್ಟ್ ಬಿನ್ನಿ.
(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications