Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಂಭೀರ್-ಲಿನ್ ಜೊತೆಯಾಟ ಐಪಿಎಲ್ ಹೊಸ ದಾಖಲೆ

ರಾಜ್ ಕೋಟ್, ಏಪ್ರಿಲ್ 07: ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಾಯಕ ಗೌತಮ್ ಗಂಭೀರ್ ಹಾಗೂ ಕ್ರಿಸ್ ಲಿನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಲಯನ್ಸ್ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. 184ರನ್ ಗುರಿಯನ್ನು ಇನ್ನೂ 31 ಎಸೆತಗಳು ಬಾಕಿ ಇರುವಂತೆಯೇ ತಲುಪಿದೆ. ಪಂದ್ಯದ ಪ್ರಮುಖಾಂಶಗಳು ಇಲ್ಲಿವೆ...

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಕೆಕೆಆರ್ ನಾಯಕ ಗೌತಮ್ ಗಂಭೀರ್ 12 ಬೌಂಡರಿ ಸಹಿತ ಅಜೇಯ 76ರನ್ (48 ಎಸೆತಗಳು) ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಲಿನ್ 43 ಎಸೆತಗಳಲ್ಲಿ 93 ರನ್ ಚೆಚ್ಚಿ ಅಜೇಯರಾಗಿ ಉಳಿದು ಜಯಭೇರಿ ಬಾರಿಸಿದರು. [ತಂದೆ ಸಾವಿನ ಸೂತಕದ ನಡುವೆ ತಂಡ ಸೇರಿದ ಪಂತ್]

* 184/0 ಜೊತೆಯಾಟ-ಐಪಿಎಲ್ ನ ಯಾವುದೇ ತಂಡದ ಆರಂಭಿಕ ಜೋಡಿ ಇಲ್ಲಿ ತನಕ ಸಾಧಿಸದ ಮೊತ್ತವಾಗಿದೆ.
* ಆಸ್ಟ್ರೇಲಿಯಾದ ಕ್ರಿಸ್ ಲಿನ್ ಅವರು ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಚೊಚ್ಚಲ ಅರ್ಧಶತಕ ಅಜೇಯ 93(41 ಎಸೆತಗಳು, 6x4, 8x6) ಬಾರಿಸಿದರು.
* ಕೋಲ್ಕತ್ತಾ ತಂಡ 6 ಓವರ್ ಗಳಲ್ಲಿ 73/0 ಸ್ಕೋರ್ ಮಾಡಿತ್ತು. ಇದು ಐಪಿಎಲ್ ನ ಇತಿಹಾಸದಲ್ಲೇ ಅತ್ಯಂತ ಉತ್ತಮ ಪವರ್ ಪ್ಲೇ ಸ್ಕೋರ್ ಆಗಿದೆ. ಇನ್ನಷ್ಟು ಮುಂದೆ ಓದಿ...

ಗಂಭೀರ್ ಗೆ ಗೆಲುವಿನ ನಗೆ

ಗಂಭೀರ್ ಗೆ ಗೆಲುವಿನ ನಗೆ

* ಕೋಲ್ಕತಾ ತಂಡದ ನಾಯಕ ಗೌತಮ್ ಗಂಭೀರ್ ಅವರು ಅಜೇಯ 76 ರನ್ (48 ಎಸೆತಗಳು, 12X4)

* ಅತ್ಯಧಿಕ ರನ್ ಜೊತೆಯಾಟ ದಾಖಲೆಯನ್ನು ಗಂಭೀರ್ ಹಾಗೂ ಲಿನ್ (184ರನ್) ಮುರಿದರು. ಈ ಮುಂಚೆ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಶನ್ ಅವರು ಪುಣೆ ವಾರಿಯರ್ಸ್ ವಿರುದ್ಧ 2013ರಲ್ಲಿ 167ರನ್ ಕಲೆ ಹಾಕಿದ್ದರು. ಗೇಲ್ ಆ ಪಂದ್ಯದಲ್ಲಿ 175(ವೈಯಕ್ತಿಕ ಗರಿಷ್ಠ ಮೊತ್ತ) ರನ್ ಗಳಿಸಿದ್ದರು.

6ನೇ ಉತ್ತಮ ಜೊತೆಯಾಟ

6ನೇ ಉತ್ತಮ ಜೊತೆಯಾಟ

ಒಟ್ಟಾರೆ ಎಲ್ಲಾ ವಿಕೆಟ್ ಗಳಿಗೆ ಹೋಲಿಸಿದರೆ ಗಂಭೀರ್ -ಲಿನ್ 184ರನ್ ಜೊತೆಯಾಟ ಐಪಿಎಲ್ ನ ಆರನೇ ಉತ್ತಮ ಜೊತೆಯಾಟ ಇದಾಗಿದೆ.

2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿಯ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ 2ನೇ ವಿಕೆಟ್ ಗೆ 229ರನ್ ಕಲೆ ಹಾಕಿದ್ದು ಇನ್ನೂ ದಾಖಲೆಯಾಗಿ ಉಳಿದಿದೆ.
ಕೇವಲ 3 ಬಾರಿ ಓಪನರ್

ಕೇವಲ 3 ಬಾರಿ ಓಪನರ್

*ಆಸ್ಟ್ರೇಲಿಯಾದ ಕ್ರಿಸ್ನ್ ಲಿನ್ 19 ಎಸೆತಗಳಲ್ಲಿ 50ರನ್ ಗಡಿದಾಟಿದರು. ಇದು ಕೆಕೆ ಆರ್ ಪರ 2ನೇ ಅತ್ಯಂತ ತ್ವರಿತಗತಿಯ ಅರ್ಧಶತಕವಾಗಿದೆ.
* 86 ಟಿ20 ಪಂದ್ಯಗಳನ್ನಾಡಿರುವ ಲಿನ್ ಕೇವಲ ಮೂರು ಬಾರಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಬಾರಿ ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಅಜೇಯ 93ರನ್ ಚೆಚ್ಚಿದ್ದಾರೆ.

ಕೊಹ್ಲಿ ಹಿಂದಿಕ್ಕಿದ ರೈನಾ

ಕೊಹ್ಲಿ ಹಿಂದಿಕ್ಕಿದ ರೈನಾ

* ಸುರೇಶ್ ರೈನಾ ಐಪಿಎಲ್ ನಲ್ಲಿ 29ನೇ ಅರ್ಧಶತಕ 68 ಅಜೇಯ (51 ಎಸೆತಗಳು, 7 ಬೌಂಡರಿ) ಗಳಿಸಿದರು.
* ಐಪಿಎಲ್ ರನ್ ಗಳಿಕೆ ಪತ್ತಿಯಲ್ಲಿ 4,110ರನ್ ಗಳಿಸಿರುವ ಆರ್ ಸಿಬಿಯ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ರೈನಾ 4,168ರನ್ ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.
* ಗುಜರಾತ್ 20 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿತು.
* ಗುಜರಾತ್ 6 ಓವರ್ ಗಳಲ್ಲಿ 52/1 ಸ್ಕೋರ್ ಮಾಡಿತು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+