ರಾಜ್ ಕೋಟ್, ಏಪ್ರಿಲ್ 07: ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಾಯಕ ಗೌತಮ್ ಗಂಭೀರ್ ಹಾಗೂ ಕ್ರಿಸ್ ಲಿನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಲಯನ್ಸ್ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. 184ರನ್ ಗುರಿಯನ್ನು ಇನ್ನೂ 31 ಎಸೆತಗಳು ಬಾಕಿ ಇರುವಂತೆಯೆ ತಲುಪಿದ್ದಾರೆ.
ಕೆಕೆಆರ್ ನಾಯಕ ಗೌತಮ್ ಗಂಭೀರ್ 12 ಬೌಂಡರಿ ಸಹಿತ ಅಜೇಯ 76ರನ್ (48 ಎಸೆತಗಳು) ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಲಿನ್ 43 ಎಸೆತಗಳಲ್ಲಿ 93 ರನ್ ಚೆಚ್ಚಿ ಅಜೇಯರಾಗಿ ಉಳಿದು ಜಯಭೇರಿ ಬಾರಿಸಿದರು.
