For Quick Alerts
ALLOW NOTIFICATIONS  
For Daily Alerts
 

ಕನ್ನಡಿಗ ಉತ್ತಪ್ಪ ಬೊಂಬಾಟ್, ಕೆಕೆಆರ್ ಗೆ 7 ವಿಕೆಟ್ ಗಳ ಜಯ

ಪುಣೆ, ಏಪ್ರಿಲ್ 26 : ಕನ್ನಡಿಗ ರಾಬಿನ್ ಉತ್ತಪ್ಪ(87) ಮತ್ತು ನಾಯಕ ಗೌತಮ್ ಗಂಭೀರ್ (67) ಅವರ ಜುಗಲ್ ಬಂದಿ ಆಟದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಪುಣೆ ಪೂಪರ್ ಜೈಂಟ್ ತಂಡವನ್ನು ಏಳು ವಿಕೆಟ್ ಗಳಿಂದ ಮಣಿಸಿದೆ.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪುಣೆ ಸೂಪರ್ ಜೈಂಟ್ಸ್ ನೀಡಿದ್ದ 183 ರನ್ ಗಳ ಗುರಿ ಬೆನ್ನಟ್ಟಿದ್ದ ಕೆಕೆಆರ್ ಕೇವಲ ಮೂರು ವಿಕೆಟ್ ಕಳೆದುಕೊಂಡು 18.1 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತು.

IPL 2017: Match 30: Smith's fifty, Dhoni's exploits set a target of 183 for KKR to chase

ಕೊಲ್ಕತ್ತಾ ಪರ ನಾಯಕ ಗೌತಮ್ ಗಂಬೀರ್ 46 ಎಸೆತಗಳಲ್ಲಿ 62, ಕರ್ನಾಟಕದ ರಾಬಿನ್ ಉತ್ತಪ್ಪ 47 ಎಸೆತಗಳಲ್ಲಿ 87, ಸುನೀಲ್ ನರೈನ್ 16, ತಂಡವನ್ನು ಗೆಲುವಿನತ್ತ ತಂದು ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಡೇರೆನ್ ಬ್ರಾವೋ ಅಜೇಯ 6 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಟಿವ್ ಸ್ಮಿತ್ ನೇತೃತ್ವದ ಪುಣೆ ಸೂಪರ್ ಜೈಂಟ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡು 182 ರನ್ ಗಳಿಸಿತ್ತು.

ಪುಣೆ ಪರ ರಹಾನೆ (46) ಮತ್ತು ತ್ರಿಪಾತಿ (38) ಜೋಡಿ ಆರಂಭದಲ್ಲಿ ತಂಡಕ್ಕೆ ಭದ್ರ ಬುನಾದಿ ಹಾಕಿತು. ಬಳಿಕ ಬಂದ ಬ್ಯಾಟಿಂಗ್ ಗೆ ನಾಯಕ ಸ್ಟಿವ್ ಅಜೇಯ 51 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ದೋನಿ 23, ಕ್ರಿಶ್ಚಿನ್ 16 ರನ್ ಗಳ ನೆರವಿನಿಂದ ಪುಣೆ 182 ರನ್ ಗಳಿಸಿತು.

ಕೋಲ್ಕತ್ತ ಪರ ಕುಲ್ ದೀಪ್ ಯಾದವ್ 2, ಉಮೇಶ್ ಯಾದವ್, ನರೈನ್ ಮತ್ತು ಚಾವ್ಲಾ ತಲಾ 1 ವಿಕೆಟ್ ಪಡೆದು.

ಕೆಕೆಆರ್ ತಂಡದ ಪ್ರಮುಖ ಎರಡು ಬದಲಾವಣೆ ಮಾಡಲಾಗಿದ್ದು ನೈಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಬದಲಿಗೆ ಡಾರೇನ್ ಬ್ರಾವೋ ಹಾಗೂ ಪಿಯೂಷ್ ಚಾವ್ಲಾ ಅವರನ್ನು ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಗಿದೆ.

ಮತ್ತೊಂದೆಡೆ ಅನಾರೋಗ್ಯದಿಂದ ಬಳಲುತ್ತಿರುವ ಬೆನ್ ಸ್ಟೋಲ್ಸ್ ಬದಲಿಗೆ ಡುಪ್ಲೆಸಿಸ್ ಸ್ಥಾನ ಪಡೆದುಕೊಂಡಿದ್ದಾರೆ.

ತಂಡ ಇಂತಿದೆ:

KKR: Gautam Gambhir (Captain), Sunil Narine, Robin Uthappa (wicketkeeper), Darren Bravo, Manish Pandey, Yusuf Pathan, Colin de Grandhomme, Chris Woakes, Piyush Chawla, Kuldeep Yadav, Umesh Yadav.

RPS: Ajinkya Rahane, Rahul Tripathi, Steve Smith (Captain), Faf du Plessis, MS Dhoni (wicketkeeper), Manoj Tiwary, Dan Christian, Washington Sundar, Jaydev Unadkat, Shardul Thakur, Imran Tahir.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+