ಮುಂಬೈ, ಮೇ 01: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 10ನೇ ಆವೃತ್ತಿಯ 38ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲು ಬ್ಯಾಟ್ ಮಾಡಿ ಮುಂಬೈ ಇಂಡಿಯನ್ಸ್ ಗೆ 163 ರನ್ ಗಳ ಟಾರ್ಗೆಟ್ ನೀಡಿತ್ತು. ಆದರೆ, ಮುಂಬೈ ತಂಡ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ ಜಯಭೇರಿ ಬಾರಿಸಿತು. ನಾಯಕ ರೋಹಿತ್ ಶರ್ಮ ಅಜೇಯ ಅರ್ಧಶತಕ ಸಿಡಿಸಿ ಗೆಲುವಿನ ದಡ ಮುಟ್ಟಿಸಿದರು.
ಮುಂಬೈ ಇಂಡಿಯನ್ಸ್ ಚೇಸ್: ಆರಂಭದ ಎಸೆತದಲ್ಲೇ ಪಾರ್ಥೀವ್ ಪಟೇಲ್ ವಿಕೆಟ್ ಕಳೆದುಕೊಂಡ ಬಳಿಕ ಚೇತರಿ ಕಂಡಿತು. ಜೋಸ್ ಬಟ್ಲರ್ 33 ರನ್ (21 ಎಸೆತಗಳು), ನಿತೀಶ್ ರಾಣಾ 27 ರನ್ ಗಳಿಸಿ ಜೊತೆಯಾಟ ಪ್ರದರ್ಶಿಸಿದರು. ನಾಯಕ ರೋಹಿತ್ ಶರ್ಮ 27 ಎಸೆತಗಳಲ್ಲಿ 56 ರನ್, ಪೊಲ್ಲಾರ್ಡ್ 17 ಹಾಗೂ ಹಾರ್ದಿಕ್ ಪಾಂಡ್ಯ ಅಜೇಯ 14 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. [ಮುಂಬೈ ಇಂಡಿಯನ್ಸ್ ವೇಳಾಪಟ್ಟಿ]
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು.

ಆರ್ ಸಿಬಿ ಪರ ಕೇದರ್ ಜಾದವ್ ಪವನ್ ನೇಗಿ 35, ನಾಯಕ ವಿರಾಟ್ ಕೊಹ್ಲಿ 20, ಮನ್ ದೀಪ್ ಸಿಂಗ್ 17, ಎಬಿಡಿ ವಿಲಿಯರ್ಸ್ 43, ಹೆಡ್ 12, ವಾಟ್ಸನ್ ಕೇವಲ 3 ರನ್ ಗಳಿಸಿ ಮತ್ತೆ ವಿಫಲರಾದರು.[ಐಪಿಎಲ್ 2017: ಅಂಕಪಟ್ಟಿ]
ಮುಂಬೈ ವಿರುದ್ಧ ಪಂದ್ಯಕ್ಕೆ ಆರ್ ಸಿಬಿ ತಂಡ ಮೂವರನ್ನು ಬದಲಾವಣೆ ಮಾಡಿದೆ. ಸ್ಟುವರ್ಟ್ ಬಿನ್ನಿ, ಮನ್ ದೀಪ್ ಸಿಂಗ್, ಅಂಕೀತ್ ಚೌಧರಿ, ಶೇನ್ ವಾಟ್ಸನ್ ಅವರನ್ನು ಸೇರಿಸಿಕೊಡಿದೆ.
ಇನ್ನು ಮುಂಬೈನಲ್ಲಿ ಗಾಯಳು ಹರ್ಭಜನ್ ಬದಲಾಗಿ ಕರಣ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್ ಸಿಬಿಯ ಪ್ಲೇ ಆಫ್ ಬಾಗಿಲು ಮುಚ್ಚಿದ್ದು ಇನ್ನುಳಿದ ಪಂದ್ಯಗಳಲ್ಲಿ ಗೆದ್ದು ಮಾನ ಕಾಪಾಡಿಕೊಳ್ಳಲು ಆಡಬೇಕಿದೆ.
ತಂಡಗಳು ಇಂತಿವೆ
Mumbai Indians: Parthiv Patel (wicketkeeper), Jos Buttler, Rohit Sharma (captain), Nitish Rana, Krunal Pandya, Keiron Pollard, Hardik Pandya, Mitchell McClenaghan, Jaspreet Bumrah, Karn Sharma, Lasith Malinga.
Royal Challengers Bangalore: Virat Kohli (captain), Travis Head, AB de Villiers, Mandeep Singh, Kedar Jadhav (wicketkeeper), Shane Watson, Aniket Chaudhary, Pawan Negi, Adam Milne, Yuzvendra Chahal, Sreenath Arvind.