ಮುಂಬೈ, ಏಪ್ರಿಲ್ 10: ಕೆಕೆಆರ್ ತಂಡದ ಪರ ಕರ್ನಾಟಕದ ಮನೀಶ್ ಪಾಂಡೆ ಅವರು ಅರ್ಧಶತಕದ ನೆರವಿನಿಂದ 178/7 ಸ್ಕೋರ್ ಮಾಡಿತ್ತು.
ಆದರೆ, ಕೊನೆ ಕ್ಷಣವಾಗಿದ್ದ ಪಂದ್ಯದಲ್ಲಿ ಮುಂಬೈ ಪರ ನಿತೀಶ್ ರಾಣಾ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಂಡೆ ಬ್ಯಾಟಿಂಗ್ ವ್ಯರ್ಥವಾಯಿತು. ಮುಂಬೈಗೆ 4 ವಿಕೆಟ್ ಗಳ ರೋಚಕ ಜಯ ಲಭಿಸಿತು.[]

* ಪಾರ್ಥೀವ್ ಪಟೇಲ್ 30, ಜೋಶ್ ಬಟ್ಲರ್ 28 ರನ್ ಗಳಿಸಿ 65 ರನ್ (7.3 ಓವರ್ಸ್) ಜೊತೆಯಾಟ
* ನಿತೀಶ್ ರಾಣಾ 29 ಎಸೆತಗಳಲ್ಲಿ 50 ರನ್ (5 ಬೌಂಡರಿ, 3 ಸಿಕ್ಸರ್) ಗೆಲುವಿಗೆ ಅಡಿಪಾಯ ಹಾಕಿಕೊಟ್ಟರು.
* ಹಾರ್ದಿಕ್ ಪಾಂಡ್ಯ 11 ಎಸೆತಗಳಲ್ಲಿ 29ರನ್ (3 ಬೌಂಡರಿ, 2ಸಿಕ್ಸರ್) ಗೆಲುವಿನ ದಡ ಮುಟ್ಟಿಸಿದರು.
* ಕ್ರಿಸ್ ಲಿನ್ 32 ಹಾಗೂ ನಾಯಕ ಗಂಭೀರ್ 19ರನ್ ಗಳಿಸಿದರು. * ಮುಂಬೈ ಪರ ಪಾಂಡ್ಯ 3, ಮಾಲಿಂಗ 2, ಮೆಕ್ಲೆನಗನ್ ಹಾಗು ಬೂಮ್ರಾ ತಲಾ 1 ವಿಕೆಟ್