For Quick Alerts
ALLOW NOTIFICATIONS  
For Daily Alerts
 

ಒನ್ಇಂಡಿಯಾ ಆಯ್ಕೆಯ ಐಪಿಎಲ್ 10ರ ಶ್ರೇಷ್ಠ ತಂಡ

ಐಪಿಎಲ್ 10ರ ಶ್ರೇಷ್ಠ ತಂಡಕ್ಕೆ ರೈಸಿಂಗ್ ಪುಣೆ ಸೂಪರ್ ಜೈಂಟ್ ನಾಯಕ ಸ್ಟೀವ್ ಸ್ಮಿತ್ ಅವರನ್ನು ನಾಯಕರಾಗಿ ಒನ್ಇಂಡಿಯಾ ಆಯ್ಕೆ ಮಾಡಿದೆ. ಮಿಕ್ಕಂತೆ ತಂಡದಲ್ಲಿ ಯಾರೆಲ್ಲ ಇದ್ದಾರೆ ನೋಡಿ

By ಕ್ರೀಡಾ ಡೆಸ್ಕ್

ಬೆಂಗಳೂರು, ಮೇ 22: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 10ನೇ ಸಂಭ್ರಮಾಚರಣೆಗೆ ತೆರೆ ಬಿದ್ದಿದೆ. ರೈಸಿಂಗ್ ಪುಣೆ ಸೂಪರ್ ಜೈಂಟ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಅಂತಿಮ ಹಣಾಹಣಿ ಪ್ರೇಕ್ಷಕರನ್ನು ರಂಜಿಸಿದೆ.

ಮುಂಬೈ ಇಂಡಿಯನ್ಸ್ ತಂಡ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಂಡಿದೆ. ಈ ಸಂದರ್ಭದಲ್ಲಿ ಈ ಬಾರಿ ಐಪಿಎಲ್ ಶ್ರೇಷ್ಠ ತಂಡವನ್ನು ಆಯ್ಕೆ ಮಾಡಿ ನಿಮ್ಮ ಮುಂದಿಡುತ್ತಿದ್ದೇವೆ.[ಐಪಿಎಲ್ 2017 : ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ]

ಮುಂಬೈ ಇಂಡಿಯನ್ಸ್ ತಂಡ ಮೂರನೇ ಬಾರಿಗೆ ಟ್ರೋಫಿ ಗೆದ್ದು ದಾಖಲೆ ಬರೆದಿದೆ. ನಾಯಕ ರೋಹಿತ್ ಶರ್ಮ ಅವರು ಮುಂಬೈ ಪರ ಮೂರು ಕಪ್ ಸೇರಿದಂತೆ ಒಟ್ಟಾರೆ ಏಳು ಟಿ20 ಟ್ರೋಫಿ ಗೆದ್ದು ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.

ಶ್ರೇಷ್ಠ ತಂಡದಲ್ಲಿ ಹಲವಾರು ದೊಡ್ಡ ದೊಡ್ಡ ಆಟಗಾರರ ಹೆಸರುಗಳು ಮಿಸ್ ಆಗಿದೆ ಎಂದರೆ ಅದಕ್ಕೆ ಅವರೇ ಹೊಣೆ. ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರೋಹಿತ್ ಶರ್ಮ, ರವೀಂದ್ರ ಜಡೇಜ ಅವರು ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.[ಐಪಿಎಲ್ 2018ರಲ್ಲಿ ಗೇಲ್ ಸೇರಿದಂತೆ ಯಾರೆಲ್ಲ ಇರಲ್ಲ!]

ಐಪಿಎಲ್ ನಿಯಮದಂತೆ ನಾಲ್ಕು ವಿದೇಶಿ ಆಟಗಾರರನ್ನು ಆಯ್ಕೆಮಾಡಲಾಗಿದ್ದು, ಡೇವಿಡ್ ವಾರ್ನರ್, ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್,ಮಿಚೆಲ್ ಮೆಕ್ಲೆನಗನ್ ಅವರು ತಂಡಕ್ಕೆ ಸೇರಿದ್ದಾರೆ ಪುಣೆ ತಂಡದ ಉತ್ತಮ ನಾಯಕತ್ವ ಪ್ರದರ್ಶಿಸಿರುವ ಸ್ಮಿತ್ ಅವರನ್ನು ಈ ಶ್ರೇಷ್ಠ ತಂಡ XI ನಾಯಕರಾಗಿ ಆಯ್ಕೆ ಮಾಡಲಾಗಿದೆ. ಮಿಕ್ಕಂತೆ ಯಾರೆಲ್ಲ ತಂಡದಲ್ಲಿದ್ದಾರೆ ಮುಂದೆ ಓದಿ....

#1 ಡೇವಿಡ್ ವಾರ್ನರ್

#1 ಡೇವಿಡ್ ವಾರ್ನರ್

ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರು ಈ ಬಾರಿಯ ಆರೇಂಜ್ ಕ್ಯಾಪ್ ವಿಜೇತರಾಗಿದ್ದಾರೆ. ಎಡಗೈ ಆರಂಭಿಕ ಬ್ಯಾಟ್ಸ್ ಮನ್ 14 ಪಂದ್ಯಗಳಿಂದ 643ರನ್ ಗಳನ್ನು ಕಲೆ ಹಾಕಿದ್ದು, 4 ಅರ್ಧಶತಕ ಹಾಗೂ ಒಂದು ಶತಕವನ್ನು ಐಪಿಎಲ್ 10ರಲ್ಲಿ ಬಾರಿಸಿದ್ದಾರೆ.

#2 ಗೌತಮ್ ಗಂಭೀರ್

#2 ಗೌತಮ್ ಗಂಭೀರ್

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಅವರು 16 ಪಂದ್ಯಗಳಿಂದ 498ರನ್ ಗಳನ್ನು ಕಲೆ ಹಾಕಿದ್ದು, ಆರಂಭಿಕ ಆಟಗಾರರಾಗಿ ವಾರ್ನರ್ ಜತೆ ಆಡಲು ಸೂಕ್ತ ಎಂದು ಪರಿಗಣಿಸಲಾಗಿದೆ. ಗಂಭೀರ್ ಅವರು ಐಪಿಎಲ್ 10ರಲ್ಲಿ 4 ಅರ್ಧ ಶತಕ ಗಳಿಸಿದ್ದಾರೆ.

#3 ಸ್ಟೀವ್ ಸ್ಮಿತ್

#3 ಸ್ಟೀವ್ ಸ್ಮಿತ್

ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅವರು ಇದೇ ಮೊದಲ ಬಾರಿಗೆ ಐಪಿಎಲ್ ಫೈನಲ್ ಆಡಿ, ಉತ್ತಮ ನಿರ್ವಹಣೆ ತೋರಿದರು. 15 ಪಂದ್ಯಗಳಿಂದ 472ರನ್ ಗಳಿಸಿದ್ದಲ್ಲದೆ, ತಂಡವನ್ನು ಸಮರ್ಥವಾಗಿ ಮುನ್ನಡೆಸಿದರು.

#4 ಸುರೇಶ್ ರೈನಾ

#4 ಸುರೇಶ್ ರೈನಾ

ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಅವರು ಈ ಬಾರಿ ಐಪಿಎಲ್ ನ ಐದನೇ ಅತ್ಯಧಿಕ ರನ್ ಗಳಿಕೆ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್ 10ರಲ್ಲಿ 14 ಪಂದ್ಯಗಳಲ್ಲಿ 3ಅರ್ಧ ಶತಕಗಳು ಸೇರಿದಂತೆ 442ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಿರ್ವಹಣೆ ತೋರಿದ್ದಾರೆ.

#5 ಬೆನ್ ಸ್ಟೋಕ್ಸ್

#5 ಬೆನ್ ಸ್ಟೋಕ್ಸ್

ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರು 11 ಇನ್ನಿಂಗ್ಸ್ ನಲ್ಲಿ 316ರನ್ ಸ್ಕೋರ್ ಮಾಡಿದ್ದಲ್ಲದೆ 12 ವಿಕೆಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಲೀಗ್ ಹಂತದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಭರ್ಜರಿ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದನ್ನು ಮರೆಯುವಂತಿಲ್ಲ.

#6 ಪವನ್ ನೇಗಿ

#6 ಪವನ್ ನೇಗಿ

ರಾಯಲ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ ಎಡಗೈ ಸ್ಪಿನ್ನರ್ ಪವನ್ ನೇಗಿ ಅವರು 12 ಪಂದ್ಯಗಳಿಂದ 12 ವಿಕೆಟ್ ಗಳಿಸಿದರು. 10 ಇನ್ನಿಂಗ್ಸ್ ಗಳಿಂದ 144ರನ್ ಬಾರಿಸಿದರು. ಆರ್ ಸಿಬಿಯ ಸ್ಪಿನ್ ದಾಳಿಯ ಪ್ರಮುಖ ಅಸ್ತ್ರವಾಗಿದ್ದರು.

#7 ರಾಬಿನ್ ಉತ್ತಪ್ಪ

#7 ರಾಬಿನ್ ಉತ್ತಪ್ಪ

ಕೋಲ್ಕತ್ತಾ ನೈಟ್ ರೈಡರ್ಸ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ 13 ಇನ್ನಿಂಗ್ಸ್ ಗಳಲ್ಲಿ 388ರನ್ ಗಳಿಸಿದ್ದಾರೆ. ಕೆಕೆಆರ್ ಪರ ಈ ಬಾರಿ ಮೂರನೆ ಅತ್ಯಧಿಕ ರನ್ ಗಳಿಕೆ ಆಟಗಾರ ಎನಿಸಿಕೊಂಡಿದ್ದು, ಕರ್ನಾಟಕದ ರಾಬಿನ್ ಅವರು ವಿಕೆಟ್ ಕೀಪರ್ ಆಗಿ ಕೂಡಾ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ.

#8 ಮಿಚೆಲ್ ಮೆಕ್ಲೆನಗನ್

#8 ಮಿಚೆಲ್ ಮೆಕ್ಲೆನಗನ್

ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಆಗಿ ಕಾರ್ಯನಿರ್ವಹಿಸಿದ ನ್ಯೂಜಿಲೆಂಡಿನ ಮಿಚೆಲ್ ಮೆಕ್ಲೆನಗನ್ ಅವರು ಗಾಯದ ಸಮಸ್ಯೆಯಿಂದ ಫೈನಲ್ ಪಂದ್ಯಕ್ಕೆ ಲಭ್ಯರಿರಲಿಲ್ಲ. 14 ಪಂದ್ಯಗಳಲ್ಲಿ 19 ವಿಕೆಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

#9 ಭುವನೇಶ್ವರ್ ಕುಮಾರ್

#9 ಭುವನೇಶ್ವರ್ ಕುಮಾರ್

ಸತತವಾಗಿ ಎರಡನೇ ಬಾರಿಗೆ ಪರ್ಪಲ್ ಕ್ಯಾಪ್ ಗಳಿಸಿರುವ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಅವರು ಸಹಜವಾಗಿ ಶ್ರೇಷ್ಠ ತಂಡಕ್ಕೆ ಆಯ್ಕೆಯಾಗಿದ್ದಾರೆ. 14 ಪಂದ್ಯಗಳಿಂದ 26ವಿಕೆಟ್ ಗಳಿಸಿದ್ದರು.

#10 ಜಯದೇವ್ ಉನದ್ಕತ್

#10 ಜಯದೇವ್ ಉನದ್ಕತ್

ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ಪ್ರಮುಖ ವೇಗಿ ಜಯದೇವ್ ಉನದ್ಕತ್ ಅವರು ಐಪಿಎಲ್ 10ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 12 ಪಂದ್ಯಗಳಿಂದ 24 ವಿಕೆಟ್ ಗಳಿಸಿದ್ದಾರೆ.

#11 ಜಸ್ ಪ್ರೀತ್ ಬೂಮ್ರಾ

#11 ಜಸ್ ಪ್ರೀತ್ ಬೂಮ್ರಾ

ವಿಶಿಷ್ಟ ಬೌಲಿಂಗ್ ಶೈಲಿಯ ಮೂಲಕ ಗಮನ ಸೆಳೆದಿರುವ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ ಪ್ರೀತ್ ಬೂಮ್ರಾ ಅವರು 16 ಪಂದ್ಯಗಳಿಂದ 20 ವಿಕೆಟ್ ಕಿತ್ತಿದ್ದಾರೆ. ಗುಜರಾತ್ ಲಯನ್ಸ್ ವಿರುದ್ಧದ ಸೂಪರ್ ಓವರ್ ನಲ್ಲಿ ಕೇವಲ 4 ರನ್ ನೀಡಿ, ಮುಂಬೈಗೆ ಜಯ ತಂದಿತ್ತಿದ್ದನ್ನು ಮರೆಯುವಂತಿಲ್ಲ.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+