ಬೆಂಗಳೂರು, ಮೇ 11: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿ ಐಪಿಎಲ್ ನಲ್ಲಿ ಯಾವುದೇ ತಂಡದ ನಾಯಕತ್ವ ವಹಿಸಿಕೊಂಡಿಲ್ಲದಿದ್ದರೂ ಅವರ ಜನಪ್ರಿಯತೆ ಕುಗ್ಗಿಲ್ಲ.
ಅತ್ಯಂತ ಯಶಸ್ವಿ ನಾಯಕ ಧೋನಿ ಅವರು ಟ್ವಿಟ್ಟರ್ ವಾರ್ ನಲ್ಲಿ ಸತತ 5ನೇ ವಾರ ಕೂಡಾ ನಂ.1 ಸ್ಥಾನದಲ್ಲಿ ಮುಂದುವರೆದಿದ್ದು ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ (ಆರ್ ಪಿಎಸ್) ಅವರು ಸತತವಾಗಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.
ಈ ಬಾರಿ ಐಪಿಎಲ್ ನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಹ್ಯಾಶ್ ಟ್ಯಾಗ್ ಬಳಸಿದರೆ ಆ ಆಟಗಾರರ emojis ತಾನಾಗೇ ಕಾಣಿಸಿಕೊಳ್ಳುತ್ತದೆ. (i.e. #ViratKohli for Virat Kohli) #MSDhoni ಇಮೋಜಿಗಳನ್ನು ಬಳಸಿ ಅತಿ ಹೆಚ್ಚು ಬಾರಿ ಟ್ವೀಟ್ ಮಾಡಲಾಗಿದೆ.
ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರು ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಗೌತಮ್ ಗಂಭೀರ್ ಅವರು ಮೂರನೇ ಸ್ಥಾನದಲ್ಲಿ, ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಯುವರಾಜ್ ಸಿಂಗ್ ಐದನೆ ಸ್ಥಾನಕ್ಕೇರಿದ್ದಾರೆ.
