ಐಪಿಎಲ್ : ಟ್ವೀಟ್ ವಾರ್ ಜನಪ್ರಿಯತೆಯಲ್ಲಿ ಕೊಹ್ಲಿ ಹಿಂದಿಕ್ಕಿದ ಧೋನಿ
ನವದೆಹಲಿ, ಮೇ 05: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿ ಐಪಿಎಲ್ ನಲ್ಲಿ ಯಾವುದೇ ತಂಡದ ನಾಯಕತ್ವ ವಹಿಸಿಕೊಂಡಿಲ್ಲದಿದ್ದರೂ ಅವರ ಜನಪ್ರಿಯತೆ ಕುಗ್ಗಿಲ್ಲ. ಅತ್ಯಂತ ಯಶಸ್ವಿ ನಾಯಕ ಧೋನಿ ಅವರು ಟ್ವಿಟ್ಟರ್ ವಾರ್ ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ (ಆರ್ ಪಿಎಸ್) ಅವರು ಸತತವಾಗಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಹ್ಯಾಶ್ ಟ್ಯಾಗ್ ಬಳಸಿದರೆ ಆ ಆಟಗಾರರ emojis ತಾನಾಗೇ ಕಾಣಿಸಿಕೊಳ್ಳುತ್ತದೆ. (i.e. #ViratKohli for Virat Kohli)
#MSDhoni ಇಮೋಜಿಗಳನ್ನು ಬಳಸಿ ಅತಿ ಹೆಚ್ಚು ಬಾರಿ ಟ್ವೀಟ್ ಮಾಡಲಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಅವರು ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಅಚ್ಚರಿಯೆಂಬಂತೆ ಐಪಿಎಲ್ ನ ದುಬಾರಿ ಆಟಗಾರ ಬೆನ್ ಸ್ಟೋಕ್ಸ್ ಅವರು ಟಾಪ್ 5ನಲ್ಲಿ ಕಾಣಿಸಿಕೊಂಡಿದ್ದಾರೆ. ಐದು ವಾರಗಳ ಎಣಿಕೆಯಂತೆ ಈ ಪಟ್ಟಿ ತಯಾರಾಗಿದೆ.
ಧೋನಿಗಿದೆ ಫ್ಯಾನ್ಸ್ ಕ್ಲಬ್
ಎಂಎಸ್ ಧೋನಿ ಅವರ ಹೆಸರಿನಲ್ಲಿ ಅನೇಕ ಫ್ಯಾನ್ಸ್ ಕ್ಲಬ್, ಗ್ರೂಪ್ ಗಳು ಟ್ವಿಟ್ಟರ್ ಅಲ್ಲದೆ ಫೇಸ್ ಬುಕ್ ನಲ್ಲೂ ಸಾಕಷ್ಟಿವೆ.
ಧೋನಿ ಬಗ್ಗೆ ಅಪ್ಡೇಟ್ಸ್
ಧೋನಿ ಅವರ ಟ್ವಿಟ್ಟರ್ ಐಡಿ, ಪಂದ್ಯದ ಬಗ್ಗೆ ಐಪಿಎಲ್, ಬಿಸಿಸಿಐ ಅಪ್ಡೇಟ್ ಗಳು ಬರುವುದಕ್ಕೂ ಮುನ್ನವೇ ಫ್ಯಾನ್ ಪೇಜ್ ಗಳಿಂದ ಟ್ವೀಟ್ ಆಗಿರುತ್ತದೆ.
ಕ್ರಿಕೆಟ್ ನೋಡಲ್ಲ ಎಂದ ಅಭಿಮಾನಿ
ಕ್ರಿಕೆಟ್ ದೇವರು ಸಚಿನ್ ಅವರು ನಿವೃತ್ತಿಯಾದ ಬಳಿಕ ಅನೇಕ ಮಂದಿ ಕ್ರಿಕೆಟ್ ನೋಡುವುದನ್ನೇ ಬಿಟ್ಟ ಉದಾಹರಣೆಗಳಿವೆ. ಅದೇ ರೀತಿ ಧೋನಿ ಅವರು ನಿವೃತ್ತಿಯಾದ ಬಳಿಕ ಕ್ರಿಕೆಟ್ ನೋಡಲ್ಲ ಎಂದು ಅಭಿಮಾನಿಯೊಬ್ಬ ಹೇಳಿದ್ದಾರೆ.

ಯಾವ ತಂಡ ಮುಂದಿದೆ
ಅತಿ ಹೆಚ್ಚು ಜನಪ್ರಿಯತೆ ಪಟ್ಟಿಯಲ್ಲಿ
1. ಮುಂಬೈ ಇಂಡಿಯನ್ (@mipaltan)
2. ಕೋಲ್ಕತ್ತಾ ನೈಟ್ ರೈಡರ್ಸ್ (@KKRiders)
3. ರಾಯಲ್ ಚಾಲೆಂಜರ್ಸ್ ಬೆಂಗಳೂರು (@RCBTweets)
ಅತಿ ಹೆಚ್ಚು ಚರ್ಚಿಸಲ್ಪಟ್ಟ ಪಂದ್ಯಗಳು
1. #GLvMI (Super-Over game)
2. #MIvRPS
3. #RPSvKKR
4. #SRHvKKR
5. #RPSvRCB
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications