For Quick Alerts
ALLOW NOTIFICATIONS  
For Daily Alerts
 

IPL 10: ಆರ್ ಸಿಬಿ ತಂಡಕ್ಕೆ ಸರ್ಫರಾಜ್ ಬದಲು ಹರ್ ಪ್ರೀತ್ ಸಿಂಗ್

ಬೆಂಗಳೂರು, ಏಪ್ರಿಲ್ 21 : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಗಾಯಾಳು ಸರ್ಫರಾಜ್ ಖಾನ್ ಬದಲಿಗೆ ಬ್ಯಾಟ್ಸ್ ಮನ್ ಹರ್ ಪ್ರೀತ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಮಧ್ಯಪ್ರದೇಶದ ಎಡಗೈ ಬ್ಯಾಟ್ಸ್ ಮನ್ ಆಗಿರುವ ಹರ್ ಪ್ರೀತ್ ಸಿಂಗ್ 2010ರ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಒಂದು, 2013ರ ಐಪಿಎಲ್ ನಲ್ಲಿ ಪುಣೆ ವಾರಿಯರ್ಸ್ ತಂಡದಲ್ಲಿ ಮೂರು ಪಂದ್ಯದಲ್ಲಿ ಆಡಿದ್ದಾರೆ.[ಸರ್ಫರಾಜ್ ಖಾನ್ ಕೂಡಾ ಔಟ್, ಆರ್ ಸಿಬಿಗೆ ಆಘಾತವೋ ಆಘಾತ!]

IPL 2017: RCB announce Harpreet Singh as replacement for injured Sarfaraz Khan

ಈ ಬಾರಿಯ 2017 ಐಪಿಎಲ್ ಹರಾಜಿನ ವೇಳೆ ತಪ್ಪು ವರದಿಗಳಿಂದಾಗಿ ಹರ್ ಪ್ರೀತ್ ಅವಕಾಶ ವಂಚಿತರಾಗಿದ್ದರು. ಮುಂಬೈನ ರೈಲ್ವೆ ನಿಲ್ದಾಣದೊಳಕ್ಕೆ ಕಾರು ಚಲಾಯಿಸಿ ಪೊಲೀಸರ ಬಲೆಗೆ ಬಿದ್ದಿದ್ದ ಆರೋಪಕ್ಕೆ ಅವರು ಗುರಿಯಾಗಿದ್ದರು.

ಆದರೆ, ಕೆಲ ಹೊತ್ತಿನ ಬಳಿಕ ಅದು ಹರ್ ಪ್ರೀತ್ ಅಲ್ಲ ಬದಲಿಗೆ 201ರ 19 ವರ್ಷದೊಳಗಿನವರ ತಂಡದ ಸಹ ಆಟಗಾರ ಹರ್ಮೀತ್ ಸಿಂಗ್ ಎಂದು ತಿಳಿದುಬಂದಿತ್ತು.

ಸಯ್ಯದ್ ಮುಷ್ತಾಕ್ ಅಲಿ ವಲಯ ಮಟ್ಟದ ಟಿ20 ಪಂದ್ಯಾವಳಿಯಲ್ಲಿ 4 ಪಂದ್ಯಗಳಿಂದ 211 ರನ್ ಗಳಿಸಿ ಹರ್ ಪ್ರೀತ್ ಮಿಂಚಿದ್ದರು. ಇದೇ ವೇಳೆ ವಿಜಯ್ ಹಜಾರೆ ಟ್ರೋಫಿಯಲ್ಲಿ 5 ಪಂದ್ಯಗಳಲ್ಲಿ 271 ರನ್ ಕಲೆಹಾಕಿದ್ದರು.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+