ಸರ್ಫರಾಜ್ ಖಾನ್ ಕೂಡಾ ಔಟ್, ಆರ್ ಸಿಬಿಗೆ ಆಘಾತವೋ ಆಘಾತ!
ಬೆಂಗಳೂರು, ಏಪ್ರಿಲ್ 04: ಐಪಿಎಲ್ 10ರ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಆಘಾತ ಎದುರಿಸುತ್ತೆ. ಕೊಹ್ಲಿ ಬದಲಿಗೆ ತಂಡ ಸೇರಬೇಕಿದ್ದ ಸರ್ಫರಾಜ್ ಖಾನ್ ಅವರು ಟೂರ್ನಿಯಿಂದಲೇ ಔಟ್ ಆಗುವ ಸುದ್ದಿ ಬಂದಿದೆ.
ಇದರ ಜತೆಗೆ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಬೇಕಿದ್ದ ಎಬಿ ಡಿವಿಲಿಯರ್ಸ್ ಕೂಡಾ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ, ಆಲ್ ರೌಂಡರ್ ಶೇನ್ ವಾಟ್ಸನ್ ಅವರು ತಂಡದ ನಾಯಕರಾಗಿ ಆಡುವ ಸಾಧ್ಯತೆಯಿದೆ.
ಐಪಿಎಲ್ 2017 : ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು?
ಏಪ್ರಿಲ್ 05ರಿಂದ ಐಪಿಎಲ್ 10 ಆರಂಭವಾಗುತ್ತಿದ್ದು, ಹೈದರಾಬಾದಿನಲ್ಲಿ ಮೊದಲ ದಿನವೇ ಸೈನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಲಿದೆ.

ಬೆನ್ನುನೋವಿನಿಂದ ಬಳಲುತ್ತಿರುವ ಎಬಿ ಡಿವಿಲಿಯರ್ಸ್ ಅವರು ನಾಳಿನ ಪಂದ್ಯವಾಡುತ್ತಿಲ್ಲ ಎಂದು ಕೋಚ್ ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ. ಏಪ್ರಿಲ್ 08ರಂದು ಶನಿವಾರದ ಪಂದ್ಯವನ್ನು ಎಬಿ ಡಿವಿಲಿಯರ್ಸ್ ಆಡಲಿದ್ದಾರೆ.
ಈ ನಡುವೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರದಂದು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಸರ್ಫರಾಜ್ ಖಾನ್ ಅವರು ಕಾಲಿಗೆ ಗಾಯ ಮಾಡಿಕೊಂಡು ಮತ್ತೊಮ್ಮೆ ಗಾಯಾಳುಗಳ ಪಟ್ಟಿ ಸೇರಿದ್ದಾರೆ. ಐಪಿಎಲ್ 10ರಿಂದಲೇ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ.

ಎಬಿ ಡಿ ವಿಲಿಯರ್ಸ್ ಅಲ್ಲದೆ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಮಿಚೆಲ್ ಸ್ಟಾರ್ಕ್ ಗಾಯಾಳುಗಳ ಪಟ್ಟಿಯಲ್ಲಿದ್ದಾರೆ. ಈ ಪೈಕಿ ನಾಯಕ ವಿರಾಟ್ ಕೊಹ್ಲಿ ಅವರು ಚೇತರಿಕೆ ಕಾಣುತ್ತಿದ್ದು, ಕೆಲ ಪಂದ್ಯಗಳ ನಂತರ ತಂಡವನ್ನು ಸೇರಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications