ಗೋ ಗ್ರೀನ್ ಎಂದು ಬಿಎಂಟಿಸಿ ಹತ್ತಿದ ಕೊಹ್ಲಿ ಪಡೆ
ಬೆಂಗಳೂರು, ಮೇ 07: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಸಿರು ಉಳಿಸಿ, ಹಸಿರು ಬೆಳಸಿ ಗೋ ಗ್ರೀನ್ ಅಭಿಯಾನವನ್ನು ಈ ವರ್ಷವೂ ಮುಂದುವರೆಸಿದೆ. ಇದರ ಜತೆಗೆ ಸಾರ್ವಜನಿಕ ಸಾರಿಗೆಯನ್ನು ಬಳಸಿ ಎಂದು ಕರೆ ನೀಡುತ್ತಿದ್ದಾರೆ. ಹೋಟೆಲ್ ರೂಮಿನಿಂದ ಇಂದು ಸ್ಟೇಡಿಯಂಗೆ ಬಿಎಂಟಿಸಿ ಬಸ್ ಹತ್ತಿ ಬಂದಿದ್ದಾರೆ.
ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ
ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡ, ಗೌತಮ್ ಗಂಭೀರ್ ನೇತೃತ್ವದ ಕೆಕೆಆರ್ ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆ ಬಾರಿಗೆ ಎದುರಿಸಲಿದೆ. ಇದು ತವರು ನೆಲದಲ್ಲಿ ಐಪಿಎಲ್ 10ರ ಅಂತಿಮ ಹಣಾಹಣಿಯಾಗಿದೆ.
ಬೆಂಗಳೂರು ಮಹಾ ನಗರ ಪಾಲಿಕೆ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜತೆ ಕೈಜೋಡಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವು ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಟಗಾರರನ್ನು ಬಸ್ ನಲ್ಲಿ ಸಂಚರಿಸಲು ಉತ್ತೇಜಿಸಿದೆ.
ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವ ಗಾರ್ಡನ್ ಸಿಟಿ ಬೆಂಗಳೂರಿಗೆ ಬಿಎಂಟಿಸಿ ಬಸ್ ನಲ್ಲಿ ಸಂಚರಿಸುವುದೇ ಪರಿಹಾರ ಎಂದು ಉತ್ತೇಜನ ನೀಡಲಾಗಿದೆ.
ಕಳೆದ ಬಾರಿ ಕೆಕೆರ್ ವಿರುದ್ಧ 82ರನ್ ಗಳಿಂದ ಆರ್ ಸಿಬಿ ಸೋಲು ಕಂಡಿತ್ತು. ಈ ಟೂರ್ನಿಯಲ್ಲಿ ನಾಲ್ಕು ಬಾರಿ ಬೋಲ್ಡ್ ಔಟ್ ಆಗಿರುವ ಆರ್ ಸಿಬಿ, 12 ಪಂದ್ಯಗಳ ನಂತರ ಕೊನೆ ಸ್ಥಾನದಲ್ಲಿದೆ.
ಬಸ್ ಬಳಸಿ ಅಭಿಯಾನ
ಬೆಂಗಳೂರು ಮಹಾ ನಗರ ಸಾರ್ವಜನಿಕ ಸಾರಿಗೆ ವಾಹನವನ್ನು ಬಳಸಿದ ಆರ್ ಸಿಬಿ ತಂಡ.
ಹೋಟೆಲ್ ನಿಂದ ಸ್ಟೇಡಿಯಂ
ಹೋಟೆಲ್ ನಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿಶೇಷ ಬಸ್ ಗಳನ್ನು ಹತ್ತಿ ಬಂದ ಆರ್ ಸಿಬಿ ಆಟಗಾರರು.
ಆರ್ ಸಿಬಿ ಗೋ ಗ್ರೀನ್
ಆರ್ ಸಿಬಿ ಗೋ ಗ್ರೀನ್ ಅಭಿಯಾನದಲ್ಲಿ ಅಟಗಾರರು ಹಸಿರು ಜರ್ಸಿ ತೊಟ್ಟು ಪಂದ್ಯವಾಡುತ್ತಾರೆ. 2009ರಿಂದ ಇಲ್ಲಿ ತನಕ ಆರ್ ಸಿಬಿಯ ಈ ಅಭಿಯಾನಕ್ಕೆ ಭಾರಿ ಪ್ರೋತ್ಸಾಹ ಕಂಡು ಬಂದಿದೆ. ಎದುರಾಳಿ ತಂಡದ ನಾಯಕನಿಗೆ ಟಾಸ್ ವೇಳೆಯಲ್ಲಿ ಸಸಿ ಇರುವ ಕುಂಡವನ್ನು ನೀಡಲಾಗುತ್ತದೆ.
ಗೋ ಗ್ರೀನ್ ಎಂದ ಅರ್ ಸಿಬಿ
ಆರ್ ಸಿಬಿ ತನ್ನ ಗ್ರೀನ್ ಅಭಿಯಾನದ ಬಗ್ಗೆ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಪ್ರಚಾರ ಮಾಡಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications