ಆರ್ ಸಿಬಿಗೆ ಎಬಿಡಿ ನಾಯಕ, ಕೊಹ್ಲಿ ಬದಲಿಗೆ ಸರ್ಫರಾಜ್!
ಬೆಂಗಳೂರು, ಮಾರ್ಚ್ 31: ಐಪಿಎಲ್ 10ರ ಆರಂಭಕ್ಕೂ ಮುನ್ನ ಆರ್ ಸಿಬಿಗೆ ಗಾಯದ ಸಮಸ್ಯೆ ತಲೆದೋರಿದೆ. ಕೊಹ್ಲಿ ಬದಲಿಗೆ ಸರ್ಫರಾಜ್ ಆಡಲಿದ್ದಾರೆ. ತಂಡದ ನಾಯಕರಾಗಿ ಎಬಿ ಡಿ ವಿಲಿಯರ್ಸ್ ಮುನ್ನಡೆಸುವ ಸಾಧ್ಯತೆ ಇದೆ ಕೋಚ್ ವೆಟ್ಟೋರಿ ಹೇಳಿದ್ದಾರೆ.
ಐಪಿಎಲ್ 2017 : ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು?
ಆಸ್ಟ್ರೇಲಿಯಾದ ವಿರುದ್ಧದ ರಾಂಚಿ ಟೆಸ್ಟ್ ಪಂದ್ಯದಲ್ಲಿ ಫೀಲ್ಡ್ ಮಾಡುವಾಗ ಬಲ ಭುಜಕ್ಕೆ ಗಾಯ ಮಾಡಿಕೊಂಡಿರುವ ನಾಯಕ ವಿರಾಟ್ ಕೊಹ್ಲಿ ಅವರು ಇನ್ನೂ ಗುಣಮುಖರಾಗಿಲ್ಲ. ಕೊಹ್ಲಿ ಅವರು ಚೇತರಿಕೆ ಕಂಡರೂ ಏಪ್ರಿಲ್ 02ರಂದು ಫಿಟ್ನೆಸ್ ಪರೀಕ್ಷೆ ಪಾಸಾಗಬೇಕಿದ್ದು, ಆರ್ ಸಿಬಿ ಪರ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

24 ವರ್ಷ ವಯಸ್ಸಿನ ಕೆಎಲ್ ರಾಹುಲ್ ಅವರು ಕೂಡಾ ಭುಜ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಲಂಡನ್ನಿಗೆ ತೆರಳುತ್ತಿದ್ದಾರೆ. ಈಗ ಕೊಹ್ಲಿ ಬದಲಿಗೆ ಯುವ ಪ್ರತಿಭೆ ಸರ್ಫರಾಜ್ ಖಾನ್ ತಂಡದಲ್ಲಿ ಆಡಲಿದ್ದಾರೆ. ತಂಡದ ನಾಯಕತ್ವದ ಹೊಣೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಆರ್ ಸಿಬಿ ಕೋಚ್ ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Sarfaraz to replace Kohli: Vettori
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications