ವಾರ್ನ್ ಶ್ರೇಷ್ಠ XI : ಧೋನಿ ನಾಯಕ, ಸ್ಟಾರ್ ಆಟಗಾರ ಮಿಸ್ಸಿಂಗ್
ಬೆಂಗಳೂರು, ಏಪ್ರಿಲ್ 23: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ವರ್ಷದಲ್ಲಿ ರಾಜಸ್ಥಾನ ರಾಯಲ್ಸ್ ನಾಯಕರಾಗಿ ಕಪ್ ಎತ್ತಿದ್ದ ಮಾಜಿ ಕ್ರಿಕೆಟರ್ ಶೇನ್ ವಾರ್ನ್ ಅವರು ತಮ್ಮ ನೆಚ್ಚಿನ ಅಲ್ ಟೈಮ್ XI ಹೆಸರಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದ ಎಂಎಸ್ ಧೋನಿ ಅವರು ಈ ತಂಡಕ್ಕೆ ನಾಯಕರಾಗಿದ್ದಾರೆ. ಆದರೆ, ಪ್ರಮುಖ ಸ್ಟಾರ್ ಆಟಗಾರನನ್ನು ಕಡೆಗಣಿಸಲಾಗಿದೆ.
ಐಪಿಎಲ್ ಅತ್ಯಧಿಕ ವೈಯಕ್ತಿಕ ರನ್ ಗಳಿಕೆ ಮಾಡಿರುವ, ಹಾಲಿ ಗುಜರಾತ್ ಲಯನ್ಸ್ ತಂಡದ ನಾಯಕರಾಗಿರುವ ಸುರೇಶ್ ರೈನಾ ಅವರನ್ನು ಆಯ್ಕೆ ಮಾಡಿಲ್ಲ. ಉಳಿದಂತೆ ನಾಲ್ವರು ವಿದೇಶಿ ಆಟಗಾರರು ಸೇರಿದಂತೆ ಕಳೆದ ಹತ್ತು ವರ್ಷಗಳಲ್ಲಿ ಐಪಿಎಲ್ ಕಂಡ ಉತ್ತಮ ಆಟಗಾರರನ್ನು ತಂಡದಲ್ಲಿ ಹೆಸರಿಸಲಾಗಿದೆ.

ಐಪಿಎಲ್ ನ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 2010 ಹಾಗೂ 2011ರಲ್ಲಿ ಕಪ್ ಗೆಲ್ಲಿಸಿಕೊಟ್ಟರು. 35 ವರ್ಷ ವಯಸ್ಸಿನ ಧೋನಿ ಅವರು ನಾಯಕರಾಗಿ ಹೆಚ್ಚು ಐಪಿಎಲ್ ಪಂದ್ಯವಾಡಿದ ದಾಖಲೆ ಕೂಡಾ ಹೊಂದಿದ್ದಾರೆ.
ನಾಯಕರಾಗಿ 143 ಪಂದ್ಯಗಳಲ್ಲಿ 83 ಗೆಲುವು ಹಾಗೂ 59 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಒಂದು ಪಂದ್ಯ ಯಾವುದೇ ಫಲಿತಾಂಶ ಬಂದಿಲ್ಲ. ಧೋನಿ ಅವರು ಯಾವುದೇ ತಂಡದ ನಾಯಕರಾಗಿ ಸಹಜವಾಗಿ ಆಯ್ಕೆ ಮಾಡಬಹುದು ಎಂದು ಶೇನ್ ಹೇಳಿದ್ದಾರೆ.
ವಿದೇಶಿ ಆಟಗಾರರ ಪೈಕಿ ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ಜಾಕ್ ಕಾಲಿಸ್ ಹಾಗೂ ಲಸಿತ್ ಮಾಲಿಂಗರನ್ನು ಆಯ್ಕೆ ಮಾಡಲಾಗಿದೆ.
ಶೇನ್ ವಾರ್ನ್ ಆಯ್ಕೆಯ ಐಪಿಎಲ್ ನ 'ಶ್ರೇಷ್ಠ XI'
* ಕ್ರಿಸ್ ಗೇಲ್ (ವಿದೇಶಿ ಆಟಗಾರ) -ವೆಸ್ಟ್ ಇಂಡೀಸ್,- ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ)
* ಬ್ರೆಂಡನ್ ಮೆಕಲಮ್ (ವಿದೇಶಿ ಆಟಗಾರ)-ನ್ಯೂಜಿಲೆಂಡ್-ಗುಜರಾತ್ ಲಯನ್ಸ್ (ಜಿಎಲ್)
* ಜಾಕ್ ಕಾಲಿಸ್ (ವಿದೇಶಿ ಆಟಗಾರ) ದಕ್ಷಿಣ ಆಫ್ರಿಕಾ-ಕೋಲ್ಕತ್ತಾ ನೈಟ್ ರೈಡರ್ಸ್ (ಕೋಚ್)
* ವಿರಾಟ್ ಕೊಹ್ಲಿ (ಆರ್ ಸಿಬಿ)
* ರೋಹಿತ್ ಶರ್ಮ(ಮುಂಬೈ ಇಂಡಿಯನ್ಸ್)
* ಯುವರಾಜ್ ಸಿಂಗ್ (ಸನ್ ರೈಸರ್ಸ್ ಹೈದರಾಬಾದ್)
* ಮಹೇಂದ್ರ ಸಿಂಗ್ ಧೋನಿ (ನಾಯಕ), (ರೈಸಿಂಗ್ ಪುಣೆ ಸೂಪರ್ ಜೈಂಟ್)
* ರವೀಂದ್ರ ಜಡೇಜ( ಗುಜರಾತ್ ಲಯನ್ಸ್)
* ಹರ್ಭಜನ್ ಸಿಂಗ್ (ಮುಂಬೈ ಇಂಡಿಯನ್ಸ್)
* ಲಸಿತ್ ಮಾಲಿಂಗ (ವಿದೇಶಿ ಆಟಗಾರ)- ಶ್ರೀಲಂಕಾ (ಮುಂಬೈ ಇಂಡಿಯನ್ಸ್)
* ಉಮೇಶ್ ಯಾದವ್ (ಕೆಕೆಆರ್)
(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications