Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2017 ಐಪಿಎಲ್ ನನ್ನ ಪಾಲಿನ ಅತ್ಯಂತ ಕೆಟ್ಟ ಟೂರ್ನಿ: ವಾಟ್ಸನ್

ಬೆಂಗಳೂರು, ಮೇ 11 : ಇಂಡಿಯನ್ ಪ್ರೀಮಿಯರ್ ಲೀಗ್ ಹತ್ತನೇ ಆವೃತ್ತಿಯಲ್ಲಿ ಹೀನಾಯವಾಗಿ ಪ್ಲೇ ಆಫ್ ನಿಂದ ಹೊರ ಬಿದ್ದಿರುವ ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡದ ಆಟಗಾರ ಶೇನ್ ವಾಟ್ಸನ್ ಬೇಸರ ವ್ಯಕ್ತಪಡಿಸಿದ್ದಾರೆ

ಪ್ರಸಕ್ತ ವರ್ಷದ ಐಪಿಎಲ್ ಪಂದ್ಯಾವಳಿ ನನ್ನ ಪಾಲಿನ ಅತ್ಯಂತ ಕೆಟ್ಟ ಟೂರ್ನಿಯಾಗಿದೆ ಎಂದು ಆರ್ ಸಿಬಿ ತಂಡದ ಆಲ್ ರೌಂಡರ್ ಶೇನ್ ವಾಟ್ಸನ್ ವಿಷಾದ ವ್ಯಕ್ತಪಡಿಸಿದ್ದಾರೆ. ಆರ್ ಸಿಬಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆಂದು ಈ ಎರಡು ವರ್ಷಗಳಲ್ಲಿ ಅರ್ಥಮಾಡಿಕೊಂಡಿದ್ದೇನೆ. ಕಳೆದ ಬಾರಿ ಆ ನಂಬಿಕೆಯನ್ನು ಉಳಿಸಿಕೊಂಡಿದ್ದೆವು.

IPL 2017: Shane Watson Admits To 'Worst-Ever' Year In The League

ಆದರೆ, ಈ ಬಾರಿ ಕೆಟ್ಟದಾಗಿ ಆಡುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಆಘಾತ ತಂದಿದ್ದೇವೆ ಎಂದು ಆಸೀಸ್ ಆಟಗಾರ ಬೇಸರ ವ್ಯಕ್ತಪಡಿಸಿದರು.

ಚಿನ್ನಸ್ವಾಮಿ ಸೇರಿದಂತೆ ಯಾವುದೇ ಕ್ರೀಡಾಂಗಣದಲ್ಲಿ ಆಡಿದರೂ ಅಭಿಮಾನಿಗಳಿಂದ ಅದ್ಭುತ ಬೆಂಬಲ ವ್ಯಕ್ತವಾಗುತ್ತಿತ್ತು. ಈಡನ್ ನಲ್ಲಿ ಕಳಪೆ ಆಟವಾಡಿದ ಹೊರತಾಗಿಯೂ ಬೆಂಬಲಿಗರ ಉತ್ಸಾಹ ನೋಡಿ ಮನಸ್ಸು ಉಲ್ಲಾಸಗೊಂಡಿತು.

ಹಿಂದೆ ರಾಜಸ್ಥಾನ ತಂಡದ ಪರ ಆಡುತ್ತಿದ್ದಾಗ ಈ ರೀತಿಯ ಬೆಂಬಲವನ್ನು ಗಮಿನಿಸಿಲ್ಲ ಎಂದು ವಾಟ್ಸನ್ ತಿಳಿಸಿದರು.

ಶೇನ್ ವ್ಯಾಟ್ಸನ್ ಆರ್ ಸಿಬಿ ಪರ 11.16ರ ಸರಾಸರಿಯಂತೆ ಕೇವಲ 67ರನ್ ಮಾತ್ರ ಗಳಿಸಿದ್ದಾರೆ. ಇನ್ನು ಬೌಲಿಂಗ್ ನಲ್ಲೂ ದುಬಾರಿಯಾಗಿರುವ ಆಸೀಸ್ ವೇಗಿ ಕೇವಲ 4 ವಿಕೆಟ್ ಮಾತ್ರ ಕಬಳಿಸಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+