ರಾಹುಲ್ ಅನುಪಸ್ಥಿತಿಯಲ್ಲಿ ವಾಟ್ಸನ್ ಮೇಲೆ ಹೆಚ್ಚಿನ ಹೊರೆ
ಬೆಂಗಳೂರು, ಏಪ್ರಿಲ್ 03: ಐಪಿಎಲ್ 10ರ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗಾಯಾಳುಗಳ ಸಮಸ್ಯೆಯಿಂದ ಬಳಲುತ್ತಿದೆ.
ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಎಬಿ ಡಿವಿಲಿಯರ್ಸ್, ಮಿಚೆಲ್ ಸ್ಟಾರ್ಕ್ ಗಾಯಾಳುಗಳ ಪಟ್ಟಿಯಲ್ಲಿದ್ದು, ಆಲ್ ರೌಂಡರ್ ಶೇನ್ ವಾಟ್ಸನ್ ಮೇಲೆ ಹೆಚ್ಚಿನ ಜವಾಬ್ದಾರಿ ಹೊರೆಸಲಾಗುವ ನಿರೀಕ್ಷೆಯಿದೆ. ಆದರೆ, ನಾಯಕ ಕೊಹ್ಲಿ ಅವರು ತಂಡದೊಡನೆ ಕಾಣಿಸಿಕೊಂಡಿದ್ದು, ತಂಡದಲ್ಲಿ ಹೊಸ ಹುರುಪು ಮೂಡಿದೆ.
ಐಪಿಎಲ್ 2017 : ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು?

ಕೆಎಲ್ ರಾಹುಲ್ ಅವರ ಸ್ಥಾನವನ್ನು ತಮಿಳುನಾಡಿನ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎನ್. ಜಗದೀಶನ್ ಅವರು ತುಂಬುವ ಸಾಧ್ಯತೆಯಿದೆ. ಭಾನುವಾರದಂದು ಬೆಂಗಳೂರಿನಲ್ಲಿ ಟ್ರಯಲ್ಸ್ನಲ್ಲಿ ಪಾಲ್ಗೊಂಡಿದ್ದರು. ಕೊಹ್ಲಿ ಅವರು ಕೂಡಾ ಶಿಬಿರದಲ್ಲಿ ಕಾಣಿಸಿಕೊಂಡು ಆಟಗಾರರಿಗೆ ಹುರುಪು ಮೂಡಿಸಿದರು.
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಪ್ರತಿಭೆಗಳಾದ ಸರ್ಫರಾಜ್ ಖಾನ್, ಸಚಿನ್ ಬೇಬಿ, ಮನ್ದೀಪ್ ಸಿಂಗ್ ಅವರಿಗೆ ಈ ಬಾರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎಂದು ಕೋಚ್ ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರು ಭುಜದ ನೋವಿನಿಂದ ಬಳಲುತ್ತಿದ್ದು, ಕೆಲ ಪಂದ್ಯಗಳನ್ನಾಡುವುದು ಅನುಮಾನ. ಕೆಎಲ್ ರಾಹುಲ್ ಅವರು ಭುಜದ ನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗಾಗಿ ಲಂಡನ್ನಿಗೆ ತೆರಳಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಎಬಿ ಡಿ ವಿಲಿಯರ್ಸ್ ಅವರು ಬೆಂಗಳೂರು ತಂಡ ಸೇರಿದ್ದಾರೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: IPL 10: Watson to open for RCB
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications