Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂದಿನ ಐಪಿಎಲ್ ನಲ್ಲಿ ಧೋನಿ ಆಡುವುದು ಅನುಮಾನ?

ಬೆಂಗಳೂರು, ಏಪ್ರಿಲ್ 29: ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರು ಮುಂದಿನ ಐಪಿಎಲ್ ನಲ್ಲಿ ಆಡುವುದು ಅನುಮಾನ ಎಂದು ಆಸ್ಟ್ರೇಲಿಯಾದ ದಿಗ್ಗಜ ಹೇಳಿದ್ದಾರೆ. ಈ ಮೂಲಕ ಧೋನಿ ಅವರು ಐಪಿಎಲ್ 10ರ ನಂತರ ನಿವೃತ್ತಿಯಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಆಸ್ಟ್ರೇಲಿಯಾ ಮಾಜಿ ನಾಯಕ, ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ರಿಕಿ ಪಾಂಟಿಂಗ್ ಅವರು ಧೋನಿ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ. ಮುಂದಿನ ಐಪಿಎಲ್ ನಲ್ಲಿ ಧೋನಿ ಅವರನ್ನು ನೋಡುವುದು ಕಷ್ಟ. ಹಣದ ಹೊಳೆ ಹರಿಸುವ ಟ್ವೆಂಟಿ20 ಟೂರ್ನಮೆಂಟ್ ನ ಮುಂದಿನ ಆವೃತ್ತಿಯಲ್ಲಿ ಯುವಕರಿಗೆ ಆದ್ಯತೆ ಸಿಗಲಿದೆ ಎಂದಿದ್ದಾರೆ.

MSD to retire? This could be Dhoni's last IPL, says Australian legend

ಕ್ರಿಕೆಟ್ ಆಸ್ಟ್ರೇಲಿಯಾದ ವೆಬ್ ಸೈಟ್ ಜತೆ ಶನಿವಾರ(ಏಪ್ರಿಲ್ 29) ದಂದು ಮಾತನಾಡಿದ ರಿಕಿ ಪಾಂಟಿಂಗ್, 35 ವರ್ಷ ವಯಸ್ಸಿನ ಧೋನಿ ಅವರು ಈಗಾಗಲೇ ನಾಯಕತ್ವವನ್ನು ತೊರೆದು ಜವಾಬ್ದಾರಿಯನ್ನು ಕಳೆದುಕೊಂಡಿದ್ದಾರೆ. ಕೇವಲ ಆಟಗಾರರಾಗಿ ಮುಂದುವರೆಯುವುದು ಅವರ ವಯಸ್ಸಿನ ದೃಷ್ಟಿಯಿಂದ ಪರಿಗಣಿಸಲು ಯೋಗ್ಯವಲ್ಲ.

ಧೋನಿ ಅವರು ನಾಯಕ, ಅಟಗಾರನಾಗಿ ಎಲ್ಲವನ್ನು ಸಾಧಿಸಿದ್ದಾರೆ. ಸ್ಟೀವ್ ಸ್ಮಿತ್ ಅವರನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ನಾಯಕರಾಗಿ ಬಡ್ತಿ ನೀಡಿದ್ದು ಸರಿಯಾದ ಕ್ರಮವಾಗಿದೆ ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+