ಐಪಿಎಎಲ್: ಈ 10 ಕ್ರಿಕೆಟಿಗರಲ್ಲಿ ಆರೇಂಜ್ ಕ್ಯಾಪ್ ಯಾರಿಗೆ?
ಅಂತೂ ಇಂತು ಈ ಬಾರಿಯ ಐಪಿಎಲ್..... ತನ್ನ ದಶಮಾನೋತ್ಸವ ಸಂಭ್ರಮದಲ್ಲಿರುವ ಐಪಿಎಲ್ ಶೀಘ್ರದಲ್ಲೇ ನಿರ್ಣಾಯಕ ಹಂತದತ್ತ ಹೊರಳಲಿದೆ. ಅಂದರೆ, ಪ್ಲೇ ಆಫ್ ನತ್ತ ಹೊರಳಲಿದೆ.
ಜಗತ್ತಿನ ನಾನಾ ದೇಶಗಳ ಕ್ರಿಕೆಟ್ ಪ್ರತಿಭೆಗಳ ಸಂಗಮ ಎಂಬಂತಿರುವ ಈ ಟೂರ್ನಿಯಲ್ಲಿ ಹುಚ್ಚು ಹೊಳೆಯಲ್ಲಿ ಮಿಂದೆದ್ದಿರುವ, ಮಿಂದೇಳುತ್ತಿರುವ ಅಸಂಖ್ಯ ಅಭಿಮಾನಿಗಳಂತೂ ರಸದೌತಣದಂತಹ ಪಂದ್ಯಗಳನ್ನು ವೀಕ್ಷಿಸಿದ್ದಾರೆ, ಮೆಚ್ಚಿದ್ದಾರೆ... ಮೆಚ್ಚಿ ಕೊಂಡಾಡಿದ್ದಾರೆ.

ಈಗ, ಎಲ್ಲಾ ತಂಡಗಳು ಪರಸ್ಪರ ಕೈ ಮಿಲಾಯಿಸುವ ಹಂತವು ಮುಗಿದು ಶೀಘ್ರದಲ್ಲೇ ಈ ಟೂರ್ನಿ ಪ್ಲೇ ಆಫ್ ಎಂಬ ಮತ್ತೊಂದು ರೋಚಕ ಘಟ್ಟ ತಲುಪಲಿದೆ. ಆದರೆ, ಇದರ ಜತೆಯಲ್ಲೇ 50 ಪಂದ್ಯಗಳಲ್ಲಿ ಅಗ್ರ ಸ್ಥಾನ ಪಡೆದ ಬ್ಯಾಟ್ಸ್ ಮನ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇಡೀ ಟೂರ್ನಿಯಲ್ಲಿ ಅಗ್ರ ವೈಯಕ್ತಿಕ ಮೊತ್ತ ಕಲೆಹಾಕುವ ಬ್ಯಾಟ್ಸ್ ಮನ್ ಗಳಿಗೆ ನೀಡಲಾಗುವ ಆರೇಂಜ್ ಕ್ಯಾಪ್ ಯಾರಿಗೆ ಸಿಗುತ್ತೆ ಎಂಬುದರ ಲೆಕ್ಕಾಚಾರ ಈಗಿನಿಂದಲೇ ಆರಂಭವಾಗಿದೆ.
ಮೇ 10ರಂದು ನಡೆದಿದ್ದ ಗುಜರಾತ್ ಲಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ನಡುವಿನ ಸಮರವೇ ಈ ಬಾರಿಯ ಐಪಿಎಲ್ ನ 50ನೇ ಪಂದ್ಯ. ಅಲ್ಲಿಯವರೆಗಿನ ಲೆಕ್ಕಾಚಾರದ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ.

ಸನ್ ರೈಸರ್ಸ್ ಹೈದರಾಬಾದ್
ಈ ಬಾರಿಯ ಐಪಿಎಲ್ ನಲ್ಲಿ ಈವರೆಗೆ 12 ಇನಿಂಗ್ಸ್ ಗಳನ್ನು ಆಡಿರುವ ವಾರ್ನರ್, ಸನ್ ರೈಸರ್ಸ್ ತಂಡದ ಪರವಾಗಿ, 535 ರನ್ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ, 3 ಅರ್ಧಶತಕ ಸೇರಿವೆ. ಈ ಎಡಗೈ ಬ್ಯಾಟ್ಸ್ ಮನ್ ನಿಂದ 52 ಬೌಂಡರಿ, 24 ಸಿಕ್ಸರ್ ಗಳು ಸೇರಿವೆ.

ಸನ್ ರೈಸರ್ಸ್ ಹೈದರಾಬಾದ್
ಸನ್ ರೈಸರ್ಸ್ ತಂಡದ ಆರಂಭಿಕ ಶಿಖರ್ ಧವನ್, ಈ ಬಾರಿಯ ಐಪಿಎಲ್ ನಲ್ಲಿ ಈವರೆಗೆ12 ಪಂದ್ಯಗಳಿಂದ 450 ರನ್ ಗಳಿಸಿದ್ದಾರೆ. ಈ ಎಡಗೈ ಬ್ಯಾಟ್ಸ್ ಮನ್ ನ ಈ ಸಾಧನೆಯಲ್ಲಿ 3 ಅರ್ಧಶತಕ ಇವೆ.

ಗುಜರಾತ್ ಲಯನ್ಸ್
ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಅವರು ಈ ಬಾರಿಯ ಐಪಿಎಲ್ ನಲ್ಲಿ 13 ಪಂದ್ಯಗಳಿಂದ 430 ರನ್ ಪೇರಿಸಿದ್ದಾರೆ. ಆರೇಂಜ್ ಕ್ಯಾಪ್ ಪಡೆಯಬಲ್ಲ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಅವರೀಗ 3ನೇ ಸ್ಥಾನದಲ್ಲಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್
ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಈ ಬಾರಿಯ ಐಪಿಎಲ್ ನಲ್ಲಿ ಈವರೆಗೆ 13 ಪಂದ್ಯಗಳಿಂದ 433 ರನ್ ಗಳಿಸಿದ್ದಾರೆ. ಆರೇಂಜ್ ಕ್ಯಾಪ್ ಕ್ರಿಕೆಟಿಗರ ಪಟ್ಟಿಯಲ್ಲಿ 4ನೇ ಸ್ಥಾದಲ್ಲಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್
ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಪಾಲ್ಗೊಂಡಿರುವ ದಕ್ಷಿಣ ಆಫ್ರಿಕಾದ ಈ ಆರಂಭಿಕ ಆಟಗಾರ, ಕಿಂಗ್ಸ್ ಇಲೆವೆನ್ ಪಂಜಾಬ್ ನಲ್ಲಿ ತಮ್ಮ ಛಾಪು ತೋರಿದ್ದು, 10 ಪಂದ್ಯಗಳಿಂದ 420 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಕೂಡಾ ಸೇರಿವೆ. ಅಸಲಿಗೆ, ಆರೇಂಜ್ ಕ್ಯಾಪ್ ಕ್ರಿಕೆಟಿಗರ ಪಟ್ಟಿಯಲ್ಲಿ ಇವರೇ ಅಗ್ರಸ್ಥಾನದಲ್ಲಿರುವುದು. ಟೂರ್ನಿಯ ಅರ್ಧಕ್ಕೇ ಇವರು ಅನಿವಾರ್ಯವಾಗಿ ಸ್ವದೇಶಕ್ಕೆ ಹೊರಟು ಹೋಗಿದ್ದು ಬೇಸರದ ಸಂಗತಿ.

ಕೋಲ್ಕತಾ ನೈಟ್ ರೈಡರ್ಸ್
ಕರ್ನಾಟಕದ ಈ ಕ್ರಿಕೆಟ್ ಕಲಿ, ಈವರೆಗೆ ತಾವು ಆಡಿರುವ 10 ಇನಿಂಗ್ಸ್ ಗಳಿಂದ 384 ರನ್ ದಾಖಲಿಸಿದ್ದಾರೆ.

ಡೆಲ್ಲಿ ಡೇರ್ ಡೆವಿಲ್ಸ್
ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಈ ಯುವ ಆಟಗಾರ 12 ಪಂದ್ಯಗಳಿಂದ 384 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ, ಎರಡು ಅರ್ಧಶತಕ ಸೇರಿವೆ.

ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರು, ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್ (ಆರ್ ಪಿಎಸ್) ಪರವಾಗಿ 11 ಇನಿಂಗ್ಸ್ ಗಳಿಂದ 367 ರನ್ ಕಲೆಹಾಕಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್
ಕನ್ನಡದ ಮತ್ತೊಬ್ಬ ಪ್ರತಿಭೆ ಮನೀಶ್ ಪಾಂಡೆ ಈ ಬಾರಿ ಗಳಿಸಿದ್ದು, - 12 ಇನಿಂಗ್ಸ್ ಗಳಿಂದ 363 ರನ್. ಇವರು ಪ್ರತಿನಿಧಿಸಿರುವುದು ಕೋಲ್ಕತಾ ತಂಡವನ್ನು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications