ಇಶಾಂತ್ ಶರ್ಮಗೆ ಭಾಗ್ಯದ ಬಾಗಿಲು ತೆರೆಯಿತು, ಐಪಿಎಲ್ ಗೆ ಬುಲಾವ್!
ನವದೆಹಲಿ, ಏಪ್ರಿಲ್ 04: ಟೀಂ ಇಂಡಿಯಾದ ಹಿರಿಯ ವೇಗಿ ಇಶಾಂತ್ ಶರ್ಮ ಅವರಿಗೆ ಏಪ್ರಿಲ್ 04ರಂದು ಕಿಂಗ್ಸ್ XI ಪಂಜಾಬ್ ತಂಡದಿಂದ ಕರೆ ಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯಲ್ಲಿ ಆಡುವ ಅವಕಾಶ ಒದಗಿ ಬಂದಿದೆ.
ಐಪಿಎಲ್ 2017 : ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು?
ಐಪಿಎಲ್ ನಲ್ಲಿ ನಡೆದ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಇಶಾಂತ್ ಶರ್ಮ ಅವರ ಟ್ವೆಂಟಿ20 ವೃತ್ತಿ ಬದುಕಿನಲ್ಲಿ ಹಿನ್ನಡೆ ಉಂಟಾಯಿತು ಎನ್ನುವಷ್ಟರಲ್ಲಿ ಐಪಿಎಲ್ ಬಾಗಿಲು ತೆರೆದಿದೆ.
ಟೀಂ ಇಂಡಿಯಾ ಪರ 77 ಟೆಸ್ಟ್ ಪಂದ್ಯಗಳನ್ನಾಡಿರುವ ಹಿರಿಯ ವೇಗಿ ಇಶಾಂತ್ ಶರ್ಮ ಅವರು ಈ ಬಾರಿ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದು ಹಲವರಿಗೆ ಅಚ್ಚರಿ ಮೂಡಿಸಿತ್ತು. ಇಶಾಂತ್ ಅವರಿಗೆ 2 ಕೋಟಿ ರು ಮೂಲ ಬೆಲೆ ನಿಗದಿಪಡಿಸಲಾಗಿತ್ತು.

ಹರಾಜು ಪ್ರಕ್ರಿಯೆಯಲ್ಲಿ ಎರಡು ಬಾರಿ ಇಶಾಂತ್ ಶರ್ಮ ಹೆಸರು ಕೂಗಲಾಯಿತು. ಆದರೆ,8 ಫ್ರಾಂಚೈಸಿಗಳಲ್ಲಿ ಯಾರೊಬ್ಬರು ಇಶಾಂತ್ ರನ್ನು ಕೊಳ್ಳಲು ಮನಸು ಮಾಡಿರಲಿಲ್ಲ.
ಆದರೆ, ಈಗ ಮುರಳಿ ವಿಜಯ್ ಅವರು ಗಾಯಾಳುವಾಗಿ ತಂಡದಿಂದ ಹೊರ ನಡೆದಿರುವುದರಿಂದ ಅವರ ಬದಲಿಗೆ ಇಶಾಂತ್ ರನ್ನು ಪಂಜಾಬ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇಶಾಂತ್ ಅವರು ಈ ಮುಂಚೆ ಕೋಲ್ಕತಾ ನೈಟ್ ರೈಡರ್ಸ್, ಡೆಕ್ಕನ್ ಚಾರ್ಜಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ ಅನುಭವ ಹೊಂದಿದ್ದಾರೆ.
28 ವರ್ಷ ವಯಸ್ಸಿನ ಇಶಾಂತ್ ಅವರು 107 ಟ್ವೆಂಟಿ20 ಪಂದ್ಯಗಳಿಂದ 88 ವಿಕೆಟ್ ಗಳಿಸಿದ್ದು, 7.75 ರನ್ ಸರಾಸರಿಯಂತೆ ರನ್ ನೀಡಿದ್ದಾರೆ. 5/12 ಇವರ ಉತ್ತಮ ಬೌಲಿಂಗ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications