ರಾಜ್ ಕೋಟ್, ಏಪ್ರಿಲ್ 19: ಗುಜರಾತ್ ಲಯನ್ಸ್ ಆಟಗಾರ ಬ್ರೆಂಡನ್ ಮೆಕಲಮ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯ ಎಂದರೆ ಯಾಕೋ ಪಾದರಸದ ರೀತಿ ಆಡುತ್ತಾರೋ ಗೊತ್ತಿಲ್ಲ.
ಮಂಗಳವಾರದ ಪಂದ್ಯದಲ್ಲೂ ಕೂಡಾ ಬ್ಯಾಟಿಂಗ್, ಫೀಲ್ಡಿಂಗ್ ನಲ್ಲಿ ಮಿಂಚಿದರು. ಗೇಲ್ ಅವರು ನೀಡಿದ್ದ ಕ್ಯಾಚನ್ನು ಬೌಂಡರಿ ಬಳಿ ಅದ್ಭುತವಾಡಿ ಹಿಡಿದ ಬ್ರೆಂಡನ್ ಗೆ ಎಲ್ಲರೂ ಹ್ಯಾಟ್ಸಾಫ್ ಎನ್ನುವಷ್ಟರಲ್ಲಿ ಹ್ಯಾಟ್ ಕೈ ಕೊಟ್ಟಿದ್ದು ಗಮನಕ್ಕೆ ಬಂದಿತು.

ಗೇಲ್ ಅವರ ಕ್ಯಾಚ್ ಹಿಡಿದ ಬ್ರೆಂಡನ್ ಅವರು ತಂಡದೊಡನೆ ಸಂಭ್ರಮಿಸುತ್ತಿದ್ದಂತೆ ಮೂರನೇ ಅಂಪೈರ್ ಅವರು ನಾಟೌಟ್ ಎಂದು ತೀರ್ಪಿತ್ತರು. ಗೇಲ್ ಅವರ ವಿಕೆಟ್ ಉಳಿಸಿದ್ದು ಬ್ರೆಂಡನ್ ಹಾಕಿಕೊಂಡಿದ್ದ ಕ್ಯಾಪ್. ಕ್ಯಾಚ್ ಹಿಡಿದ ಸಂದರ್ಭದಲ್ಲಿ ಬೌಂಡರಿ ಗೆರೆಗೆ ಕ್ಯಾಪ್ ತಗುಲಿದ್ದು ರೀಪ್ಲೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು.