ಗೆಳತಿಗಾಗಿ ಚಾಲೆಂಜ್ ತಿರಸ್ಕರಿಸಿದ ವಿರಾಟ್ ಕೊಹ್ಲಿ!
ಬೆಂಗಳೂರು, ಏಪ್ರಿಲ್ 28: ಇಂಡಿಯನ್ ಪ್ರೀಮಿಯರ್ ಲೀಗ್ ನ 10ನೇ ಆವೃತ್ತಿಯಲ್ಲಿ ಹೊಸ ಬಗೆಯ ಸ್ಟೈಲ್ ಏನಿದೆ? ಎಂದು ಹುಡುಕಿದವರಿಗೆ ಈ ಬಾರಿ ಭಾರತೀಯ ಆಟಗಾರರು 'ಗಡ್ಡ ತೆಗೆಯುವ ಚಾಲೆಂಜ್' ತೆಗೆದುಕೊಂಡಿರುವುದು ಕಂಡು ಬರುತ್ತದೆ. ಆದರೆ, ವಿರಾಟ್ ಕೊಹ್ಲಿ ಮಾತ್ರ ಈ ಚಾಲೆಂಜ್ ಒಪ್ಪಿಕೊಂಡಿಲ್ಲ. ಕಾರಣ, ಗೆಳತಿ ಅನುಷ್ಕಾಗೆ ಇಷ್ಟವಿಲ್ಲ.
ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ರೋಹಿತ್ ಶರ್ಮ ಹಾಗೂ ಹಾರ್ದಿಕ್ ಪಾಂಡ್ಯ ಎಲ್ಲರೂ ತಮ್ಮ ಗಡ್ಡದ ಶೈಲಿಯನ್ನು ಬದಲಾಯಿಸಿಕೊಂಡು ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿದ್ದಾರೆ. ಆದರೆ, ಗಡ್ಡ ಇರಿಸಿಕೊಂಡು ಒರಟು ಲುಕ್ ನಲ್ಲಿರುವ ಕೊಹ್ಲಿ ಅವರು ಮಾತ್ರ ತಮ್ಮ ಲುಕ್ ಬದಲಾಯಿಸಿಕೊಳ್ಳಲು ಒಪ್ಪಿಕೊಂಡಿಲ್ಲ.
ಈ ಬಗ್ಗೆ ಕಳೆದ ವಾರ ಬರೆದುಕೊಂಡ ಕೊಹ್ಲಿ, ಕ್ಷಮಿಸಿ, ನಾನು ಕ್ಲೀನ್ ಶೇವ್ ಗೆ ಈಗಲೇ ತಯಾರಿಲ್ಲ. ನಿಮ್ಮ ಲುಕ್ ಸೂಪರ್ ಎಂದು ರೋಹಿತ್, ಹಾರ್ದಿಕ್, ಅಜಿಂಕ್ಯಗೆ ಮೆಸೇಜ್ ಹಾಕಿದ್ದಾರೆ.
ಇಷ್ಟೆಲ್ಲ ಬರೆಯಲಿಕ್ಕೆ ಕಾರಣ ರವೀಂದ್ರ ಜಡೇಜ ಅವರ ಗಡ್ಡ. ಜಡೇಜರನ್ನು ಕೆಎಲ್ ರಾಹುಲ್ ಎಂದು ತಪ್ಪಾಗಿ ತಿಳಿದು ಕೋಚ್ ಅನಿಲ್ ಕುಂಬ್ಳೆ ಅವರು ಕನ್ನಡದಲ್ಲಿ ಮಾತನಾಡಿಸಿದ್ದು, ನಂತರ ಜಡೇಜ ಗಡ್ಡ ಸ್ಟೈಲ್ ಚೇಂಜ್ ಮಾಡಿಕೊಂಡಿದ್ದು ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿದೆ. ಗಡ್ಡದ ಸ್ಟೈಲ್ ಬದಲಾಯಿಸಿಕೊಂಡ ಕ್ರಿಕೆಟರ್ಸ್ ಮುಖಾರವಿಂದವನ್ನ್ ಮುಂದೆ ಕಾಣಿ...

ಅನುಷ್ಕಾಗಾಗಿ ಚಾಲೆಂಜ್ ಇಲ್ಲ
ವಿರಾಟ್ ಕೊಹ್ಲಿ ಅವರು ಕ್ಲೀನ್ ಶೇವ್ ಮಾಡುತ್ತಿಲ್ಲ,#BreakTheBeard ಚಾಲೆಂಜ್ ಸ್ವೀಕರಿಸುವುದಿಲ್ಲ ಎಂದು ಅನುಷ್ಕಾ ಕೂಡಾ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿಗೆ ಪಂದ್ಯ ನೋಡಲು ಬಂದಾಗ ಸಿಕ್ಕ ಚಿತ್ರ ಇದು.
ಕೊಹ್ಲಿ ಪೋಸ್ಟ್ ಹೆಚ್ಚು ವೀಕ್ಷಣೆ
Sorry boys @hardikpandya_official @royalnavghan @rohitsharma45 but iam not ready to break the beard yet . Great job on the makeovers though. Kudos ಎಂಬ ಸಂದೇಶವಿರುವ ಕೊಹ್ಲಿ ಅವರ ಇನ್ ಸ್ಟಾಗ್ರಾಮ್ ಪೋಸ್ಟ್ ಗೆ 862,380 ಲೈಕ್ಸ್ ಬಂದಿದೆ.
ಅಜಿಂಕ್ಯ ರಹಾನೆ
ಪುಣೆ ಆಟಗಾರ ಅಜಿಂಕ್ಯ ರಹಾನೆ ಅವರು ಗಡ್ಡ ತೆಗೆಯುವ ಚಾಲೆಂಜ್ ನಲ್ಲಿ ಪಾಲ್ಗೊಂಡು ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ. ಈ ವಿಡಿಯೋ 222, 356 ವೀಕ್ಷಣೆ ಪಡೆದುಕೊಂಡಿದೆ.
ಹಾರ್ದಿಕ್ ಪಾಂಡ್ಯ
ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವಿಡಿಯೋ406,170 ಬಾರಿ ವೀಕ್ಷಿಸಲ್ಪಟ್ಟಿದೆ.
ರೋಹಿತ್ ಶರ್ಮ
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಅವರು ಕ್ಲೀನ್ ಶೇವ್ ಬದಲಿಗೆ ಫ್ರೆಂಚ್ ದಾಡಿ ಮಾಡಿಕೊಂಡಿದ್ದಾರೆ.
ರವೀಂದ್ರ ಜಡೇಜ
ಗುಜರಾತ್ ಲಯನ್ಸ್ ಆಲ್ ರೌಂಡರ್ ರವೀಂದ್ರ ಜಡೇಜ ಅವರು ವಿಚಿತ್ರ ರೀತಿ ದಾಡಿ ಮಾಡಿಕೊಂಡಿದ್ದು, ಇದನ್ನು ನೋಡಿ ಕೊಹ್ಲಿ ನಗೆ ಚೆಲ್ಲಿದ್ದು ನಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications