ಈ ಪುಟ್ಟ ಪೋರಿಗೆ ಮನಸೋತು, ಸೆಲ್ಫಿಗೆ ಪೋಸ್ ಕೊಟ್ಟ ಕೊಹ್ಲಿ
ನವದೆಹಲಿ, ಮೇ 03: ಮಕ್ಕಳೆಂದರೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಸಕತ್ ಇಷ್ಟ. ಆದರೆ, ಮೈದಾನದಲ್ಲಿ ವೀರಾವೇಷದ ಭಾವ ಭಂಗಿಯಲ್ಲಿ ಅಬ್ಬರಿಸುವ ಕೊಹ್ಲಿ ಬಳಿ ಮಕ್ಕಳು ಖುಷಿಯಿಂದ ಇರುತ್ತಾರಾ? ಎಂಬ ಅನುಮಾನ ಕಾಡಿದರೆ ತಪ್ಪಲ್ಲ. ಮಕ್ಕಳ ಜತೆ ಸೆಲ್ಫಿ ತೆಗೆದುಕೊಳ್ಳುವುದು ಕೊಹ್ಲಿ ಅವರ ಇಷ್ಟದ ಸಂಗತಿಗಳಲ್ಲೊಂದು ಎಂದು ಆಪ್ತರ ಅನಿಸಿಕೆ.
ಅದರಲ್ಲೂ ಮಕ್ಕಳ ಜತೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಕೊಹ್ಲಿ ಮೀರಿಸುವವರಿಲ್ಲ ಎಂಬ ಮಾತಿದೆ. ಹರ್ಭಜನ್ ಸಿಂಗ್ ಅವರ ಪುಟ್ಟ ಕಂದನ ಜತೆ ಕೊಹ್ಲಿ ಸೆಲ್ಫಿ ಈಗ ವೈರಲ್ ಆಗಿದೆ. [ಐಪಿಎಲ್ 2017: ಅಂಕಪಟ್ಟಿ]
ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್‍ಗಳ ಸೋಲನುಭವಿಸಿದ್ದು ಗೊತ್ತಿರಬಹುದು.
ಇದಾದ ಬಳಿಕ ವಿರಾಟ್ ಕೊಹ್ಲಿ ಅವರು ಸೋಲಿನ ಕಹಿ ಮರೆಯಲು ಹರ್ಭಜನ್ ಸಿಂಗ್ ಅವರ ಕುಟುಂಬದೊಂದಿಗೆ ಕೆಲ ಸಮಯ ಕಳೆದರು. ಹರ್ಭಜನ್ ಅವರ ಪುಟ್ಟ ಕಂದ ಹಿನಾಯಾಳ ಜತೆ ಸೆಲ್ಫೀ ಕ್ಲಿಕ್ಕಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಿನಾಯಾ ಜತೆ ಕೊಹ್ಲಿ
ಹರ್ಭಜನ್ ಸಿಂಗ್ ಅವರ ಪುಟ್ಟ ಮಗಳು ಹಿನಾಯಾ ಜೊತೆ ಸೆಲ್ಫೀ ಕ್ಲಿಕ್ಕಿಸಿರೋ ಕೊಹ್ಲಿ, ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ
ಸೆಲ್ಫಿ ಸ್ಟಾರ್ ಕೊಹ್ಲಿ
ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ ನಿಜಕ್ಕೂ ಧನ್ಯರು. ಅವರಿಗೆ ದೇವರು ಒಳ್ಳೆಯದು ಮಾಡಲಿ, ಹಿನಾಯಾ ಸಕತ್ ಕ್ಯೂಟ್ ಆಗಿದ್ದಾಳೆ. ನನ್ನ ಗಡ್ಡದ ಬಗ್ಗೆ ಏನೋ ಆಕರ್ಷಣೆ ಅವಳಿಗೆ ಎಂದು ಬರೆದುಕೊಂಡಿದ್ದಾರೆ.

ಝೀವಾ ಜತೆ ಕೊಹ್ಲಿ
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಡೆಲ್ಲಿ ಡ್ಯಾಷರ್ ವಿರಾಟ್ ಕೊಹ್ಲಿ ಅವರು ಕಳೆದ ವರ್ಷ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಅವರ ಪುತ್ರಿ ಝೀವಾ ಜೊತೆ ತೆಗೆಸಿಕೊಂಡ ಸೆಲ್ಫಿ ಸದ್ಯಕ್ಕೆ ಟ್ರೆಂಡಿಂಗ್ ಆಗಿತ್ತು. [ಇನ್ನಷ್ಟು ಓದಿ]
ಕೊಹ್ಲಿ ಸಂತಸದ ಕ್ಷಣಗಳು
ಮಕ್ಕಳು ಏಂಜೆಲ್ಸ್ ಅವರೊಟ್ಟಿಗೆ ಕಾಲ ಕಳೆಯುವುದೇ ಆನಂದಕರ ಎಂದು ಕೊಹ್ಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications