ಹುಡುಗಿ ಜತೆ ಕುಣಿದ ಗಂಭೀರ್, ಹೆಂಡ್ತಿ ಕೆಂಗಣ್ಣಿಗೆ ಗುರಿ ಆಗ್ತಾರಾ?
ಇದನ್ನು ನಾವು ಹೇಳ್ತಿರೋದಲ್ಲ, ಖುದ್ದು ಗೌತಮ್ ಗಂಭೀರ್ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗೆ, ಗೌತಮ್ ಗಂಭೀರ್ ಅವರು, ಒಬ್ಬ ಹುಡುಗಿಯೊಬ್ಬಳ ಜತೆ ಪಾರ್ಟಿಯಲ್ಲಿ ಹೆಜ್ಜೆ ಹಾಕಿದ್ದಾರಂತೆ.
ಒಂದಲ್ಲಾ ಒಂದು ದಿನ ಆ ವಿಚಾರ ತಮ್ಮ ಪತ್ನಿ ನತಾಶಾಗೆ ಗೊತ್ತಾಗುತ್ತೇನೋ ಎಂಬ ಭೀತಿ ಅವರಲ್ಲಿದೆಯಂತೆ. ಹಾಗಾಗಿ, ಅವರು ಈಗಲೇ ಅದನ್ನು ತಮ್ಮ ಪತ್ರಿಕೆಯೊಂದರಲ್ಲಿ ಬರೆದುಕೊಂಡು ಮನಸ್ಸು ಹಗುರ ಮಾಡಿಕೊಂಡಿದ್ದಾರೆಂದಿನಿಸುತ್ತದೆ.
ಹೌದು. ಗಂಭೀರ್ ಹೇಳೋದ್ರಲ್ಲೂ ವಿಚಾರವಿದೆ. ಮೊದಲಿನಿಂದಲೂ ಗೌತಮ್, ಹೆಸರಿಗೆ ತಕ್ಕಂತೆ ಕೊಂಚ 'ಗಂಭೀರ' ಸ್ವಭಾವದವರು. ತಾವಾಯ್ತು, ತಮ್ಮ ಕ್ರಿಕೆಟ್ ಆಯ್ತು ಅಂತ ಅಷ್ಟಕ್ಕೇ ಇದ್ದು ಬಿಡೋವ್ರು. ನಗು, ತಮಾಷೆ, ಮಾತು... ಎಲ್ಲವೂ ಆಯಾ ಸಂದರ್ಭಕ್ಕನುಗುಣವಾಗಿ ಅಷ್ಟೇ.[ಕೋಲ್ಕತಾ ನೈಟ್ ರೈಡರ್ಸ್ ಗೆಲುವಿಗೆ 5 ಕಾರಣಗಳು]
ಕ್ರಿಕೆಟ್ ಲೋಕದಲ್ಲಿ ಇಂಥ ಕೆಲವರು ಸೀರಿಯಸ್ ವ್ಯಕ್ತಿಗಳನ್ನು ನಾವು ನೋಡಿರುತ್ತೇವೆ. ಉದಾಹರಣೆಗೆ, ಶಾಹೀದ್ ಅಫ್ರಿದಿ, ರಾಹುಲ್ ದ್ರಾವಿಡ್ ಮುಂತಾದವರು. ಅಂಥವರ ಸಾಲಿಗೆ ಸೇರುವ ಗಂಭೀರ್, ಪಾರ್ಟಿಗಳಲ್ಲಿ ಎಂದಿಂದಿಗೂ ಕುಣಿದವರಲ್ಲ.
ಹಾಗಾದರೆ, ಅವರನ್ನು ಕುಣಿಸಿದ ಆ ಹುಡುಗಿ ಯಾರು? ಯಾವ ಸಂದರ್ಭದಲ್ಲಿ ಅವರು ಕುಣಿದರು? ಇದಕ್ಕೆ ಗಂಭೀರ್ ಅವರೇ ಉತ್ತರಿಸಿದ್ದಾರೆ. ಅವರ ಲೇಖನದ ಆ ಆಯ್ದ ಭಾಗಗಳು, ಅವರದ್ದೇ ದನಿಯಲ್ಲಿ ನಿಮಗಾಗಿ...

ಬಟರ್ ಚಿಕನ್, ದಾಲ್ ಇಷ್ಟ
ನಾನು ಪಕ್ಕಾ ಪಂಜಾಬಿ ಮನುಷ್ಯ. ನನಗೆ ಬಟರ್ ಚಿಕನ್ ಮತ್ತು ದಾಲ್ ಅಂದ್ರೆ ಪಂಚಪ್ರಾಣ. ಅವೆರಡನ್ನೂ ಎಷ್ಟು ಕೊಟ್ರೂ ತಿಂತೀನಿ. ನನಗೆ ಪಂಜಾಬ್ ದೇಸೀ ಸಂಗೀತ ಇಷ್ಟ. ಆದರೆ, ಡಿಜೆ ಮಾದರಿಯ ದೇಸೀ ಸಂಗೀತ ಇಷ್ಟವಾಗಲ್ಲ. ಈ ಎರಡು ಉದಾಹರಣೆಗಳು ನನ್ನ ಟೇಸ್ಟ್ ಬಗ್ಗೆ ನಿಮಗೆ ಮಾಹಿತಿ ನೀಡಬಲ್ಲವು. ಅಂತೆಯೇ, ನನಗೆ ಕುಣಿಯೋದು ಅಂದ್ರೆ ಆಗಲ್ಲ. ಆಗೋದಿಲ್ಲ ಅಂದ್ರೆ ಹೇಟ್ ಮಾಡ್ತೀನಿ ಅಂತಲ್ಲ. ನನಗೆ ಕುಣಿಯೋಕೆ ಬರೋಲ್ಲ. ಅದಕ್ಕೆ ನಾನು ಕುಣಿಯೋಲ್ಲ.

ಕುಣಿಯಲಿಲ್ಲ ಎಂದೂ
ಪಂಜಾಬಿಯ ಬಾಂಗ್ಡಾ ಕುಣಿತದ ಅಬ್ಬರದ ಸಂಗೀತ ಕೇಳುತ್ತಿದ್ದರೆ ಸಾಕು ಎಂಥವನಿಗೂ ಕುಣಿಯಬೇಕೆನಿಸುತ್ತದೆ. ನನಗೂ ಹಾಗೆ ಅನ್ನಿಸುತ್ತದಾದರೂ ನನಗೆ ಕುಣಿಯೋಕೆ ಭಾರೀ ಸಂಕೋಚ. ಚಿಕ್ಕವನಿದ್ದಾಗಿನಿಂದಲೂ ಅಷ್ಟೇ, ನನ್ನ ಮನೆಯ ಸಮಾರಂಭಗಳಲ್ಲಾಗಲೀ ಸಂಬಂಧಿಗಳ ಮದುವೆ ಮತ್ತಿತರ ಸಮಾರಂಭಗಳಲ್ಲಾಗಲೀ ನಾನು ಕುಣಿದೇ ಇಲ್ಲ.[ಗಂಭೀರ್-ಲಿನ್ ಜೊತೆಯಾಟ ಐಪಿಎಲ್ ಹೊಸ ದಾಖಲೆ]

ನತಾಶಾ ಮನವಿಗೂ ಮನ್ನಣೆ ಕೊಟ್ಟಿಲ್ಲ
2011ರಲ್ಲಿ ನಾನು ನತಾಶಾಳನ್ನು ಮದುವೆಯಾದೆ. ನನ್ನ ಮದುವೆ ಸಂದರ್ಭದಲ್ಲೂ ನಾನು ಕುಣಿಯಲಿಲ್ಲ. ನಾನು ಹಾಗೂ ನತಾಶಾ ಆಗಾಗ ಪಾರ್ಟಿಗಳಿಗೆ ಹೋಗುತ್ತಿರುತ್ತೇವೆ. ಅಲ್ಲಿ ನತಾಶಾ ಅಂತೂ ಸಿಕ್ಕಾಪಟ್ಟೆ ಕುಣಿಯುತ್ತಾಳೆ. ಆದರೆ, ನಾನು ಮಾತ್ರ ಯಾವತ್ತೂ ಕುಣಿದಿಲ್ಲ. ಅವಳೆಷ್ಟು ಕರೆದರೂ, ಎಷ್ಟೇ ಗೋಗರೆದರೂ ನಾನು ಕುಣಿಯಲು ಹೋಗಿಲ್ಲ.

ಖುದ್ದು ಶಾರೂಖ್ ಕೂಡ ಈ ವಿಚಾರದಲ್ಲಿ ಸೋತಿದ್ದರು
ಇದು ಫ್ಯಾಮಿಲಿ ವಿಚಾರವಾದರೆ, ಐಪಿಎಲ್ ಪಂದ್ಯಗಳ ನಂತರ ನಡೆಯುವ ಡ್ಯಾನ್ಸ್, ಪಾರ್ಟಿಗಳಲ್ಲಿ ನಾನೆಂದೂ ಕುಣಿದಿಲ್ಲ. ಖುದ್ದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರೂಖ್ ಖಾನ್ ಅವರೇ ಹಲವಾರು ಬಾರಿ ನೃತ್ಯ ಮಾಡಲು ಮನವಿ ಮಾಡಿದರೂ ಹೋಗಿಲ್ಲ.[ಗುಜರಾತ್ ವಿರುದ್ಧ ಗೆದ್ದು ದಾಖಲೆ ಬರೆದ ಕೆಕೆಆರ್]

ಶೂಟಿಂಗ್ ಗಾಗಿ ಮಾಡಿದ ನೃತ್ಯವಿದು
ಆದರೆ, ಈ ಹುಡುಗಿ ಮಾತ್ರ ನನ್ನಲ್ಲಿ ಗುಪ್ತವಾಗಿ ಹುದುಗಿದ್ದ ಟ್ಯಾಲೆಂಟನ್ನು ಬಹಿರಂಗಗೊಳಿಸಿದಳು. ತಪ್ಪಾಗಿ ಅರ್ಥೈಸಬೇಡಿ ಗೆಳೆಯರೇ. ಐಪಿಎಲ್ ನ ಪ್ರಮೋಷನ್ ಗಾಗಿ ನಡೆದ ನೃತ್ಯ ಸಂಯೋಜನೆ. ಆ ಹುಡುಗಿ ಮುಂಬೈನ ಪ್ರತಿಷ್ಠಿತ ಮಾಡೆಲ್. ನೃತ್ಯದಲ್ಲಿ ನನಗೆ ಅಭಿರುಚಿ ಇಲ್ಲದ್ದನ್ನು ಗಮನಿಸಿದ ಆಕೆ, ನನಗೆ ಸಾಕಷ್ಟು ಟಿಪ್ಸ್ ನೀಡಿ ನಾನು ಉತ್ತಮವಾಗಿ ಕುಣಿಯುವಂತೆ ಮಾಡಿದರು. ನಿಜಕ್ಕೂ ಹೇಳ್ತೀನಿ. ಇದು ಶೂಟಿಂಗ್ ಗಾಗಿ ಮಾಡಿದ ನೃತ್ಯ. ಆದ್ರೆ ವಿಚಾರ ಅದಲ್ಲ. ಪದೇ ಪದೇ ರಿಕ್ವೆಸ್ಟ್ ಮಾಡಿದಾಗ ಕುಣಿಯದ ನಾನು ಈಗ ಕುಣಿದಿದ್ದು ಗೊತ್ತಾದ್ರೆ ಮಾತ್ರ ನತಾಶಾ ಸಿಕ್ಕಾಪಟ್ಟೆ ರಾಂಗ್ ಆಗ್ತಾಳೆ ಅಂತ ಅನ್ನಿಸ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications