ನಟಿ ಸಾಗರಿಕಾ ಬದಲು ಪತ್ರಕರ್ತೆಗೆ ವಿಶ್ ಮಾಡಿದ ಕುಂಬ್ಳೆ
ಬೆಂಗಳೂರು, ಏಪ್ರಿಲ್ 25: ನಟಿ ಸಾಗರಿಕಾ ಘಾಟ್ಗೆ ಅವರ ಜೊತೆ ಭಾರತ ತಂಡದ ಮಾಜಿ ವೇಗಿ, ಡೆಲ್ಲಿ ಡೇರ್ ಡೆವಿಲ್ಸ್ ನಾಯಕ ಜಹೀರ್ ಖಾನ್ ಅವರು ನಿಶ್ಚಿತಾರ್ಥ ಮಾಡಿಕೊಂಡ ಚಿತ್ರ ನಿನ್ನೆ ಟ್ವಿಟ್ಟರ್ ನಲ್ಲಿ ಪ್ರಕಟವಾಗಿದ್ದು ತಿಳಿದಿರಬಹುದು.
ಇಬ್ಬರಿಗೂ ವಿಶ್ ಮಾಡುವ ಭರದಲ್ಲಿ ಅನೇಕ ಸೆಲೆಬ್ರಿಟಿಗಳು ಸಾಗರಿಕಾ ಘಾಟ್ಗೆ ಬದಲಿಗೆ ಸಾಗರಿಕಾ ಘೋಶ್ ಅವರಿಗೆ ವಿಶ್ ಮಾಡಿದ ಹಾಸ್ಯ ಪ್ರಸಂಗ ನಡೆಯಿತು.[ಡೆಲ್ಲಿ ನಾಯಕ ಜಹೀರ್ ಹಂಚಿಕೊಂಡ್ರು ಶುಭ ಸಮಾಚಾರ!]
ಮಾಜಿ ನಾಯಕ, ಕೋಚ್ ಅನಿಲ್ ಕುಂಬ್ಳೆ ಅವರು ತಪ್ಪಾಗಿ ಟ್ಯಾಗ್ ಮಾಡಿ ನಂತರ ತಪ್ಪು ಸರಿ ಪಡಿಸಿಕೊಂಡರು. ಇದೇ ರೀತಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಕೂಡಾ ಪ್ರಮಾದವಾಗಿತ್ತು.
ಸಾಗರಿಕಾ ಬದಲಿಗೆ ಸಾಗರಿಕಾ ಘೋಷ್ ಅವರಿಗೆ ಟ್ವೀಟ್ ಮಾಡಿದ ಅನೇಕ ಮಂದಿ ನಂತರ ತಪ್ಪು ತಿದ್ದಿಕೊಂಡು ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಕುಂಬ್ಳೆಯಿಂದ ಪ್ರಮಾದ
ಜಹೀರ್ ಅವರ ಗೆಳತಿ ಸಾಗರಿಕಾ ಬದಲಿಗೆ ಸಾಗರಿಕಾ ಘೋಷ್ ಅವರಿಗೆ ಟ್ಯಾಗ್ ಟ್ವೀಟ್ ಮಾಡಿದ್ದ ಅನಿಲ್ ಕುಂಬ್ಳೆ ಅವರು ಕ್ಷಣಮಾತ್ರದಲ್ಲಿ ಈ ತಪ್ಪನ್ನು ಸರಿಪಡಿಸಿ ಮರು ಟ್ವೀಟ್ ಮಾಡಿದ್ದರು.

ಸ್ಕ್ರೀನ್ ಶಾಟ್ ನೋಡಿ
ಆದರೆ, ಅನೇಕ ಮಂದಿ ಇದೇ ಚಾನ್ಸ್ ಎಂದು ತಪ್ಪು ಟ್ಯಾಗ್ ಆಗಿರುವ ಟ್ವೀಟ್ ಸ್ಕ್ರೀನ್ ಶಾಟ್ ತೆಗೆದುಕೊಂಡು ರಿಪ್ಲೇ ಮಾಡಿದ್ದಾರೆ.
ಪತ್ರಕರ್ತೆ ಸಾಗರಿಕಾ ಘೋಷ್
ಇದೆಲ್ಲದರ ನಡುವೆ ಪತ್ರಕರ್ತೆ ಸಾಗರಿಕಾ ಘೋಷ್ ಅವರು ಈ ತಮಾಷೆ ಪ್ರಸಂಗವನ್ನು ಕಂಡು ಟ್ವೀಟ್ ಮಾಡಿ, ನಾನು ಎರಡು ಮಕ್ಕಳ ತಾಯಿ, ನೀವು ವಿಶ್ ಮಾಡುತ್ತಿರುವ ಸಾಗರಿಕಾ ನಾನಲ್ಲ ಎಂದಿದ್ದಾರೆ.
ಜಹೀರ್ ಗೆ ವಿಶ್ ಮಾಡಿದ ಅನಿಲ್
ಅನಿಲ್ ಕುಂಬ್ಳೆ ಅವರು ಮತ್ತೊಮ್ಮೆ ಟ್ವೀಟ್ ಮಾಡಿ ವಿಶ್ ಮಾಡಿದ್ದು ಹೀಗಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications