Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಜಸ್ಥಾನ್ ರಾಯಲ್ಸ್‌ಗೆ ಆನೆಬಲ ತಂದ ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್

IPL 2019: Ben Stokes and Jos Buttler arrive in Rajasthan Royals camp

ಜೈಪುರ್, ಮಾರ್ಚ್ 20: ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಬ್ಯಾಟ್ಸ್ಮನ್‌ಗಳಾದ ಜಾಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ. ಇಬ್ಬರೂ ಇಂಗ್ಲೆಂಡ್ ಆಟಗಾರರು ಬುಧವಾರ (ಮಾರ್ಚ್ 20) ರಾಜಸ್ಥಾನ್ ರಾಯಲ್ಸ್ ಕ್ಯಾಂಪ್‌ನಲ್ಲಿ ಪಾಲ್ಗೊಂಡಿದ್ದಾರೆ.

548 ರನ್‌ನೊಂದಿಗೆ 2018ರ ಐಪಿಎಲ್‌ನಲ್ಲಿ ಬಟ್ಲರ್ ಅತ್ಯಧಿಕ ರನ್ ಬಾರಿಸಿದ 6ನೇ ಆಟಗಾರನಾಗಿ ಸೀಸನ್ ಮುಗಿಸಿದ್ದರು. ಆದರೆ ಸ್ಟೋಕ್ಸ್ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಕಳೆದ ಸೀಸನ್‌ನಲ್ಲಿ ಸ್ಟೋಕ್ಸ್ ಕೇವಲ 196 ರನ್ ಮತ್ತು 8 ವಿಕೆಟ್ ಗಳಿಸಿದ್ದರು. ಆದರೆ ಈ ಸಾರಿ ಐಪಿಎಲ್‌ನಲ್ಲಿ ಇಬ್ಬರೂ ಆಟಗಾರರು ಭರ್ಜರಿ ಪ್ರದರ್ಶನ ನೀಡುವ ಸಾಧ್ಯತೆಯಿದೆ.

ಚೆಂಡು ವಿರೂಪ ಪ್ರಕರಣದಲ್ಲಿ ವರ್ಷದ ನಿಷೇಧಕ್ಕೀಡಾಗಿದ್ದ ಆಸ್ಟ್ರೇಲಿಯಾದ ರನ್ ಮಷೀನ್ ಸ್ಟೀವ್ ಸ್ಮಿತ್ ಕೂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಸ್ಮಿತ್ ಮೇಲಿನ ನಿಷೇಧ ಮಾರ್ಚ್ 28ಕ್ಕೆ ಕೊನೆಗೊಳ್ಳುವುದರಿಂದ ಅವರೂ ತಂಡಕ್ಕೆ ಬಲ ತುಂಬಲಿದ್ದಾರೆ. ಸ್ಮಿತ್, ಬಟ್ಲರ್, ಸ್ಟೋಕ್ಸ್, ರಹಾನೆ, ಬಿನ್ನಿ, ಶ್ರೇಯಸ್ ಗೋಪಾಲ್ ಸೇರಿ ರಾಜಸ್ಥಾನಕ್ಕೆ ಆನೆಬಲ ಬಂದಂತಾಗಿದೆ.

Story first published: Wednesday, March 20, 2019, 20:56 [IST]
Other articles published on Mar 20, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+