IPL 2019: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಂಗಾಳ ಹುಲಿ ಗಂಗೂಲಿ ಸಲಹೆಗಾರ

ಡೆಲ್ಲಿ ತಂಡಕ್ಕೆ ದಾದಾ ತುಂಬಲಿದ್ದಾರೆ ಹುರುಪು..! | Oneindia Kannada

ನವದೆಹಲಿ, ಮಾರ್ಚ್ 14: ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಲಹೆಗಾರರಾಗಿ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಡೆಲ್ಲಿ ಫ್ರಾಂಚೈಸಿ, ಗಂಗೂಲಿ ಅವರನ್ನು ಸಲಹೆಗಾರರಾಗಿ ನೇಮಿಸಿದೆ.
ಬಂಗಾಳ ಹುಲಿ ಗಂಗೂಲಿ ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಜೊತೆಗಿದ್ದು ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಡೆಲ್ಲಿ ತಂಡದ ನಾಯಕತ್ವ ಯುವ ಕ್ರಿಕೆಟಿಗ ಶ್ರೇಯಸ್ ಐಯ್ಯರ್ ಮೇಲಿದೆ.
ಗಂಗೂಲಿ ಈ ಬಗ್ಗೆ ಪ್ರತಿಕ್ರಿಯಿಸಿ, 'ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಳ್ಳುವುದಕ್ಕೆ ನಾನು ಬಹಳ ಸಂತಸಗೊಂಡಿದ್ದೇನೆ' ಎಂದಿದ್ದಾರೆ. ಐಪಿಎಲ್ ಟ್ರೋಫಿಯನ್ನು ಒಂದು ಸಾರಿಯೂ ಗೆಲ್ಲದ ತಂಡಗಳ ಸಾಲಿನಲ್ಲಿ ಕಿಂಗ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಡೆಲ್ಲಿ ಕೂಡ ಇದೆ. ಈ ಸಾರಿ ತಂಡದ ಪ್ರದರ್ಶನ ಕುತೂಹಲ ಮೂಡಿಸಿದೆ.
Story first published: Thursday, March 14, 2019, 18:30 [IST]
Other articles published on Mar 14, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications