ಐಪಿಎಲ್ ಕ್ರಿಕೆಟ್: ಆರ್‌ಸಿಬಿ ತಂಡ ಸೇರಿಕೊಂಡ ಆಸ್ಟ್ರೇಲಿಯಾದ ಆಲ್‌ರೌಂಡರ್


ಬೆಂಗಳೂರು, ಅಕ್ಟೋಬರ್ 29: ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಟ್ಟುಕೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬರುವ ಐಪಿಎಲ್ ಟೂರ್ನಿಗೆ ಈಗ ಮತ್ತೊಂದು ಬದಲಾವಣೆ ಮಾಡಿದೆ.
ಕಳೆದ ಆವೃತ್ತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಮನ್‌ದೀಪ್ ಸಿಂಗ್ ಅವರನ್ನು ಆರ್‌ಸಿಬಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಹಸ್ತಾಂತರಿಸಿದೆ. ಕೊಡು ಕೊಳ್ಳುವ ವ್ಯವಹಾರದಲ್ಲಿ ಪಂಜಾಬ್ ತಂಡದ ಆಲ್‌ರೌಂಡರ್, ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೋನಿಸ್ ಅವರನ್ನು ಪಡೆದುಕೊಂಡಿದೆ.
ಐಪಿಎಲ್‌ನ ಮೊದಲ ವ್ಯಾಪಾರ ಗವಾಕ್ಷಿಯ ಮೂಲಕ ಈ ಒಪ್ಪಂದ ನಡೆದಿದೆ. ಈ ಕೊಡು ಕೊಳ್ಳುವ ಪ್ರಕ್ರಿಯೆಯು ಈ ವರ್ಷದಲ್ಲಿ ನಡೆಯುವ ಹರಾಜು ಪ್ರಕ್ರಿಯೆಗೂ ಒಂದು ತಿಂಗಳು ಮುನ್ನ ಕೊನೆಗೊಳ್ಳಲಿದೆ.
2018ರ ಹರಾಜಿನಲ್ಲಿ ಸ್ಟೋನಿಸ್ ಅವರನ್ನು ಆರ್‌ಸಿಬಿ ಖರೀದಿ ಮಾಡಿತ್ತು. ಆದರೆ, ಹಿಂದಿನ ಆವೃತ್ತಿಯಲ್ಲಿ ಸ್ಟೋನಿಸ್ ಅವರನ್ನು ಖರೀದಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್, ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ 6.20 ಕೋಟಿಗೆ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಂಡಿತ್ತು.
ಈ ಹಿಂದಿನ ಆವೃತ್ತಿಗಳಲ್ಲಿ ಪಂಜಾಬ್ ಪರ ಆಡಿದ್ದ ಮನ್‌ದೀಪ್ ಸಿಂಗ್ ಅವರಿಗಾಗಿ ಆರ್‌ಸಿಬಿ ತೀವ್ರ ಪೈಪೋಟಿ ನಡೆಸಿ 1.40 ಕೋಟಿಗೆ ಅವರನ್ನು ಪಡೆದುಕೊಂಡಿತ್ತು. ಮನ್‌ದೀಪ್ ಆರ್‌ಸಿಬಿ ಪರ 14 ಪಂದ್ಯಗಳಿಂದ 252 ರನ್ ಗಳಿಸಿದ್ದರು.
ಆರ್. ಅಶ್ವಿನ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್, ಕೆ.ಎಲ್. ರಾಹುಲ್ ಅವರ ಅದ್ಭುತ ಬ್ಯಾಟಿಂಗ್ ನೆರವಿದ್ದರೂ ಪ್ರಶಸ್ತಿಯ ಹಂತ ತಲುಪಲು ವಿಫಲವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications