Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: 100ನೇ ಐಪಿಎಲ್ ಕ್ಯಾಚ್ ಪಡೆದ ಎಬಿ ಡಿವಿಲಿಯರ್ಸ್

ipl 2020: 100 catches for AB De villiers in IPL

ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಕೆಕೆಆರ್ ತಂಡಕ್ಕೆ ಆರಂಭದಲ್ಲೇ ದೊಡ್ಡ ಆಘಾತವನ್ನು ನೀಡಿದೆ. ವೇಗಿ ಸಿರಾಜ್ ದಾಳಿಗೆ ಕೆಕೆಆರ್ ಅಗ್ರ ಕ್ರಮಾಂಕ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ಆರ್‌ಸಿಬಿಯ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ವಿಶೇಷ ಮೈಲಿಗಲ್ಲೊಂದನ್ನು ದಾಟಿದ್ದಾರೆ.

ಎಬಿ ಡಿವಿಲಿಯರ್ಸ್ ಅದ್ಭುತ ಬ್ಯಾಟ್ಸ್‌ಮನ್‌ ಮಾತ್ರವಲ್ಲ ಅದ್ಭುತ ಫೀಲ್ಡರ್ ಕೂಡ ಎಂಬುದು ಎಲ್ಲರಿಗೂ ತಿಳಿದಿದೆ. ಈ ಬಾರಿಯ ಟೂರ್ನಿಯಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುತ್ತಿರುವ ಎಬಿ ಡಿವಿಲಿಯರ್ಸ್ ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಟಾಮ್ ಬ್ಯಾಂಟನ್ ಕ್ಯಾಚ್ ಪಡೆಯುವ ಮೂಲಕ 100ನೇ ಬಲಿ ಪಡೆದರು.

100ನೇ ಕ್ಯಾಚ್ ಪಡೆಯಲು ಎಬಿ ಡಿವಿಲಿಯರ್ಸ್‌ಗೆ ಇಂದು ಎರಡು ಕ್ಯಾಚ್‌ಗಳ ಅವಶ್ಯಕತೆಯಿತ್ತು. ಎರಡನೇ ಓವರ್‌ನಲ್ಲಿ ಬೌಲಿಂಗ್ ದಾಳಿಗೆ ಇಳಿದ ಮೊಹಮದ್ ಸಿರಾಜ್ ಮೊದಲಿಗೆ ರಾಹುಲ್ ತ್ರಿಪಾಠಿಯನ್ನು ಕೀಪರ್ ಎಬಿ ಡಿವಿಲಿಯರ್ಸ್‌ಗೆ ಕ್ಯಾಚ್ ಕೊಡಿಸುವ ಮೂಲಕ ಮೊದಲ ಬಲಿ ಪಡೆದರು. ಈ ಮೂಲಕ ಎಬಿಡಿ ತಮ್ಮ ಕ್ಯಾಚ್‌ಗಳ ಸಂಖ್ಯೆಯನ್ನು 99ಕ್ಕೇ ಎರಿಸಿಕೊಂಡಿದ್ದರು.

ಇದಾದ ಬಳಿಕ ಸಿರಾಜ್ ಎಸೆದ ಮುಂದಿನ ಓವರ್‌ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್ ಟಾಮ್ ಬ್ಯಾಂಟನ್ ಕೂಡ ಇದೇ ರೀತಿಯಲ್ಲಿ ಎಬಿ ಡಿವಿಲಿಯರ್ಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ 100 ಕ್ಯಾಚ್ ಪಡೆದ ಆಟಗಾರರ ಪಟ್ಟಿಗೆ ಸೇರಿಕೊಂಡಿದ್ದಾರೆ

Story first published: Thursday, October 22, 2020, 10:16 [IST]
Other articles published on Oct 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+