Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

14 ದಿನಗಳ ಕ್ವಾರಂಟೈನ್ ಸಹಾಯ ಮಾಡಲಿಲ್ಲ: ಎಂಎಸ್ ಧೋನಿ

IPL 2020: 14-day quarantine didnt help, says MS Dhoni

ಶಾರ್ಜಾ: ಎರಡು ವಾರಗಳ ಹೆಚ್ಚುವರಿ ಕ್ವಾರಂಟೈನ್‌ ಹೇರಿಕೆ ನಮ್ಮ ಪ್ರದರ್ಶನಕ್ಕೆ ಅಡ್ಡಿಯಾಯಿತು. ಕ್ವಾರಂಟೈನ್‌ನಿಂದಾಗಿ ಉತ್ತಮ ಪ್ರದರ್ಶನ ನೀಡಲಾಗಲಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ ಸೋತ ಬಳಿಕ ಧೋನಿ ಈ ಹೇಳಿಕೆ ನೀಡಿದ್ದಾರೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಶಾರ್ಜಾ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ 4ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 16 ರನ್‌ಗಳ ಸೋಲನುಭವಿಸಿತು. ಪಂದ್ಯದಲ್ಲಿ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಧೋನಿ 17 ಎಸೆತಗಳಲ್ಲಿ ಅಜೇಯ 29 ರನ್ ಕೊಡುಗೆ ನೀಡಿದ್ದರು. ಅದರಲ್ಲೂ ಕೊನೇ ಓವರ್‌ನಲ್ಲಿ 3 ಸಿಕ್ಸರ್ ಬಾರಿಸಿದ್ದರು.

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಿದ್ದೇಕೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಧೋನಿ, 'ನಾನು ಬ್ಯಾಟಿಂಗ್ ಮಾಡಿ ಬಹಳ ದಿನಗಳಾಗಿತ್ತು. ಅದರಲ್ಲಿ ಮತ್ತೆ 14 ದಿನಗಳ ಕ್ವಾರಂಟೈನ್ ಸಹಾಯಕ್ಕೆ ಬರಲಿಲ್ಲ,' ಎಂದಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಆರ್ 217 ರನ್ ಗುರಿ ನೀಡಿತ್ತು. ಆದರೆ ಸಿಎಸ್‌ಕೆ 200 ರನ್ ಬಾರಿಸಿ 16 ರನ್‌ನಿಂದ ಪರಾಭವಗೊಂಡಿತು.

ಐಪಿಎಲ್ ಸಲುವಾಗಿ ಯುಎಇಗೆ ತೆರಳಿದ್ದ ಸಿಎಸ್‌ಕೆ ತಂಡದಲ್ಲಿ ಇಬ್ಬರು ಆಟಗಾರರು ಸೇರಿ ಒಟ್ಟು 13 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಸಿಎಸ್‌ಕೆಗೆ ಒಂದು ವಾರ ಹೆಚ್ಚುವರಿ ಕ್ವಾರಂಟೈನ್ ವಿಧಿಸಲಾಗಿತ್ತು. ಇದರಿಂದಲೇ ತೊಂದರೆಯಾಯ್ತು ಎಂಬರ್ಥದಲ್ಲಿ ಧೋನಿ ಹೇಳಿಕೆ ನೀಡಿದ್ದಾರೆ.

Story first published: Wednesday, September 23, 2020, 15:35 [IST]
Other articles published on Sep 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+